ಬೆಂಗಳೂರು: ರಾಜ್ಯ ವಿಧಾನಪರಿಷತ್ ಉಪಸಭಾಪತಿ ಧರ್ಮೇಗೌಡ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸೋಮವಾರ ರಾತ್ರಿ ಚಿಕ್ಕಮಗಳೂರು ಜಿಲ್ಲೆ ಗುಣಸಾಗರ ಬಳಿ ಸೋಮವಾರ ರಾತ್ರಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದು, ಮಂಗಳವಾರ ಬೆಳಗಿನ ಜಾವ 1.30ರ ಹೊತ್ತಿಗೆ ಅವರ ಶವ ಸಿಕ್ಕಿದೆ.

ಸೋಮವಾರ ಸಂಜೆ ಕಾರಿನಲ್ಲಿ ಗುಣಸಾಗರದ ಬಳಿ ತೆರಳಿದ ಅವರು ನಂತರ ಕಾರು ಚಾಲಕನನ್ನು ಕಳಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಎಸ್.ಎಲ್. ಧರ್ಮೇಗೌಡ ಅವರು ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಸದೃಢ ಕುಟುಂಬದ ಹಿನ್ನೆಲೆಯವರು. ಅವರ ಕುಟುಂಬ ರಾಜಕೀಯವಾಗಿ ಶಕ್ತಿಶಾಲಿಯಾಗಿತ್ತು. ಆರ್ಥಿಕವಾಗಿಯೂ ಅವರು ಒಳ್ಳೆಯ ಸ್ಥಿತಿಯಲ್ಲಿದ್ದರು. ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನ ಮಟ್ಟದಿಂದ ವಿವಿಧ ಸ್ತರಗಳ ರಾಜಕೀಯದಲ್ಲಿ ಅನುಭವಿ ಎನಿಸಿದ್ದರು. ನಿನ್ನೆ ಚಿಕ್ಕಮಗಳೂರಿನ ಕಾರ್ಯಕ್ರಮವೊಂದರಲ್ಲಿ ಸಂತೋಷದಿಂದಲೇ ಅವರು ಪಾಲ್ಗೊಂಡರೆಂದು ಪ್ರತ್ಯಕ್ಷದರ್ಶಿಗಳು ಹೇಳುತ್ತಿದ್ಧಾರೆ.

RELATED ARTICLES  ಶವಯಾತ್ರೆಗೆ ತಣ್ಣೀರೆರಚಿದ ಪೊಲೀಸರು, ದೀಪಕ್ ರಾವ್ ಶವ ಸ್ವಗ್ರಾಮಕ್ಕೆ 'ರಹಸ್ಯ' ರವಾನೆ?

ನಿನ್ನೆ ತಡರಾತ್ರಿ ಕಡೂರು ತಾಲೂಕು ಬಳಿ ರೈಲ್ವೆ ಹಳಿಯಲ್ಲಿ ಅವರ ರುಂಡ ಮುಂಡ ಬೇರ್ಪಟ್ಟ ದೇಹ ಪತ್ತೆಯಾಗಿದೆ. ಅವರು ಪತ್ನಿ ಮಮತಾ, ಮಗ ಸೋನಾಲ್, ಮಗಳು ಸೋನಾಲಿ ಅವರನ್ನು ಅಗಲಿದ್ದಾರೆ. ಸಖರಾಯಪಟ್ಟಣದಿಂದ ಸಂಜೆ 6:30ಕ್ಕೆ ಖಾಸಗಿ ಡ್ರೈವರ್ ಜೊತೆ ಕಾರಿನಲ್ಲಿ ಹೊರಟ ಅವರು ಕಡೂರು ತಾಲೂಕು ಗುಣಸಾಗರ ಬಳಿ ಕಾರು ನಿಲ್ಲಿಸಿದ್ದಾರೆ. ತಮ್ಮಎಸ್ಕಾರ್ಟ್ ಸಿಬ್ಬಂದಿಯನ್ನು ಅಲ್ಲಿಯೇ ಬಿಟ್ಟು ಖಾಸಗಿ ಡ್ರೈವರ್ ಜೊತೆ ಅವರು ಹೊರಟಿದ್ದರು. ಒಬ್ಬ ವ್ಯಕ್ತಿಯ ಜೊತೆ ಸ್ವಲ್ಪ ಕೆಲಸ ಇದ್ದು ಹೋಗಿ ಬರುತ್ತೇನೆ ಎಂದು ಹೇಳಿ ಹೋದರೆನ್ನಲಾಗಿದೆ.

RELATED ARTICLES  ಬೀಚ್ ನಲ್ಲಿ ಕಣ್ಮರೆಯಾದ ವಿದ್ಯಾರ್ಥಿಯ ಮೃತದೇಹ ಪತ್ತೆ

ಇತ್ತೀಚೆಗೆ ವಿಧಾನಪರಿಷತ್​ನಲ್ಲಿ ನಡೆದ ಗಲಾಟೆ ಘಟನೆ ಧರ್ಮೇಗೌಡ ಅವರ ಮನಸಿಗೆ ಘಾಸಿ ತಂದಿತ್ತು. ಸಭಾಪತಿ ಪೀಠದ ಮೇಲೆ ಕುಳಿತಿದ್ದ ಅವರನ್ನ ಕಾಂಗ್ರೆಸ್ ಸದಸ್ಯರು ಎಳೆದಾಡಿದ್ದರು. ಇದು ಅವರಿಗೆ ಬಹಳ ನೋವು ತಂದಿತ್ತು. ತಮ್ಮ ಆಪ್ತವಲಯದಲ್ಲಿ ಸಾಕಷ್ಟು ನೋವು ತೋಡಿಕೊಂಡಿದ್ದರು. ಡೆತ್​ನೋಟ್​ನಲ್ಲಿ ಅವರು ಈ ವಿಚಾರವನ್ನು ಪ್ರಸ್ತಾಪ ಮಾಡಿ, ಘಟನೆಯಿಂದ ಬಹಳ ನೋವಾಗಿತ್ತು ಎಂದಿದ್ಧಾರೆ. ಡೆತ್ ನೋಟ್​ನಲ್ಲಿ ತಮ್ಮ ಪತ್ನಿ, ಮಗ ಮತ್ತು ಮಗಳ ಕ್ಷಮೆ ಕೂಡ ಅವರು ಯಾಚಿಸಿದ್ಧಾರೆ.