ಯಲ್ಲಾಪುರ: ಹಿರಿಯ ಸಾಹಿತಿಗಳು, ಪತ್ರಕರ್ತರೂ, ವಿಜಯವಾಣಿ ದಿನಪತ್ರಿಕೆಯ ಅಂಕಣಕಾರರಾಗಿದ್ದ ನಾ.ಸು. ಭರತನಹಳ್ಳಿ ಶುಕ್ರವಾರ (84) ವಿಧಿವಶರಾಗಿದ್ದಾರೆ.
ಯಲ್ಲಾಪುರ ತಾಲೂಕಿನ ಭರತನಹಳ್ಳಿ ನಿವಾಸಿಯಾಗಿದ್ದ ಅವರು, ಶ್ರೀ ಸ್ವರ್ಣವಲ್ಲೀ ಸಂಸ್ಥಾನ ಸೇರಿದಂತೆ ವಿವಿಧ ಧಾರ್ಮಿಕ, ಶಿಕ್ಷಣ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದರು. ನಾ ಸು ಭರತನಹಳ್ಳಿಯವರ ನಿಧನಕ್ಕೆ ಗಣ್ಯರು ಕಂಬನಿ ಮಿಡಿದಿದ್ದಾರೆ.