ಶಿರಸಿ: ದಿ ತೋಟಗಾರ್ಸ್ ಕೋ- ಆಪರೇಟಿವ್ ಸೇಲ್ ಸೊಸೈಟಿ ಲಿ., ಶಿರಸಿ ಇವರ ಸಂಯುಕ್ತ ಆಶ್ರಯದಲ್ಲಿ ಹಿರಿಯ ಸಹಕಾರಿ, ಟಿಎಸ್ಎಸ್ ಅಧ್ಯಕ್ಷರಾಗಿರುವ ಶಾಂತಾರಾಮ ಹೆಗಡೆಯ ಜೀವನ- ಸಾಧನೆಯ ಪುಸ್ತಕ ‘ಸಹೃದಯಿ’ ಲೋಕಾರ್ಪಣೆ ಹಾಗೂ ಸಂಘದ ನಿಷ್ಠಾವಂತ ಹಿರಿಯ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮ ಟಿ.ಎಸ್.ಎಸ್ ಸೇಲ್ ಯಾರ್ಡಿನಲ್ಲಿ ನಡೆಯಲಿದೆ.
ನಗರದ ಟಿ.ಎಸ್.ಎಸ್ ಸೇಲ್ ಯಾರ್ಡಿನಲ್ಲಿ ಡಿ.29 ರ ಮಂಗಳವಾರ ಮಧ್ಯಾಹ್ನ 3.30 ಗಂಟೆಯಿಂದ ಕಾರ್ಯಕ್ರಮ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಮಾಜಿ ಶಾಸಕ ಸಚಿವ ಆರ್.ವಿ ದೇಶಪಾಂಡೆ, ಕೆ.ಆರ್.ಎಂ ಶಿವಮೊಗ್ಗದ ಅಧ್ಯಕ್ಷ, ಹಿರಿಯ ಸಹಕಾರಿ ಎಚ್.ಎಸ್.ಮಂಜಪ್ಪ ಸೊರಬ ಉಪಸ್ಥಿತರಿರುವರು. ಈ ಸಂದರ್ಭದಲ್ಲಿ ದಿ ತೋಟಗಾರ್ಸ್ ಕೋ- ಆಪರೇಟಿವ್ ಸೇಲ್ ಸೊಸೈಟಿಯ ಅಧ್ಯಕ್ಷ, ಉಪಾಧ್ಯಕ್ಷ, ಪ್ರಧಾನ ವ್ಯವಸ್ಥಾಪಕ, ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿರುವರು. ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರು ಕೊರೊನಾ ನಿಯಮ ಪಾಲಿಸಿ ಮಾಸ್ಕ್ ಧರಿಸಬೇಕೆಂದು ತಿಳಿಸಿದ್ದಾರೆ.