ಕಾರವಾರ: ನಿಗಮ ಮಂಡಳಿ ಅಧ್ಯಕ್ಷ ರಾಜೇಂದ್ರ ನಾಯ್ಕ ನೇತ್ರತ್ವದಲ್ಲಿ ಗುರುವಾರರಂದು ಜಿಲ್ಲಾ ಉಸ್ತುವಾರಿ ಸಚಿವ ಆರ್ ವಿ ದೇಶಪಾಂಡೆ ಅವರನ್ನು ಸಾರ್ವಜನಿಕರು ಅವರ ಕಚೇರಿಯಲ್ಲಿ ಭೇಟಿಯಾದರು.
ನಂತರ ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ ಕಾರವಾರ ನಗರದ ಅಭಿವೃದ್ಧಿಗೆ ನಗರೋತ್ತಾನ ಅಡಿಯಲ್ಲಿ ಹಣ ಮಂಜೂರಿ ಮಾಡುವಂತೆ ಹಾಗೆ ನಗರಸಭೆ ಕಟ್ಟಡಕ್ಕೆ 150 ಆಗಿದೆ ಅದಕ್ಕೆ ಹಣ ಮಂಜೂರಿ ಮಾಡುವಂತೆ ಹಾಗೂ ನಗರಸಭೆಯಲ್ಲಿ ಸಿಬ್ಬಂದಿಗಳ ಕೊರತೆ ಬಗ್ಗೆ ಮನವಿ ಮಾಡಿದರು..
ಮನವಿ ಸ್ವೀಕರಿಸಿದ ಸಚಿವರು ಮಾತನಾಡಿ ಈಗಾಗಲೇ ಕಾರವಾರ ನಗರಸಭೆಗೆ 5 ಕೋಟಿ ಮಂಜೂರು ಆಗಿದೆ ಎಂದರು. ಹಾಗೇ ಸಿಬ್ಬಂದಿ ಕೊರತೆಯ ಬಗ್ಗೆನು ಸರಿ ಮಾಡುವಂತೆ ಹೇಳಿದರು..
ಈ ಸಂದರ್ಭದಲ್ಲಿ ರಾಜೇಂದ್ರ ಅಂಚೇಕರ್, ದಿಂಗಬರ ಶೇಟ್, ಪ್ರಭಾಕರ ಮಾಳ್ಸೇಕರ, ಕೆ.ಟಿ.ತಾಂಡೇಲ್ ಹಾಗೂ ನಗರಸಭೆಯ ಸ್ಥಾಯಿ ಸಮಿತಿಯ ಅಧ್ಯಕ್ಷ ವಿಠ್ಠಲ ಸಾಂವತ ಇದ್ದರು..

RELATED ARTICLES  ಉತ್ತರಕನ್ನಡದಲ್ಲಿ ಕೊರೋನಾ ಸ್ಪೋಟ : ಇಂದು ಬರೋಬ್ಬರಿ 169 ಜನರಿಗೆ ಪಾಸಿಟೀವ್..!