ಕಾರವಾರ : ಕೊರೋನಾ ರೂಪಾಂತರವಾಗಿ ಭಯಾನಕ ಎಂಬಂತೆ ಬಿಂಬಿತವಾಗುತ್ತಿರುವ ಸುದ್ದಿ ಇದೀಗ ಎಲ್ಲೆಡೆ ಸದ್ದು ಮಾಡುತ್ತಿದೆ.

ಉತ್ತರ ಕನ್ನಡ ಜಿಲ್ಲೆಯ 14 ಜನರು ಬ್ರೀಟನ್‌ನಿಂದ ಇಲ್ಲಿಯವರೆಗೆ ಹಿಂತಿರುಗಿದ್ದು, ಇವರ ಪರೀಕ್ಷೆಯನ್ನು ಕೂಡ ಬೆಂಗಳೂರಿನ ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಯಲ್ಲಿ ನಡೆಸಲಾಗಿದೆ.

ಆದರೆ ಜನತೆಗೆ ಸಮಾಧಾನದ ಸುದ್ದಿಯಿದ್ದು 14 ಜನರಲ್ಲಿ 12 ಜನರಿಗೆ ಕೊರೋನಾ ನೆಗೆಟಿವ್ ಬಂದಿದ್ದು, ಇನ್ನು ಇಬ್ಬರ ವರದಿ ಬರಬೇಕಾಗಿದೆ.

RELATED ARTICLES  ಕಾರವಾರ ಮಹಿಳಾ ಸ್ವೀಕಾರ ಕೇಂದ್ರದಲ್ಲಿ ಗೀತಾ ಪಠಣ ಮತ್ತು ಉಪನ್ಯಾಸ ಕಾರ್ಯಕ್ರಮ ಸಂಪನ್ನ

ರೂಪಾಂತರಿತ ಕೊರೋನಾ ಪತ್ತೆ ಸ್ಥಳೀಯ ಪ್ರಯೋಗಾಲಯದಲ್ಲಿ ಲಭ್ಯವಿಲ್ಲದ ಕಾರಣಕ್ಕೆ ವಿದೇಶದಿಂದ ಬಂದವರಲ್ಲಿ ಒಂದು ವೇಳೆ ರೂಪಾಂತರಿತ ಕೊರೋನಾ ಸೋಂಕು ಪತ್ತೆಯಾದರೆ, ಅವರ ಸಂಪರ್ಕದಲ್ಲಿ ಬರುವವರ ಗಂಟಲಿ ದ್ರವದ ಮಾದರಿಯನ್ನು ಕೂಡ ಬೆಂಗಳೂರಿನ ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಗೆ ಕಳಿಸಬೇಕಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ.

ಇಂದು ಜಿಲ್ಲೆಯಲ್ಲಿ ಇಂದು 13 ಕರೊನಾ ಕೇಸ್ ದಾಖಲಾಗಿದೆ. ಇಂದಿನ ಹೆಲ್ತ್ ಬುಲೆಟಿನ್ ಪ್ರಕಾರ ಯಲ್ಲಾಪುರದಲ್ಲಿ 4, ಕುಮಟಾ 2, ಸಿದ್ದಾಪುರ 2, ಶಿರಸಿ 4, ಕಾರವಾರದಲ್ಲಿ ಒಂದು ಕೇಸ್ ದೃಢಪಟ್ಟಿದೆ.

RELATED ARTICLES  ವಿಜೃಂಭಣೆಯಿಂದ ನಡೆದ ”ಒಕ್ಕಲು ಉತ್ಸವ”

ಕುಮಟಾ ತಾಲೂಕಿನಲ್ಲಿ ಇಂದು ಎರಡು ಕರೊನಾ ಸೊಂಕಿತ ಪ್ರಕರಣ ದಾಖಲಾಗಿದೆ. ತಾಲೂಕಿನ ಗೋಕರ್ಣದ ಚೌಡಗೇರಿಯಲ್ಲಿ ಎರಡು ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ. ಗೋಕರ್ಣದ ಚೌಡಗೇರಿಯ 47 ವರ್ಷದ ಪುರುಷ, 46 ವರ್ಷದ ಪುರುಷನಲ್ಲಿ ಸೋಂಕು ಕಾಣಿಸಿಕೊಂಡಿದೆ.