ಕುಮಟಾ : ತಾಲೂಕ ಭಗವದ್ಗೀತಾ ಅಭಿಯಾನದ ಗೀತಾಜಯಂತಿ ಕಾರ್ಯಕ್ರಮವು ಹೆರವಟ್ಟಾದ ವರದ ವಿಠ್ಠಲ ದೇವಸ್ಥಾನದಲ್ಲಿ ನಡೆಯಿತು.ಈ ಸಂದರ್ಭದಲ್ಲಿ ಭಗವದ್ಗೀತೆಯ 18 ಅಧ್ಯಾಯದ ಶ್ಲೋಕಗಳನ್ನು ಪಠಣ ಮಾಡಲಾಯಿತು.

ಸಭಾ ಕಾರ್ಯಕ್ರಮದಲ್ಲಿ ಕರ್ಮಯೋಗದ ಕುರಿತು ಸಂಸ್ಕೃತ ಉಪನ್ಯಾಸಕರಾದ ಶ್ರೀದೇವಿ ಭಟ್ ಮಾತನಾಡಿ, “ನಮ್ಮ ದಿನನಿತ್ಯದ ಜೀವನದಲ್ಲಿ ನಮ್ಮ ಕೆಲಸ ಕಾರ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು, ನಮ್ಮ ಕರ್ಮವನ್ನು ಮಾಡುವಾಗ ಹಿಂಜರಿಕೆ, ಭಯ, ಆಲಸ್ಯ, ಇರಬಾರದು ಶ್ರದ್ಧಾಭಕ್ತಿಯಿಂದ ಕಾರ್ಯನಿರ್ವಹಿಸಿದರೆ ಯಶಸ್ಸು ಖಂಡಿತ . ಶ್ರೀ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಮಹಾ ಸ್ವಾಮಿಗಳು, ಕಳೆದ 14 ವರ್ಷಗಳಿಂದ ಭಗವದ್ಗೀತಾ ಅಭಿಯಾನವನ್ನು ಯಶಸ್ವಿಯಾಗಿ ಕೈಗೊಳ್ಳುತ್ತಿದ್ದಾರೆ. ನಮಗೆಲ್ಲ ಶ್ರೀಗಳ ಅಭಯವಿದೆ, ಅದಕ್ಕಾಗಿ ಭಗವದ್ಗೀತೆಯ ಪಠಣ ಕಾರ್ಯ ಸಾಂಗವಾಗಿ ಸಾಗಿದೆ . ಭಗವದ್ಗೀತಾ ಅಭಿಯಾನದಿಂದ ನಮ್ಮ ಸುತ್ತಲೂ ಉತ್ತಮ ಕಂಪನವಾಗಿದೆ. ನೈತಿಕತೆಯ ಪುನರುತ್ಥಾನ, ಸಾಮಾಜಿಕ ಸಾಮರಸ್ಯ, ವ್ಯಕ್ತಿತ್ವವಿಕಸನ ಮತ್ತು ರಾಷ್ಟ್ರೀಯ ಭಾವೈಕ್ಯತೆಯನ್ನು ಸಮಾಜದಲ್ಲಿ ಕಾಣಲು ಭಗವದ್ಗೀತಾ ಅಭಿಯಾನದಿಂದ ಸಾಧ್ಯವಾಗಿದೆ. ಶ್ರೀಗಳ ಸಂಕಲ್ಪ ಯಶಸ್ವಿಯಾಗುತ್ತಿದೆ “ಎಂದರು.

ಇದೇ ಸಂದರ್ಭದಲ್ಲಿ ಕುಮಟಾ ತಾಲೂಕು ಭಗವದ್ಗೀತೆ ಅಭಿಯಾನ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಪ್ರಾಥಮಿಕ ವಿಭಾಗದ ಕಂಠಪಾಠ ಸ್ಪರ್ಧೆಯಲ್ಲಿ, ಶ್ರೇಯಾ ಗಿರೀಶ ಹೆಬ್ಬಾರ್ ಪ್ರಥಮ, ನಂದಿನಿ ನಾರಾಯಣ ಶಾನಭಾಗ ದ್ವಿತೀಯ, ಹಾಗೂ ನಂದಿನಿ ನಾಗು ಗೌಡ ತೃತೀಯ ಸ್ಥಾನ ಪಡೆದರು.

RELATED ARTICLES  ಬಿಗಿ ಬಂದೋಬಸ್ತ ನಡುವೆ ಶಿರಸಿಯಲ್ಲಿ ಟಿಪ್ಪು ಜಯಂತಿ ಆಚರಣೆ: ಮೆರವಣಿಗೆ ನಡೆಸಿ ಘೋಷಣೆ ಕೂಗಲು ಯತ್ನಿಸಿದವರ ಬಂಧನ.

ಪ್ರೌಢಶಾಲಾ ವಿಭಾಗದ ಕಂಠಪಾಠ ಸ್ಪರ್ಧೆಯಲ್ಲಿ ಸ್ಮೃತಿ ಲಕ್ಷ್ಮೀನಾರಾಯಣ ಶಾನಭಾಗ ಪ್ರಥಮ, ನಂದಿತಾ ಸುರೇಶ್ ಬಟ್ಟ ದ್ವಿತೀಯ, ಹಾಗೂ ನಮೃತ ಗಜಾನನ ಶಾನಭಾಗ ತೃತೀಯ ಸ್ಥಾನ ಪಡೆದರು.

ಪದವಿಪೂರ್ವ ಕಾಲೇಜು ವಿಭಾಗದ ಕಂಠಪಾಠ ಸ್ಪರ್ಧೆಯಲ್ಲಿ ಶ್ರೇಯ ವಿಷ್ಣು ಶಾನಭಾಗ್ ಪ್ರಥಮ, ಶಿಲ್ಪ ಡಿ ಭಟ್ ದ್ವಿತೀಯ ಸ್ಥಾನ ಪಡೆದರು. ಭಾಷಣ ಸ್ಪರ್ಧೆಯಲ್ಲಿ ಪ್ರಾಥಮಿಕ ವಿಭಾಗದಿಂದ ಸ್ನೇಹ ಉದಯ ನಾಯ್ಕ್ ಪ್ರಥಮ, ಕೃತಿಕಾ ಮಹೇಶ ಭಟ್ಟ ದ್ವಿತೀಯ, ಶ್ರೇಯಾ ದಿನೇಶ ಶೇಟ್ ತೃತೀಯ ಸ್ಥಾನ ಪಡೆದರು. ಪ್ರೌಢಶಾಲಾ ವಿಭಾಗದ ಕಂಠಪಾಠ ಸ್ಪರ್ಧೆಯಲ್ಲಿ ಕುಮಾರಿ ಮುಕ್ತ ಪ್ರಥಮ, ಮಹಾಲಸಾ ಪೈ ದ್ವಿತೀಯ, ಭೂಮಿಕ ಸತೀಶ್ ತೃತೀಯ ಸ್ಥಾನ ಪಡೆದರು. ಎಲ್ಲ ವಿದ್ಯಾರ್ಥಿಗಳು ಪ್ರಶಸ್ತಿ ಪತ್ರ ಹಾಗೂ ಪಟ್ಟಿಗಳನ್ನು ಬಹುಮಾನವಾಗಿ ಪಡೆದುಕೊಂಡರು.

RELATED ARTICLES  ಉದ್ಘಾಟನೆ‌ಗೊಂಡಿತು ಕೆರೆ: ಜೀವ ಜಲದ‌ಬಗ್ಗೆ ನಡೆಯಿತು ಚಿಂತನ ಮಂಥನ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉತ್ತರಕನ್ನಡ ಜಿಲ್ಲಾ ಭಗವದ್ಗೀತಾ ಅಭಿಯಾನದ ಅಧ್ಯಕ್ಷರಾದ ಮುರಳಿಧರ್ ಪ್ರಭು ಅವರು ವಹಿಸಿದ್ದರು. “ಮಹಾಭಾರತದ ಯುದ್ದಕ್ಕೆ ದುಷ್ಟರಾದ ದುರ್ಯೋಧನ, ದುಶ್ಯಾಸನ ಹಾಗೂ ಶಕುನಿ ಮುಖ್ಯ ಕಾರಣಿಕರ್ತರು. ದುಷ್ಟರ ಸಂಹಾರಕ್ಕಾಗಿ ಭಗವಂತನ ಕೃಪೆ ಪಾಂಡವರಿಗೆ ದೊರಕಿತು, ಸತ್ಯ ಧರ್ಮಕ್ಕೆ ಜಯವಾಯಿತು.
ನಮ್ಮ ಸಮಾಜದಲ್ಲಿಯೂ ಅನೇಕ ದುಷ್ಟರಿದ್ದಾರೆ ಅವರ ಸಂಖ್ಯೆಗಳೇ ಹೆಚ್ಚು, ಆದರೆ ಸಮಾಜವನ್ನು ಒಳ್ಳೆಯ ದಾರಿಯಲ್ಲಿ ನಡೆಸುವ ಸಜ್ಜನರು ಕೆಲವರಿದ್ದಾರೆ. ಸಜ್ಜನರು ತಮ್ಮ ಕಾರ್ಯವನ್ನು ಎಂದಿಗೂ ನಿಲ್ಲಿಸಬಾರದು ಸಮಾಜ ಉತ್ತಮವಾಗಿರಲು ಒಳ್ಳೆಯವರ ಗುಣನಡತೆ, ಅವರ ಕಾರ್ಯಗಳು ಸಾಕಾಗುತ್ತದೆ “ಎಂದರು. “ಹೆರವಟ್ಟಾ ಮಾತ್ರ ಮಂಡಳಿಯವರು ಅಚ್ಚುಕಟ್ಟಾಗಿ ಕಾರ್ಯಕ್ರಮ ನಿರ್ವಹಿಸಿದ್ದಾರೆ “ಎಂದರು.

ಭಗವದ್ಗೀತಾ ಅಭಿಯಾನ ಸಮಿತಿಯ ಕಾರ್ಯದರ್ಶಿ ಆನಂದ ವೈ ನಾಯ್ಕ ಸ್ವಾಗತಿಸಿದರು. ಜಯಾ ಶಾನಭಾಗ್ ವಂದಿಸಿದರು. ಕಾರ್ಯಕ್ರಮದಲ್ಲಿ ಸುಧಾ ಶಾನಭಾಗ್, ಮಹಾಲಕ್ಷ್ಮಿ ಹೆಗಡೆ, ಮಹಾಬಲೇಶ್ವರ ಭಟ್, ಗಣೇಶ ಭಟ್ ಮುಂತಾದವರು ಉಪಸ್ಥಿತರಿದ್ದರು.