ಕುಮಟಾ ಗ್ರಾ.ಪಂ ಕ್ಷೇತ್ರ
ಕುಮಟಾ: ಹನೇಹಳ್ಳಿ ಗ್ರಾ.ಪಂ ವ್ಯಾಪ್ತಿಯ ಬಂಕಿಕೊಡ್ಲದ ಹಿಂದುಳಿದಬಾ ವರ್ಗದ ಕ್ಷೇತ್ತದಿಂದ ಶಶಿಕಲಾ ಗೌಡ 112 ಮತ ಪಡೆದು ಹಾಗೂ ಸಾಮಾನ್ಯ ಕ್ಷೇತ್ರದಿಂದ 207 ಮತ ಪಡೆದು ಮನೋಹರ ಗೌಡ ಜಯಗಳಿಸಿದ್ದಾರೆ.
ದೇವಗಿರಿ ಗ್ರಾ.ಪಂ ವ್ಯಾಪ್ತಿಯ ಕಡೇಕೋಡಿ ವಾರ್ಡಿನಿಂದ ಅಭ್ಯರ್ಥಿ ರಮೇಶ ನಾಗಪ್ಪ ಪಟಗಾರ 239 ಮತ ಪಡೆದು ಜಯಗಳಿಸಿದ್ದಾರೆ.
ಮೂರೂರು ಗ್ರಾ.ಪಂ ವ್ಯಾಪ್ತಿಯ ಕರ್ಕಿಮಕ್ಕಿ ವಾರ್ಡಿನ ಸಾಮಾನ್ಯ ಕ್ಷೇತ್ರದಿಂದ ಅನಿತಾ ನಾರಾಯಣ ಕಲ್ಲಗದ್ದೆ ೪೧೪ ಮತ ಪಡೆದು ಜಯಗಳಿಸಿದ್ದಾರೆ.
ಗೋಕರ್ಣ ಗ್ರಾ.ಪಂ ವ್ಯಾಪ್ತಿಯ ಕೋಟಿ ತೀರ್ಥ ವಾರ್ಡಿನ ಬಿಜೆಪಿ ಬೆಂಬಲಿತ ಅಭ್ಯರ್ಥಿ ಪ್ರಭಾಕರ ಪ್ರಸಾದ ಭಟ್ಟ ಸತತ ೬ ನೆಯ ಬಾರಿಗೆ ಜಯಗಳಿಸಿದ್ದಾರೆ. ಅಲ್ಲದೇ ನಾಗರತ್ನಾ ಹಾವಗೋಡಿ, ವನಿತಾ ಗೌಡ ಜಯಗಳಿಸಿದ್ದಾರೆ.
ಶಿರಸಿ ಗ್ರಾ.ಪಂ ಕ್ಷೇತ್ರ
ಕುಳವೆ ಗ್ರಾಮ ಪಂಚಾಯತ ವ್ಯಾಪ್ತಿಯ ಬರೂರು ವಾರ್ಡಿನಿಂದ ಸ್ಪರ್ಧಿಸಿದ್ದ ಪತ್ರಕರ್ತ ಸಂದೇಶ್ ಭಟ್ ಬೆಳಕಂಡ 262 ಮತಗಳನ್ನು ಪಡೆದು ವಿಜಯ ಸಾಧಿಸಿದ್ದಾರೆ.
ಇಟಗುಳಿ ಪಂಚಾಯತ್ ವ್ಯಾಪ್ತಿಯ ಕಲಗಾರ ವಾರ್ಡ್ ನಿಂದ ಸ್ಪರ್ಧಿಸಿದ್ದ ರಮೇಶ ಗೋಪಾಲಕೃಷ್ಣ ನಾಯ್ಕ 173 ಮತಗಳನ್ನು ಪಡೆದು ಗೆಲುವು. ವಾನಳ್ಳಿ ಪಂಚಾಯತ್ ವ್ಯಾಪ್ತಿಯ ಮುಸ್ಕಿ ವಾರ್ಡಿನಿಂದ ಸ್ಪರ್ಧಿಸಿದ್ದ ಗೀತಾ ಮಂಜುನಾಥ ಸಿದ್ದಿ 174 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಯಡಳ್ಳಿ ಪಂಚಾಯತ್ ವ್ಯಾಪ್ತಿಯ ಹೆಡಿಗೆಮನೆ ವಾರ್ಡ್ ನಿಂದ ಸ್ಪರ್ಧಿಸಿದ್ದ ಮಧುಕರ ಶೆಟ್ಟಿ ಗೆಲುವು ಸಾಧಿಸಿದ್ದಾರೆ. ಭೈರುಂಬೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಭೈರುಂಬೆ ವಾರ್ಡಿನಿಂದ ಸ್ಪರ್ದಿಸಿದ್ದ ಕಿರಣ ಭಟ್ 197 ಮತಗಳಿಂದ ಗೆಲುವು ಸಾಧಿಸಿದ್ದಾರೆ, ಇಟಗುಳಿ ಪಂಚಾಯತ್ ವ್ಯಾಪ್ತಿಯ ಇಟಗುಳಿ ವಾರ್ಡ್ ನಿಂದ ಸ್ಪರ್ಧಿಸಿದ್ದ ಶ್ರೀಕಲಾ ನಾಯ್ಕ 239 ಮತಗಳಿಂದ ಹಾಗೂ ಶ್ರೀಪತಿ ಹೆಗಡೆ 274 ಮತಗಳಿಂದ ಗೆಲುವು ಸಾಧಿಸಿದ್ದಾರೆ. ಹುಣ್ಸೇಕೊಪ್ಪ ಗ್ರಾಪಂ ವ್ಯಾಪ್ತಿಯ ಸಣ್ಣಳ್ಳಿ ವಾರ್ಡಿನಿಂದ ಸ್ಪರ್ಧಿಸಿದ್ದ ಪುರುಷೋತ್ತಮ ಜ ಕಲ್ಮನೆ 331 ಮತಗಳಿಂದ ಗೆಲುವು ಸಾಧಿಸಿದ್ದಾರೆ. ಬನವಾಸಿ ಪಂಚಾಯತ್ ವ್ಯಾಪ್ತಿಯ 2ನೇ ವಾರ್ಡಿನಿಂದ ಅಲ್ತಾಫ್ ಚೌದ್ರಿ 244 ಮತಗಳಿಂದ ಹಾಗೂ ರಹಮದ್ 202 ಮತಗಳಿಂದ ಗೆಲುವು. ಸೋಂದಾ ಗ್ರಾ ಪಂ ವ್ಯಾಪ್ತಿಯ ಸೊಂದಾ ವಾರ್ಡಿನಿಂದ ಸ್ಪರ್ಧಿಸಿದ್ದ ಗಜಾನನ ನಾಯ್ಕ 367 ಹಾಗೂ ಮಂಜುನಾಥ ಭಂಡಾರಿ 355 ಗೆಲುವು. ಭಾರತಿ ಅಶೋಕ ಚನ್ಯಯ್ಯ 197 ಗೆಲುವು, ಮಠದೇವಳ ರಾಮಚಂದ್ರ ಹೆಗಡೆ, ಕುಮದ್ವತಿ ಗುಡಿಗಾರ್, ಮಮತಾ ಜೈನ್, ವೆಂಕಟ್ರಮಣ ಪೂಜಾರಿ ಗೆಲುವು, ಕುಳವೆ ಪಂಚಾಯತ್ ಗಂಗಾಧರ್ ನಾಯ್ಕ ಗೆಲುವು ಸಾಧಿಸಿದ್ದಾರೆ.
ಮತ ಎಣಿಕೆ ಕಾರ್ಯ ನಡೆಯುತ್ತಿದ್ದು, ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ.
ಯಲ್ಲಾಪುರ ತಾಲೂಕಿನ ಈವರೆಗಿನ ವಿಜೇತರ ಯಾದಿ
ವಜ್ರಳ್ಳಿ ಗ್ರಾ.ಪಂಕ್ಕೆ ಕಳಚೆಯಿಂದ ಸ್ಪರ್ಧಿಸಿದ ಗಜಾನನ ಭಟ್, ವೀಣಾ ಗಾಂವ್ಕಾರ, ಆನಗೋಡ ಗ್ರಾ.ಪಂದಲ್ಲಿ ಕೆ.ಟಿ.ಹೆಗಡೆ, ರಾಮಕೃಷ್ಣ ಅಳವೆಗದ್ದೆ, ನಂದೊಳ್ಳಿ ಗ್ರಾ.ಪಂಕ್ಕೆ ಸ್ಪರ್ಧಿಸಿದ್ದ ದೇವರಗದ್ದೆ- ರಾಮಕೃಷ್ಣ ಭಾಗ್ವತ, ಭವಾನಿ ಸಿದ್ದಿ, ಇಡಗುಂದಿ ಗ್ರಾ.ಪಂಕ್ಕೆ ಅರಬೈಲ್ ವಿಶ್ವೇಶ್ವರ ಹೆಗಡೆ, ಬೀರಗದ್ದೆ ನಾಗವೇಣಿ ಗೌಡ, ಕೊಡ್ಲಗದ್ದೆ ಮುತ್ತವ್ವ ಶಿರಹಟ್ಟಿ, ಕಂಪ್ಲಿ ಗ್ರಾ.ಪಂಕ್ಕೆ ಸ್ಪರ್ಧೆಸಿದ ಚಿಕ್ಕೊತ್ತಿಯ ಸದಾಶಿವ ಚಿಕ್ಕೊತ್ತಿ, ರೇಣುಕಾ ಬೋವಿಡ್ಡರ್, ಕುಂದರಗಿ ಗ್ರಾ.ಪಂಕ್ಕೆ ಸ್ಪರ್ಧಿಸಿದ್ದ ರಾಮಕೃಷ್ಣ ಹೆಗಡೆ, ಕಿರವತ್ತಿ ಗ್ರಾ.ಪಂಕ್ಕೆ ಸ್ಪರ್ಧಿಸಿದ್ದ ರೆಹಮತ್ ಅಬ್ಬಿಗೇರಿ, ಕರಿಬಸಪ್ಪ ಉಪ್ಪಿನ, ತೆರೆಜಾ ಫರ್ನಾಂಡೀಸ್, ರೇಣುಕಾಪ ಹೋಳಿ, ಜಾನು ಪಾಂಡ್ರಮೀಸೆ, ಸಂಗೀತಾ ಕೊಕರೆ, ಹನುಮವ್ವ ಭಜಂತ್ರಿ, ಮದನೂರು ಗ್ರಾ.ಪಂಕ್ಕೆ ಸ್ಪರ್ಧಿಸಿದ್ದ ಡೊಮಗೇರಿ- ಲಕ್ಕು ಗಾವಡೆ, ಪ್ರಭಾ ನಾಯ್ಕ, ನಂದೊಳ್ಳಿ ಗ್ರಾ.ಪಂಕ್ಕೆ ಸ್ಪರ್ಧಿಸಿದ್ದ ನಂದೊಳ್ಳಿ- ನರಸಿಂಹ ಕೋಣೆಮನೆ, ನಾಗರತ್ನಾ ನಾಯ್ಕ, ಚಂದಗುಳಿ ಗ್ರಾ.ಪಂದಿಂದ ಹುತ್ಕಂಡ- ಆರ್.ಎಸ್.ಭಟ್, ನೇತ್ರಾವತಿ ಹೆಗಡೆ, ರೇಣುಕಾ ಸಿದ್ದಿ, ಹಾಸಣಗಿ ಗ್ರಾ.ಪಂದಿಂದ ಶಿರನಾಲಾ- ಪರಮೇಶ್ವರ ಸಿದ್ದಿ, ಎಮ್.ಕೆ ಭಟ್ಟ ಯಡಳ್ಳಿ, ಉಮ್ಮಚಗಿ ಗ್ರಾ.ಪಂಕ್ಕೆ ಸ್ಪರ್ಧಿಸಿದ್ದ ಚವತ್ತಿ ಗಂಗಾ ಹೆಗಡೆ, ಶಿವರಾಯ ಪೂಜಾರಿ, ಕಣ್ಣಿಗೇರಿ ಗ್ರಾ.ಪಂ ದಿವ್ಯಾ ಮರಾಠಿ, ಜ್ಯೋತಿ ಸಿದ್ದಿ, ತಿಮ್ಮಾ ಮರಾ ವಿಜಯ ಸಾಧಿಸಿದ್ದಾರೆ.
ಈವರೆಗೆ ಇವರೆಲ್ಲ ವಿಜಯದ ನಗೆ ಬೀರಿದ್ದು, ಮುಂದಿನ ಮತ ಎಣಿಕೆ ಕಾರ್ಯ ನಡೆಯುತ್ತಿದೆ.