ಕುಮಟಾ: ಇತ್ತೀಚೆಗೆ ನಿಧನರಾದ ಹಿರಿಯ ಲೆಕ್ಕ ಪರಿಶೋಧಕ ಜಿ.ಎಸ್.ಕಾಮತರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಇಲ್ಲಿಯ ನಾದಶ್ರೀ ಕಲಾಕೇಂದ್ರದಲ್ಲಿ ರೋಟರಿ ಕ್ಲಬ್ ಕುಮಟಾ ಆಯೋಜಿಸಿದ ಶ್ರದ್ಧಾಂಜಲಿ ಸಭೆಯಲ್ಲಿ ‘ಸನದು ಲೆಕ್ಕಿಗನ ಶ್ರದ್ಧಾ-ಸಾಧನೆ’ ಎಂಬ ಕಿರುಹೊತ್ತಿಗೆಯನ್ನು ಜಿ.ಎಸ್.ಕಾಮತರ ಹಿರಿಯ ಸಹೋದರಿ ವೀಣಾ ಪೈ ಅನಾವರಣಗೊಳಿಸಿದರು.

ರೊಟೋಲೈಟ್ ಪತ್ರಿಕೆಯ ಸಂಪಾದಕರಾದ ಎನ್.ಆರ್.ಗಜು ಸಂಪಾದಕತ್ವದಲ್ಲಿ ಹೊರತರಲಾದ ಪುಸ್ತಕದಲ್ಲಿ ಜಿ.ಎಸ್.ಕಾಮತರ ಬದುಕಿನ ಸಂಕ್ಷಿಪ್ತ ಸಾಧನೆಗಳ ಒಳನೋಟ, ಚಿತ್ರಗಳು, ಗಣ್ಯರ ಶ್ರದ್ಧಾಂಜಲಿ ಸಂದೇಶಗಳು ಸೇರಿವೆ.

ಭಾವಚಿತ್ರಕ್ಕೆ ಪುಷ್ಪನಮನ ನಮನ ಸಲ್ಲಿಸಿದ ಗಣ್ಯರಲ್ಲಿ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ಕಾರ್ಯದರ್ಶಿ ಮುರಲೀಧರ ಪ್ರಭು ಮಾತನಾಡಿ, ರೋಟರಿಗೆ ಕಾಮತರ ಕುಟುಂಬದ ಅನ್ಯೋನ್ಯತೆಯನ್ನು ಪ್ರಸ್ತಾಪಿಸುತ್ತಾ, ಜಿ.ಎಸ್.ಕಾಮತ ಹೆಸರನ್ನು ಚಿರಸ್ಥಾಯಿಯಾಗಿಸುವ ನಿಟ್ಟಿನಲ್ಲಿ ರೋಟರಿಯ ಯಾವುದಾದರೂ ಒಂದು ಯೋಜನೆಗೆ ಅವರ ಹೆಸರನ್ನಿಡಬೇಕೆಂದು ಸೂಚಿಸಿದರು. ರೋಟರಿ ಸದಸ್ಯರಾದ ಡಾ.ದೀಪಕ ಡಿ. ನಾಯಕ ‘ಕಾಮತರು ಅತ್ಯಂತ ಶಾಂತ ಸ್ವಭಾವದ, ಸಮರ್ಥ, ದೂರದೃಷ್ಠಿಯುಳ್ಳ ಅಪರೂಪದ ಚಾಣಾಕ್ಷರಾಗಿದ್ದರು. ಯಾವುದೇ ಸಮಸ್ಯೆಗೂ ಸುಲಲಿತವಾದ ದಾರಿ ತೋರಿಸುವಲ್ಲಿ ಅಗ್ರಗಣ್ಯರಾಗಿದ್ದರು. ಯಾರೊಬ್ಬರ ಮನಸ್ಸನ್ನೂ ನೋಯಿಸುತ್ತಿರಲಿಲ್ಲ. ರಾಜ್ಯವಷ್ಟೇ ಅಲ್ಲ ರಾಷ್ಟ್ರಮಟ್ಟದಲ್ಲೂ ಇವರ ಅನುಯಾಯಿಗಳು, ಕಕ್ಷಿದಾರರು, ಪಕ್ಷಗಾರರು ಪರಿಹಾರಕಂಡುಕೊಳ್ಳುತ್ತಿದ್ದರು’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

RELATED ARTICLES  ಚಂದಾವರಕ್ಕೆ ತಲುಪಿದ ಹನುಮನ ಪಲ್ಲಕ್ಕಿ.

ಅವರ ಸಹಪಾಠಿಯಾಗಿದ್ದ ರೋಟರಿ ಸರ್ವೀಸ್ ಸೊಸೈಟಿ ಅಧ್ಯಕ್ಷರಾದ ಅರುಣ ಉಭಯಕರ, ಮಹಾಲಸಾ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಎಂ.ಬಿ.ಪೈ, ಕೃಷ್ಣ ಮಿಲ್ಕ್ಸ್‍ನ ಫೌಂಡರ್ ಪುತ್ತು ಪೈ, ಹೊನ್ನಾವರ ರಾಮಕ್ಷತ್ರಿಯ ಸಂಘದ ಅಧ್ಯಕ್ಷ ಎಂ.ಡಿ.ನಾಯ್ಕ ಮೊದಲಾದವರು ಶ್ರದ್ಧಾಂಜಲಿ ಅರ್ಪಿಸಿ ಮೃತರ ಗುಣಗಾನಗೈದರು. ಪ್ರಾರಂಭದಲ್ಲಿ ಅನೆಟ್ ಶ್ರೀ ರಾವ್ ಪ್ರಾರ್ಥಿಸಿದರು. ರೋಟರಿ ಕ್ಲಬ್ ಅಧ್ಯಕ್ಷ ಶಶಿಕಾಂತ ಕೋಲೇಕರ ಸ್ವಾಗತಿಸಿದರು. ಜೈ ವಿಠ್ಠಲ ಕುಬಾಲ, ಎನ್.ಆರ್.ಗಜು ಹಾಗೂ ಕಾರ್ಯದರ್ಶಿ ಅತುಲ್ ಕಾಮತ ಕಾರ್ಯಕ್ರಮ ನಿರ್ವಹಿಸಿದರು. ಕುಟುಂಬದ ಸದಸ್ಯರು, ಅನೇಕ ಗಣ್ಯರು, ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

RELATED ARTICLES  ವಾಟಾಳ್ ಪಕ್ಷದ ಜಿಲ್ಲಾಧ್ಯಕ್ಷನಿಂದ ಪೋಲಿಸರ ಮೇಲೆ ಆರೋಪ