ಬೆಂಗಳೂರು: ಮುಸ್ಲಿಮರ ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪದ ಪ್ರಕರಣದಿಂದ ಸಂಸದ ಅನಂತಕುಮಾರ ಹೆಗಡೆಗೆ ಬಿಗ್ ರಿಲೀಫ್ ದೊರೆತಿದ್ದು, ಅವರನ್ನು ಆ ಪ್ರಕರಣದಿಂದ ವಿಮೋಚನೆ ಮಾಡಲಾಗಿದೆ.

ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ತೀರ್ಪು ನೀಡಿದ್ದು ‘ಇಸ್ಲಾಂ ಧರ್ಮ ಜಗತ್ತಿಗೆ ಒಂದು ಬಾಂಬ್’ ಎಂದು ಹೆಗಡೆ ಹೇಳಿಕೆ ನೀಡಿದ್ದರು ಎಂಬ ಆರೋಪ ಕೇಳಿ ಬಂದಿತ್ತು. 2016 ರಲ್ಲಿ ಶಿರಸಿಯಲ್ಲಿ ಹೇಳಿಕೆ ನೀಡಿದ ಆರೋಪ ಕೇಳಿ ಬಂದಿತ್ತು.

RELATED ARTICLES  ಶ್ರೀ ಉಪಾಸನ ದೇವ ಹಾಗೂ ಪರಿವಾರ ದೇವರುಗಳ ಪೂರ್ಣಕಲಾವೃದ್ಧಿ ಕಾರ್ಯಕ್ರಮ ಸಂಪನ್ನ.

ಮುರಾದ್ ಹುಸೇನ್ ಎಂಬುವರು ದೂರು ನೀಡಿದ್ದರು. ಧಾರ್ಮಿಕ ಭಾವನೆಗೆ ಧಕ್ಕೆ ತರುವ ಉದ್ದೇಶವಿರಲಿಲ್ಲ, ಉದ್ದೇಶ ಪೂರ್ವಕವಾಗಿ ಹೇಳಿಕೆ ನೀಡಿಲ್ಲವೆಂದು ಹೆಗಡೆ ಪರ ವಕೀಲರು ವಾದ ಮಂಡಿಸಿದ್ದರು. ಅನಂತಕುಮಾರ್ ಹೆಗಡೆ ಪರ ವಕೀಲ ಸಂತೋಷ್ ನಾಗರಾಳೆ ವಾದ ಮಂಡಿಸಿದ್ದರು. ವಿಶೇಷ ಕೋರ್ಟ್ ಜಡ್ಜ್ ನ್ಯಾ.ತ್ಯಾಗರಾಜ ಎನ್ ಇನವಳ್ಳಿ ತೀರ್ಪು ನೀಡಿದ್ದು ಉತ್ತರ ಕನ್ನಡದ ಸಂಸದರಿಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ.

RELATED ARTICLES  ಸಾಧಕರನ್ನು ಗುರುತಿಸಿ ಗೌರವಿಸಿದ ಕುಮಟಾ ಲಯನ್ಸ್ ಕ್ಲಬ್