ಕಾರವಾರ : ಸರ್ಕಾರದ ಆದೇಶದಂತೆ ಜನವರಿ 1 ರಿಂದ ಎಸ್.ಎಸ್.ಎಲ್.ಸಿ ಮತ್ತು ದ್ವಿತಿಯ ಪಿಯುಸಿ ತರಗತಿಗಳನ್ನು ಪ್ರಾರಂಭಿಸಲಾಗುವುದೆಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯ ನಿರ್ವಾಹಕಧಿಕಾರಿ ಎಮ್.ಪ್ರಿಯಾಂಗಾ ಅವರು ತಿಳಿಸಿದರು.

ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಬುಧವಾರ ಪತ್ರಿಕಾ ಗೊಷ್ಟಿ ನಡೆಸಿ ಮಾತನಾಡಿ, ರಾಜ್ಯಾಂದತ ಜನವರಿ 1 ರಿಂದ ಸರ್ಕಾರಿ ಶಾಲೆ ಮತ್ತು ಕಾಲೇಜನ್ನು ಪುನಾರಂಭಿಸಲು ನಿರ್ಧರಿಸಲಾಗಿರುವುದರಿಂದ ನಮ್ಮ ಉತ್ತರ ಕನ್ನಡ ಜಿಲ್ಲೆಯಲ್ಲಿ ಕೂಡಾ ಎಸ್.ಎಸ್.ಎಲ್.ಸಿ ಮತ್ತು ದ್ವಿತಿಯ ಪಿಯುಸಿ ತರಗತಿಗಳನ್ನು ಪ್ರಾರಂಭಿಸಲಾಗುತ್ತಿದ್ದು, ವಿದ್ಯಾರ್ಥಿಗಳಿಗೆ ಹಾಜಾರಾತಿ ಕಡ್ಡಾಯವಾಗಿರುವುದಿಲ್ಲಾ ಎಂದು ಹೇಳಿದರು.

ಆಸಕ್ತ ವಿದ್ಯಾರ್ಥಿಗಳು ತಮ್ಮ ಪಾಲಕರಿಂದ ನಮ್ಮ ಮಕ್ಕಳು ತರಗತಿಗೆ ಹಾಜರಾಗಲು ನಮ್ಮ ಅಭ್ಯಂತರವಿಲ್ಲವೆಂಬ ಅನುಮತಿ ಪತ್ರದೊಂದಿಗೆ ತಗರಿಗಳಿಗೆ ಹಾಜರಾಗಬಹುದಾಗಿರುತ್ತದೆ.. ಕೇವಲ ಮೂರು ಪಿರೆಡ್‌ಗಳನ್ನು ತೆಗೆದುಕೊಳ್ಳುವ ಮೂಲಕ ಅರ್ಧ ದಿನದ ಶಾಲೆಯನ್ನು ನಡೆಸಲಾಗುವುದು. ವಿದ್ಯಾರ್ಥಿಗಳಿಗೆ ಮಧ್ಯಾಹ್ನ ಬೀಸಿಯುಟ ವ್ಯವಸ್ಥೆ ಇರುವುದಿಲ್ಲಾ. ಬಿಸಿರಿನ್ನು ಒದಗಿಸಲಾಗುತ್ತಿದ್ದು ವಿದ್ಯಾರ್ಥಿಗಳು ಇಚ್ಛಿಸಿದ್ದಲ್ಲಿ ತಾವೆ ತರಬಹುದಾಗಿರುತ್ತದೆ. ರೇಶನ್‌ನ್ನು ವಿದ್ಯಾರ್ಥಿಗಳ ಮನೆಗೆ ವಿತರಿಸಲಾಗುವುದೆಂದು.

RELATED ARTICLES  ಭಾರತ ರಾಷ್ಟ್ರಕ್ಕೆ ರಾಮನೇ ಚಕ್ರವರ್ತಿ : ರಾಘವೇಶ್ವರ ಶ್ರೀ

6 ರಿಂದ 9 ನೇ ತರಗತಿ ವಿದ್ಯಾರ್ಥಿಗಳಿಗೂ ಕೂಡಾ ಜನವರಿ 1 ರಿಂದ ವಿದ್ಯಾಗಮನ ಪ್ರಾರಂಭಿಸಲಾಗುತ್ತಿದ್ದು ಎಸ್,ಒ,ಪಿ ಯನ್ನು ಕಡ್ಡಾಯವಾಗಿ ಪಾಲಿಸಲು ಸೂಚಿಸಲಾಗುವುದು, ವಿದ್ಯಾಗಮನಕ್ಕೆ ವಿದ್ಯಾರ್ಥಿಗಳು ಹಾಜರಾಗಲು ಅನೂಕುಲವಾಗುವಂತೆ ೧೫ ವಿದ್ಯಾರ್ಥಿಗಳಂತೆ ಒಂದೊಂದು ತಂಡಗಳನ್ನು ರಚಿಸಿಕೊಂಡು, ಪ್ರತಿ ತಂಡಕ್ಕೂ ಒಂದು ದಿನ ಬಿಟ್ಟು ಒಂದು ದಿನ ಪಾಠ ಭೋಧನೆ ಮಾಡಲಾಗುವುದು. ಪ್ರತಿ ಶಾಲಾ ಕಾಲೇಜ್‌ಗೂ ಒಂದು ಕೋಠಡಿಯನ್ನು ಐಸೋಲೆಶನ್ ಮಾಡಲಾಗುವುದು. ಇದರಿಂದ ತುರ್ತು ಸಂದಂರ್ಭದಲ್ಲಿ ವಿದ್ಯಾರ್ಥಿಗಳಿಗೆ ಚಿಕಿತ್ಸೆ ಮತ್ತು ವಿಶ್ರಾಂತಿ ಪಡೆಯಲು ಅನಕೂಲವಾಗುವುದು. ಶಿಕ್ಷಕರಿಗೆ ಆರ್.ಟಿ.ಪಿ.ಸಿ.ಆರ್ ಪರೀಕ್ಷೆ ಕಡ್ಡಾಯವಾಗಿರುತ್ತದೆ ಇದಕ್ಕಾಗಿ ಎಲ್ಲಾ ಸರ್ಕಾರಿ ಶಾಲಾ, ಕಾಲೇಜುಗಳ ಶಿಕ್ಷಕರಿಗೆ ಕ್ಯಾಂಪ್ ಮಾಡಿ ಆರೋಗ್ಯ ತಪಾಸಣೆ ಮಾಡಿದ ನಂತರವೇ ಶಾಲಾ ಕಾಲೇಜಿಗೆ ಹಾಜರಾಗಲು ಸೂಚಿಸಲಾಗುವುದು. ಆಯಾ ಶಾಲಾ ಕಾಲೇಜುಗಳ ಪ್ರಾಂಶುಪಾಲರಿಗೆ ಮತ್ತು ಎಸ್.ಡಿ.ಎಮ್.ಸಿ (ಶಾಲಾ ಮೇಲುಸ್ತುವಾರಿ ಸಮಿತಿ) ಮುಖ್ಯಸ್ಥರಿಗೆ ತಮ್ಮ ತಮ್ಮ ಶಾಲೆ ಮತ್ತು ಕಾಲೇಜಗಳನ್ನು ಸ್ವಚ್ಛಗೊಳಿಸಿ, ಸ್ಯಾನಿಟೈಸ್ ಮಾಡುವಂತೆ ಈಗಾಗಲೇ ಸೂಚನೆ ನೀಡಲಾಗಿದೆ. ಈ ಎಲ್ಲಾ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳುತ್ತಿರುವುದರಿಂದ ಪೋಷಕರು ಭಯಬೀತರಗದೆ ತಮ್ಮ ಮಕ್ಕಳನ್ನು ಶಾಲಾ, ಕಾಲೇಜುಗಳಿಗೆ ಕಳಿಸಬಹುದಾಗಿರುತ್ತದೆ. ಮತ್ತು ಶಿಕ್ಷಕರು ಕೂಡಾ ನಿರ್ಭಿತರಾಗಿ ಭೋದನೆ ಮಾಡಬಹುದೆಂದರು.

RELATED ARTICLES  ಭಾಗವತರಿಗೆ ಭಾವಾರ್ಪಣೆ ~ ಹೊಸ್ತೋಟ ಭಾಗವತರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ

ಈ ಸಂದರ್ಭದಲ್ಲಿ ಕಾರವಾರ ಶೈಕ್ಷಣಿಕ ಜಿಲ್ಲೆಯ ಡಿ.ಡಿ.ಪಿ.ಐ ಹರೀಶ್ ಗಾಂವಕರ್ ಮತ್ತು ಶಿರಸಿ ಡಿ.ಡಿ.ಪಿ.ಐ ದಿವಾಕರ್ ಶೆಟ್ಟಿ ಮತ್ತು ಡಿ.ಡಿ.ಪಿ.ಯು ಎಸ್.ಎನ್.ಬಗಲಿ ಅವರು ಉಪಸ್ಥಿತರಿದ್ದರು.