ಶಿರಸಿ: ಏಳು ವರ್ಷದ ಹಿಂದೆ ಕಟ್ಟಿದ ಮನೆಗೆ ನಂಬರ್ ನೀಡದೆ ಲಂಚ ನೀಡಬೇಕೆಂದು ಕಾಡುತ್ತಿದ್ದ, ನಗರದ ಜಾನ್ಮನೆ ಪಂಚಾಯತ್ ಅಧಿಕಾರಿ(ಪಿಡಿಓ)ಕೃಷ್ಣಪ್ಪ ಎಲ್ವಗಿ ಎಸಿಬಿ ಬಲೆಗೆ ಸಿಕ್ಕಿಬಿದ್ದ ಘಟನೆ ಇಲ್ಲಿನ ಜಾನ್ಮನೆ ಗ್ರಾಮ ಪಂಚಾಯತಿಯಲ್ಲಿ ನಡೆದಿದೆ.

ಸುಧೀಂದ್ರ ಹೆಗಡೆಯಿಂದ ಲಂಚ ಸ್ವೀಕಾರ ಮಾಡುತ್ತಿರುವಾಗ ಜಾನ್ಮನೆ ಪಿಡಿಓ ಕೃಷ್ಣಪ್ಪ ಎಸಿಬಿ ಬಲೆಗೆ ಸಿಕ್ಕಿ ಬಿದ್ದಿದ್ದಾರೆ. ಸಂಪಖಂಡ ಗ್ರಾಮದ ಸುಧೀಂದ್ರ ಹೆಗಡೆ 2004 ರಲ್ಲಿ ನಿರ್ಮಿಸಿದ್ದ ಮನೆಗೆ ನೋಂದಣಿ ಸಂಖ್ಯೆ ನೀಡಲು 15 ಸಾವಿರ ಲಂಚ ನೀಡುವಂತೆ ಕೇಳಿದ್ದ. ಹಣ ಕೊಡದಿದ್ದಕ್ಕೆ ಏಳು ವರ್ಷದಿಂದ ಸತಾಯಿಸಿದ್ದರು.

RELATED ARTICLES  ಭಟ್ಕಳದಲ್ಲಿ ಬಂಧಿಸಲ್ಪಟ್ಟ ಪಾಕ್ ಮಹಿಳೆಯ ಪತಿ ಸಾವು.

ಸುಧೀಂದ್ರ ಹೆಗಡೆ ದೂರಿನ ಅನ್ವಯ ಲಂಚ ಸ್ವೀಕರಿಸುವ ವೇಳೆ ಎಸಿಬಿ ಡಿ.ವೈ.ಎಸ್.ಪಿ ಶ್ರೀಕಾಂತ್ ನೇತ್ರತ್ವದಲ್ಲಿ ದಾಳಿ ನಡೆಸಿ ಹಣದ ಸಮೇತ ವಶಕ್ಕೆ ಪಡೆದಿದ್ದಾರೆ.ಕಾರವಾರ ಎಸಿಬಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES  ಕಾಂಕ್ರೀಟ್ ರಿಂಗ್ ಬಿದ್ದು ಮನೆಯ ಎದುರು ಆಟವಾಡುತ್ತಿದ್ದ ಪುಟ್ಟ ಮಗು ಸಾವು