ಕುಮಟಾ: ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಶಿಕ್ಷಕ ಹಾಗೂ ನಿರೂಪಕ ರವೀಂದ್ರ ಭಟ್ಟ ಸೂರಿಯವರು ಇಂದು ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ.
ಇಂದು ನಡೆದ ಅಧ್ಯಕ್ಷರ ಆಯ್ಕೆಯ ಚುನಾವಣೆಯಲ್ಲಿ ಪ್ರತಿಸ್ಪರ್ಧಿ ಕಿರಣ ನಾಯ್ಕ ಅವರನ್ನು 9-5 ಮತಗಳಿಂದ ಸೋಲಿಸಿ ರವೀಂದ್ರ ಭಟ್ಟ ಸೂರಿಯವರು ಅಧ್ಯಕ್ಷರಾಗಿ ಆಯ್ಕೆಯಾದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಸಂಘಕ್ಕೆ ಕುಮಟಾದಿಂದ ಆಯ್ಕೆಯಾದ ಆನಂದು ಗಾವ್ಕರ್ ಅಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ತಮ್ಮ ಹಿಂದಿನ ಸ್ಥಾನವನ್ನು ಭದ್ರವಾಗಿಸಿಕೊಂಡರು.
ಪ್ರಧಾನ ಕಾರ್ಯದರ್ಶಿಯಾಗಿ ಅನಿಲ ದೇಶಭಂಡಾರಿ, ಉಪಾಧ್ಯಕ್ಷರಾಗಿ ಕೃಷ್ಣಮೂರ್ತಿ ನಾಯಕ ಮತ್ತು ಶೈಲಾ ಮಡಿವಾಳ, ಖಜಾಂಚಿ ಪ್ರಹಲ್ಲಾದ ಮಾಸ್ಕೇರಿ ಇತರೇ ಹುದ್ದೆಗಳಿಗೆ ರಾಜೇಶ್ವರಿ ಹೆಗಡೆ, ಅಹಲ್ಯಾ ಹೆಗಡೆ, ಕಲ್ಪನಾ ನಾಯಕ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ರಾಜೇಂದ್ರ ಭಟ್ಟ ಅವರು ಚುನಾವಣಾ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು.