ಕಾರವಾರ : ಅಂಕೋಲ ತಾಲೂಕಿನ ಬೆಂಳಬರ್ ದ ಸುರೇಶ್ ಕಾರ್ವಿ ಎಂಬುವವರಿಗೆ ಸೇರಿದ ಮತ್ಯ್ಯಾಂಜನೇಯ ಎಂಬ ಬೋಟ್ ತಾಂತ್ರಿಕ ಕಾರಣದಿಂದ ಭಟ್ಕಳದಿಂದ ಹತ್ತೊಂಬತ್ತು ನಾಟಿಕನ್ ಮೈಲುದೂರದಲ್ಲಿ ಅರಬ್ಬಿ ಸಮುದ್ರದಲ್ಲಿ ಮುಳುಗಡೆಯಾದ ಬಗ್ಗೆ ವರದಿಯಾಗಿದೆ.
ಬೋಟ್ ಸಂಪೂರ್ಣ ಮುಳುಗಡೆ ಆಗಿದ್ದರಿಂದ ಲಕ್ಷಾಂತರ ರುಪಾಯಿ ಹಾನಿಯಾಗಿದ್ದು ಸ್ಥಳಕ್ಕೆ ಕರಾವಳಿ ಕಾವಲುಪಡೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬೋಟ್ ನಲ್ಲಿ ಇದ್ದ ಆರು ಜನರನ್ನು ಸ್ಥಳೀಯ ಮೀನುಗಾರರು ರಕ್ಷಣೆ ಮಾಡಿದ್ದು ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ವಿಡಿಯೋ ಇಲ್ಲಿದೆ.
https://youtu.be/gcmvQSCg3GU