ಕಾರವಾರ: ಕಬ್ಬಿಣದ ರಾಡ್‌ನಿಂದ ಜ್ಯುವೆಲರಿಯ ಬಾಗಿಲು ಮುರಿದ ಕಳ್ಳರು,ಲಕ್ಷಾಂತರ ಮೌಲ್ಯದ ಬೆಳ್ಳಿಯ ಆಭರಣ ದೋಚಿದ ಘಟನೆ ತಾಲೂಕಿನಲ್ಲಿ ನಡೆದಿದೆ.

ಚಿನ್ನದ ಅಂಗಡಿಯೊoದಕ್ಕೆ ಕನ್ನ ಹಾಕಿದ ದುಷ್ಕರ್ಮಿಗಳು, ಮೊದಲು ಅಂಗಡಿಯ ಒಳಗಿದ್ದ ಸಿಸಿ ಕ್ಯಾಮರಾವರನ್ನು ತಿರುಗಿಸಿದ್ದಾರೆ. ಅಲ್ಲದೆ ಅದಕ್ಕೆ ಬಟ್ಟೆ ಕಟ್ಟಿ ತಾವು ಮಾಡುತ್ತಿರುವ ದುಷ್ಕೃತ್ಯ ಸೆರೆಯಾಗದಂತೆ ನೋಡಿಕೊಂಡು ಬುದ್ದಿವಂತಿಕೆ ಪ್ರಯೋಗ ಮಾಡಿದ್ದಾರೆ.

RELATED ARTICLES  ಉದಯ ಬಜಾರನಲ್ಲಿ ದೀಪಾವಳಿ ಪ್ರಯುಕ್ತ ಗ್ರಾಹರಿಗೆ ಸಿಗುತ್ತಿರುವ ಅದ್ಭುತ ಆಫರ್ ಗಳನ್ನು ಮಿಸ್ ಮಾಡ್ಕೋಬೇಡಿ!

ಕಬ್ಬಿಣದ ರಾಡ್‌ನಿಂದ ಬಾಗಿಲು ಮುರಿದು ಒಳ ಪ್ರವೇಶಿಸಿದ ಕಳ್ಳರ ಗುಂಪು ಅಂಗಡಿಯಲ್ಲಿದ್ದ ಬೆಳ್ಳಿಯ ವಸ್ತುಗಳನ್ನು ದೋಚಿದೆ. ಆದರೆ, ಕಳ್ಳರು ಎಷ್ಟೆ ಚಾಲಾಕಿಯಾಗಿದ್ದರು, ಹಲವು ಮಹತ್ವದ ಸುಳಿವು ಪೊಲೀಸರಿಗೆ ಸಿಕ್ಕಿದೆ‌ ಎನ್ನಲಾಗಿದೆ.

RELATED ARTICLES  Модульные Детские Сады И Школы Лстк

ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಪೊಲೀಸರು ಅಂಗಡಿಯ ಸುತ್ತಮುತ್ತದ ಪ್ರದೇಶವನ್ನು ಪರಿಶೀಲಿಸಿದ್ದು, ಇಲ್ಲಿಯ ಸಿಸಿಟಿವಿ ಫುಟೇಜ್ ಕಲೆಹಾಕಿದ್ದಾರೆ. ಈ ವೇಳೆ ಕಳ್ಳರ ಕುರಿತು ಮಹತ್ವದ ಸುಳಿವು ದೊರೆತಿದೆ ಎನ್ನಲಾಗಿದೆ.