ಹೊನ್ನಾವರ : ಕೆರೆಮನೆ ಮೇಳದ ಘನ ಇತಿಹಾಸದೊಂದಿಗೆ ಬೆರೆತುಕೊಂಡಿದ್ದ. ಹಿರಿಯ ಕಲಾವಿದ ಮಣ್ಣಿಗೆ ತಿಮ್ಮಣ್ಣ ಯಾಜಿ’ಯವರು ಸ್ವರ್ಗಸ್ಥರಾಗಿದ್ದಾರೆ.

ಇವರು ಕೆರೆಮನೆಯ ಮೇಳದಲ್ಲಿ ಸುದೀರ್ಘ ಕಾಲ ಸೇವೆ ಸಲ್ಲಿಸಿದ್ದರು. ಅವರ ಅನೇಕ ಪಾತ್ರಗಳಲ್ಲಿ ಕಿರಾತ ಪಾತ್ರದ ಅವರ ವೇಷ ಭೂಷಣ, ಅಭಿನಯ ಮತ್ತು ಕಿರಾತಕ ಭಾಷೆ ವಿಶಿಷ್ಟವಾದುದ್ದಾಗಿತ್ತು. ಅನಿವಾರ್ಯ ಸಂದರ್ಭ ಬಂದಾಗ ಅವರು ಹಿಮ್ಮೇಳದ ಭಾಗವತಿಕೆಯನ್ನೂ ಮಾಡಿದ್ದು ಇದೆ.

RELATED ARTICLES  ಡಾ.ನಾಗರಾಜ ಭಟ್ ಕುಮಟಾ ಅಂಗೈಯಲ್ಲಿ ಆರೋಗ್ಯ ಕೃತಿ ಲೋಕಾರ್ಪಣೆ.

ಅವರಿಗೆ ಜ್ಯೋತಿಷ್ಯ ಜ್ಞಾನವೂ ಸ್ವಲ್ಪ ಮಟ್ಟಿಗೆ ಇತ್ತು . ಕಾಸರಕೋಡಿನಲ್ಲಿ ಇರುವಾಗ ಅವರು ಕವಡೆ ಹಾಕಿ ಅನೇಕರ ಅನೇಕ ಸಮಸ್ಯೆಗಳ ಪರಿಹರಿಸುತ್ತಿದ್ದರಂತೆ. ಅವರ ಸರಳತೆಗೆ , ಗುಣಸ್ವಭಾವಕ್ಕೆ ಅಲ್ಲಿನ ಜನರ ಪ್ರೀತ್ಯಾಧರ ಗಳಿಸಿದ್ದರು .

94ರ ವಯೋಸಹಜ ಬಳಲಿಕೆಯ ಹೊರತಾಗಿಯೂ ನಿನ್ನೆಯಷ್ಟೇ
ತಮ್ಮ ಮಿಮ್ಮಗನ ಹುಟ್ಟುಹಬ್ಬದ ನಿಮಿತ್ತ
ಮನೆಯಂಗಳದಲ್ಲೇ ನಡೆದ, ಖ್ಯಾತ ಕಲಾವಿದರನ್ನೊಳಗೊಂಡ ಯಕ್ಷಗಾನ ಪ್ರದರ್ಶನ ಸಂದರ್ಭದಲ್ಲಿ ಲವಲವಿಕೆಯಿಂದಲೇ ಪಾಲ್ಗೊಂಡಿದ್ದಲ್ಲದೇ ವೇದಿಕೆಯೇರಿ ಅತಿಥಿ/ಕಲಾವಿದರನ್ನು ಗೌರವಿಸಿ ಆಶೀರ್ವದಿಸಿದ್ದರು. ಪ್ರದರ್ಶನದ ನಂತರವೂ ಕಲಾವಿದರೊಂದಿಗೆ ಮಾತುಕತೆ ನಡೆಸಿದ್ದವರು.

RELATED ARTICLES  ಕುಮಟಾದಲ್ಲಿ ನಡೆಯಿತು ವನವಾಸಿಗರ ಸಮಸ್ಯೆ ಆಧಾರಿತ ಜಿಲ್ಲಾ ಸಮ್ಮೇಳನ

ಕೊನೆಯದಿನ ಕಂಡ ಸತ್ಯಹರಿಶ್ಚಂದ್ರ ಯಕ್ಷಗಾನದಿಂದ ಸಂತೃಪ್ತರಾದಂತೆ ಜೀವನದ ರಂಗಸ್ಥಳ ಬಿಟ್ಟು ನಡೆದುದು ಯೋಗಾಯೋಗ.