ಶಿರಸಿ ತಾಲೂಕು ಮುಂಡಿಗೇಸರದ ಶ್ರೀಮತಿ ಸ್ವಾತಿ ಮತ್ತು ಜಯದೇವ ಬಳಗಂಡಿ ಇವರ ಪುತ್ರ ಡಾ.ಸುಮಂತ ಬಳಗಂಡಿ ಹಾಗೂ ಹೊನ್ನಾವರ ತಾಲೂಕು ಕರ್ಕಿ ಮೂಲದ ಸಾಗರ ನಿವಾಸಿಗಳಾದ ಡಾ.ನಳಿನ ಮತ್ತು ಡಾ.ರಾಮಚಂದ್ರ ಕೃಷ್ಣ ಭಾಗವತ್ ಇವರ ಪುತ್ರಿ ಡಾ.ಶ್ರೀಯಾ ಭಾಗವತ್ ಇವರ ವಿವಾಹವು ಸಾಗರದ ಈಡಿಗ ಸಭಾ ಭವನದಲ್ಲಿ ಇತ್ತೀಚೆಗೆ ನಡೆಯಿತು.
ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪನವರು, ಸಂಸದ ಬಿ.ವೈ.ರಾಘವೇಂದ್ರ , ಶಾಸಕ ಹಾಲಪ್ಪ ಹರತಾಳು ,ಭಾರತಿ ಶೆಟ್ಟಿ ಸೇರಿದಂತೆ ವಧೂ ವರರ ಕುಟುಂಬಗಳ ಆಪ್ತೇಷ್ಠರು ವಿವಾಹ ಮಹೋತ್ಸವದಲ್ಲಿ ಪಾಲ್ಗೊಂಡು ನೂತನ ವಧೂ ವರರಿಗೆ ಶುಭ ಹಾರೈಸಿದರು.
“ಸುಮಶ್ರೀ” ಉಪಯುಕ್ತ ಲೇಖನಗಳ ಕಿರು ಹೊತ್ತಿಗೆ ಕೊಡುಗೆ
ನಮ್ಮ ಸನಾತನ ಧರ್ಮದ ಆಚಾರ ವಿಚಾರಗಳು ಮೊಬೈಲ್ ಇಂಟರ್ನೆಟ್ ಯುಗದಲ್ಲಿ ಮರೆಯಾಗುತ್ತಿವೆ. ವಿವಾಹ ಸಂಸ್ಕಾರದ ಪ್ರತಿಯೊಂದು ಆಯಾಮವೂ ಅರ್ಥಗರ್ಭಿತವಾಗಿದ್ದು ಸರಿಯಾದ ವಿಧಾನದಲ್ಲಿ ಶಾಸ್ತ್ರೋಕ್ತವಾಗಿ ಆಚರಿಸಿದಾಗ ಮದುವೆಯ ಸಂಭೃಮಕ್ಕೆ ಹೆಚ್ಚು ಸಾರ್ಥಕತೆ ದೊರೆಯುತ್ತದೆ ಎನ್ನುವ ಉದ್ದೇಶ ಹೊತ್ತು ಈ ವಿವಾಹ ಸಂದರ್ಭದಲ್ಲಿ “ಸುಮಶ್ರೀ” ವಿವಾಹ ಸುವಿಚಾರ ಸೌರಭ ಎಂಬ ಕಿರುಹೊತ್ತಿಗೆಯನ್ನು ಬಿಡುಗಡೆಗೊಳಿಸಲಾಯಿತು.
ಡಾ.ಆರ್.ಕೆ.ಭಾಗವತ್ ಮತ್ತು ಡಾ.ನಳಿನ ಆರ್.ಭಾಗವತ್ ಇವರು ಈ ಕಿರುಹೊತ್ತಿಗೆಯ ಪ್ರಕಾಶಕರಾಗಿದ್ದು ಈ ವಿವಾಹ ಮಹೋತ್ಸವದಲ್ಲಿ ಪಾಲ್ಗೊಂಡ ಎಲ್ಲ ಅತಿಥಿಗಳಿಗೂ “ಸುಮಶ್ರೀ” ಕಿರುಹೊತ್ತಿಗೆಯನ್ನು ಉಡುಗೊರೆಯಾಗಿ ನೀಡಿದರು.
ಸಾಗರದ ಶ್ರೀ ಗಜಾನನ ಸಂಸ್ಕೃತ ಪಾಠಶಾಲೆಯ ಅಧ್ಯಾಪಕರಾಗಿರುವ ವಿದ್ವಾನ್ ಗಜಾನನ ಭಟ್ಟ ರೇವಣಕಟ್ಟಾ ಅವರ ಸಂಪಾದಕತ್ವದಲ್ಲಿ ವಿದ್ವಾನ್ ಉಮಾಕಾಂತ ಭಟ್ಟ ಕೆರೇಕೈ,ವಿದ್ವಾನ್ ನರಸಿಂಹ ಭಟ್ಟ ಬಡಗು ಬೆಂಗಳೂರು, ಪ್ರೊ.ಟಿ.ಎನ್.ಪ್ರಭಾಕರ, ಡಾ.ಮಧುಸೂದನ ಅಡಿಗ,ಹಾದಿಗಲ್ಲು ಲಕ್ಷ್ಮೀನಾರಾಯಣ, ಪ್ರೊ.ಸುಬ್ರಾಯ ವಿ.ಭಟ್ಟ (ಗುಂಜಗೋಡ) ಶೃಂಗೇರಿ,ಡಾ.ನಾಗೇಶ ಭಟ್ಟ ಕೆ.ಸಿ.,ಉಮ್ಮಚಗಿ,ವಿದ್ವಾನ್ ಪರಮೇಶ್ವರ ಭಟ್ಟ ಪುಟ್ಟನಮನೆ ಮುಂತಾದ ಲೇಖಕರಿಂದ ಹಲವಾರು ಉಪಯುಕ್ತ ಲೇಖನಗಳನ್ನೊಳಗೊಂಡ “ಸುಮಶ್ರೀ” ಯು ಸಂಗ್ರಹಾರ್ಹ ಕಿರುಹೊತ್ತಿಗೆಯಾಗಿದೆ.