ಕುಮಟಾ : ಇದೇ ಬರುವ ಡಿಸೆಂಬರ್ 22 ರಂದು ರಾಜ್ಯದ ಗ್ರಾಮ ಪಂಚಾಯತಿ ಚುನಾವಣೆಗೆ ನಡೆಯಲಿರುವ ಚುನಾವಣೆಗೆ ಕುಮಟಾ ತಾಲೂಕಿನ ಕಾಗಾಲ ಗ್ರಾಮ ಪಂಚಾಯತದ ಲೋಕೇಶ್ವರ ಹಿಣಿ ವಾರ್ಡನ ಸಾಮಾನ್ಯ ಮಹಿಳಾ ಕ್ಷೇತ್ರದ ಅಭ್ಯರ್ಥಿಯಾಗಿ ಕಣಕ್ಕಿಳಿದ ಚಿಕ್ಕ ವಯಸ್ಸಿನ ಎಂ ಎಸ್ಸಿ ಪದವೀಧರೆ ನಿಧಿ ಉಮೆಶ ಭಂಡಾರಿ ಇವರ ಸ್ಪರ್ಧೆಯು ಮಾಧ್ಯಮದಲ್ಲಿ ಅತಿ ಹೆಚ್ಚು ಪ್ರಸಾರ ವಾಗಿರುವ ವಿಷಯ ಆಗಿರುವಂತೆಯೇ ರಾಜ್ಯದ ಹೆಸರಾಂತ ಸುದ್ದಿವಾಹಿನಿ ದಿಗ್ವಿಜಯ ನ್ಯೂಸ್ ನಲ್ಲಿಯೂ ಇವಳ ಕುರಿತಾದ ವರದಿ ಪ್ರಕಟಗೊಂಡು ರಾಜ್ಯದ ಗಮನ ಸೆಳೆಯುವಲ್ಲಿ ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕು ಹಾಗೂ ಕಾಗಾಲ ಗ್ರಾಮ ಯಶಸ್ವಿಯಾಗಿದೆ. ಎಂ ಎಸ್ಸಿ ಫಿಜಿಕ್ಸ ಪದವಿಪಡೆದು ಉತ್ತಮ ಉದ್ಯೋಗ ದೊರೆಯುವ ವರೆಗೂ ಕಾಯದೇ ಎದುರಾದ ಪಂಚಾಯತ ಚುನಾವಣಾ ಅಖಾಡದಲ್ಲಿ ಪ್ರಬಲ ಎದುರಾಳಿಗಳ ಎದುರು ಖಾಡಾಖಾಡಿ ಹೋರಾಟ ನಡೆಸುತ್ತಿರುವ ನಿಧಿ ಕಾಗಾಲ ಗ್ರಾಮದಲ್ಲಿ ಎಲ್ಲರಮನೆ ಮಾತಾಗುತಿದ್ದಾಳೆ.ಇವಳ ಹೋರಾಟ ಮನೋಭಾವಕ್ಕೆ ದಿನೆ ದಿನೆ ಬೆಂಬಲ ಹೆಚ್ಚುತಿದ್ದು.ಈಕೆಯ ಎದುರಾಳಿಗಳೂ ಸಹ ಈಕೆಯ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುತಿದ್ದಾರೆ.
ಪಕ್ಷ ಬೇಧವಿಲ್ಲದೇ ಹಲವಾರು ಪ್ರಮುಖರು ನಿಧಿಗೆ ಶುಭಹಾರೈಸುತಿದ್ದಾರೆ.ಯುವ ಮತದಾರರು ನಿಧಿಯ ಬೆಂಬಲಕ್ಕೆ ನಿಂತರೆ ತನ್ನ ಸೌಜನ್ಯ ಹಾಗೂ ವಿಧೇಯತೆಯಿಂದ ಹಿರಿಯರ ಕಾಲಿಗೆರಗಿ ಮತ ಯಾಚಿಸುತ್ತಿರುವ ನಿಧಿ ತನ್ನ ಸ್ಪರ್ಧೆಯು ಜಾಗ್ರತಿಯ ಅಭಿಯಾನವಾಗಿದ್ದು ಮುಂದಿನ ದಿನಗಳಲ್ಲಿ ವಿದ್ಯಾವಂತರು ಆಡಳಿತದ ಭಾಗವಾಗಬೇಕು ಎಂಬ ಅಂಶವನ್ನು ಮತದಾರರಿಗೆ ಮನವರಿಕೆ ಮಾಡುತ್ತಿದ್ದಾರೆ.