ಶಿರಸಿ: ಪ್ರೀತಿಸಿ ಮದುವೆಯಾಗಿದಕ್ಕೆ ಗಂಡನ ಮನೆಯಿಂದ ತನ್ನ ಮಗಳನ್ನು ತಾಯಿಯೇ ಅಪಹರಣ ಮಾಡಿರುವ ಕುರಿತು ಶಿರಸಿ ಹೊಸ ಮಾರುಕಟ್ಟೆ ಠಾಣೆಯಲ್ಲಿ ದೂರು ದಾಖಲಾಗಿದೆ.
ತಾಲೂಕಿನ ರುತಿಕಾ ಎಂಬಾಕೆ ಬಸವೇಶ್ವರ ನಗರದ ಮಣಿಕಂಠ ಎನ್ನುವವನನ್ನು ಪ್ರೀತಿಸಿ ಮದುವೆಯಾಗಿದ್ದಳು.ಇದನ್ನು ವಿರೋಧಿಸಿದ್ದ ಯುವತಿಯ ತಾಯಿ ರೂಪಾ ಶಿರ್ಸಿಕರ್ ಶುಕ್ರವಾರ ಬೆಳಿಗ್ಗೆ ಮೂರು ಜನ ಯುವಕರೊಂದಿಗೆ ಬಸವೇಶ್ವರ ನಗರದ ರುತಿಕಾ ಮನೆಗೆ ಏಕಾಏಕಿ ದಾವಿಸಿ, ಮನೆಯಲ್ಲಿದ್ದವರಿಗೆಲ್ಲ ಪೆಪ್ಪರ್ ಸ್ಪ್ರೇ ಮುಖಕ್ಕೆ ಎರಚಿ ಮಗಳನ್ನು ಆಕೆಯ ಗಂಡನ ಎದುರು ತಾನು ತಂದಿದ್ದ ಕಾರಿನಲ್ಲಿ ಅಪಹರಿಸಿ ಕರೆದೊಯ್ದಿದ್ದಾಳೆ.
ಈ ಕುರಿತು ಶಿರಸಿ ಮಾರುಕಟ್ಟೆ ಠಾಣೆಯಲ್ಲಿ ಮಣಿಕಂಠ ಅವರು ಪತ್ನಿ ಅಪಹರಣದ ಬಗ್ಗೆ ದೂರು ನೀಡಿದ್ದು, ಪೋಲಿಸರು ತನಿಖೆ ಕೈಗೊಂಡಿದ್ದಾರೆ.