ಹೊನ್ನಾವರ :- ಹಡಿನಬಾಳದ ರಾಗಶ್ರೀ ಮತ್ತು ಸಾಸ್ಕೃತಿಕ ಸಂಸ್ಥೆ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ಕಾರವಾರ ಇವರ ಆಶ್ರಯದಲ್ಲಿ ಸಂಗೀತ ಸಂಧ್ಯಾ ಕಾರ್ಯಕ್ರಮವನ್ನು ಶ್ರೀ ವಿಷ್ಣುಮೂರ್ತಿದೇವಾಲಯ ಹಡಿನಬಾಳದಲ್ಲಿ ನಡೆಸಲಾಯಿತು.

ಉಪನ್ಯಾಸಕರಾದ ಕೆ.ವಿಹೆಗಡೆ ಅಧ್ಯಕ್ಷತೆ ವಹಿಸಿ ಮಾತನಾಡಿ ಕಲೆಗಳು ಮಾನವನ ಹೃದಯದಲ್ಲಿ ಭಾವನೆಯನ್ನು ಅರಳಿಸಿ ಸಂಸ್ಕಾರವoತರನ್ನಾಗಿ ಮಾಡುತ್ತದೆ. ಅಲ್ಲದೆ ಕಲೆಗಳ ಮೂಲಕ ಭಾರತೀಯ ಸಂಸ್ಕೃತಿ ಜೀವಂತವಾಗಿದೆ. ಅಂತಹ ಕಾರ್ಯವನ್ನು ಕನ್ನಡ ಸಂಸ್ಕೃತಿ ಇಲಾಖೆ ನಡೆಸಿಕೊಂಡು ಹೋಗುತ್ತಿರುವುದನ್ನು ಕೆ.ವಿಹೆಗಡೆಯವರು ಶ್ಲಾಘೀಸಿದರು. ಮುಖ್ಯ ಅತಿಥಿಗಳಾದ ಜಗಧೀಶ ರಾವ್ ಕೆನರಾ ಬ್ಯಾಂಕ್ ಹೊನ್ನಾವರ ಮಾತನಾಡಿ ಸಂಗೀತ ನಾಟ್ಯ ಕಲೆಗಳು ಬದುಕಿಗೆ ಶಾಂತಿ ಸಮಾಧಾನ ನೀಡುತ್ತದೆ. ಅಂತ ಶ್ರೇಷ್ಠ ಕಾರ್ಯವನ್ನು ರಾಗಶ್ರೀ ಗ್ರಾಮೀಣ ಭಾಗದಲ್ಲಿ ಕಳೆದ ೧೯ ವರ್ಷಗಳಿಂದ ನಿರಂತರವಾಗಿ ಮಾಡುತ್ತಿರುವುದು ಶ್ಲಾಘನೀಯ ಎಂದು ನುಡಿದರು.

RELATED ARTICLES  ಹದಿಹರೆಯದ ಸಮಸ್ಯೆಗಳಿಗೆ ಎದೆಗುಂದಬೇಡಿ- ಬೀರಣ್ಣ ನಾಯಕ

ಸುಗಮ ಸಂಗೀತ ಕಾರ್ಯಕ್ರಮದಲ್ಲಿ ಸಹನಾ ಶಾನಭಾಗ ರಂಜಿತಾ ನಾಯ್ಕ, ಸೌಮ್ಯ ಶೇಟ್ ಹೊನ್ನಾವರ ಹಾಗೂ ಅಂಕಿತಾ ಭಟ್ಟ ಇವರುಗಳು ಭಾವಗೀತೆ ಹಾಗೂ ಭಕ್ತಿಗೀತೆ ಭಜನ್‌ಗಳನ್ನು ಸುಂದರವಾಗಿ ಪ್ರಸ್ತುತ ಪಡಿಸಿದರು. ಇವರಿಗೆ ಸರಸ್ವತಿ ಅಯ್ಯಂಗಾರ ತಬಲಾ ಸಾಥ್‌ನ್ನು ಹರಿಶ್ಚಂದ್ರ ನಾಯ್ಕ ಹಾರ್ಮೋನಿಯಂ ಸಾಥ್‌ನ್ನ ನೀಡಿದರು. ನಂತರ ನಡೆದ ಶಾಸ್ತೀಯ ಸಂಗೀತ ಕಾರ್ಯಕ್ರಮದಲ್ಲಿ ಡಾ|| ಮಂಜುನಾಥ ಭಟ್ಟ ಅಲೇಖ ಹೊನ್ನಾವರ ಅವರು ರಾಗ ಗಾವತಿಯನ್ನು ಸುಂದರವಾಗಿ ಪ್ರಸ್ತುತ ಪಡಿಸಿ ನಂತರ ಭಜನೆಗಳನ್ನು ಹಾಡಿ ಕಾರ್ಯಕ್ರಮ ಕಳೆಗಟ್ಟುವಂತೆ ಮಾಡಿದರು.

RELATED ARTICLES  ಶಿರಸಿಯಲ್ಲಿ ಕಳ್ಳರ ಕೈ ಚಳಕ: ದೇವಾಲಯದ ಹುಂಡಿಗೆ ಬಿತ್ತು ಕನ್ನ..!

ಇವರಿಗೆ ಖ್ಯಾತ ತಬಲಾ ವಾದಕರಾದ ಶೇಷಾದ್ರಿ ಅಯ್ಯಂಗಾರ ತಬಲಾ ಸಾಥ್‌ನ್ನು ಹಾಗೂ ಹರಿಶ್ಚಂದ್ರ ನಾಯ್ಕ ಸಂವಾದಿನಿ ಸಾಥ್‌ನ್ನು ಭಾಗ್ಯಲಕ್ಷ್ಮಿ ಭಟ್ಟ ತಾನಪುರ ಸಾಥನ್ನು ರಂಜಿತಾ ತಾಳದಲ್ಲಿ ಸಾಥ್ ನೀಡಿದರು. ರಾಗಶ್ರೀ ಸಂಸ್ಥೆ ಅಧ್ಯಕ್ಷ ವಿದ್ವಾನ್ ಶಿವಾನಂದ ಭಟ್ಟ ಸ್ವಾಗತಿಸಿದರು. ಮಂಜುನಾಥ ಹೆಗಡೆ ಧನ್ಯವಾದ ಸಮರ್ಪಿಸಿದರೆ ಕೆ.ವಿ. ಹೆಗಡೆ ಹಾಗೂ ಶ್ರೀ ಜಗಧೀಶರಾವ್ ಅವರು ಕಲಾವಿದರನ್ನು ಗೌರವಿಸಿದರು.