ಕುಮಟಾ : ತೀವ್ರವಾಗಿ ಕುತೂಹಲ ಕೆರಳಿಸಿದ್ದ ಗ್ರಾಮ ಪಂಚಾಯತಿ ಕ್ಷೇತ್ರಗಳ ಮತ ಎಣಿಕೆ ಕಾರ್ಯ ಪೂರ್ಣಗೊಂಡಿದೆ. ವಿವಿಧ ಕ್ಷೇತ್ರಗಳಲ್ಲಿ ಅನೇಕ ಹೊಸ ಮುಖಗಳು ಗೆಲುವಿನ ನಗು ಬೀರಿದರೆ ಇನ್ನೂ ಕೆಲವೆಡೆ ಹಳೆಯ ಕಲಿಗಳೇ ಗೆದ್ದು ಬೀಗಿದ್ದಾರೆ.

ಕುತೂಹಲ ಕೆರಳಿಸುವ ಮೂಲಕ ವಿವಿಧ ಹಂತದಲ್ಲಿ ಸುದ್ದಿಯಾಗಿದ್ದ ದೀವಗಿ ಪಂಚಾಯತದ ಅಂತ್ರವಳ್ಳಿ – ಹೊಂಡದಕ್ಕಲ ಕ್ಷೇತ್ರದ ಚುನಾವಣಾ ಕಣದ ಫಲಿತಾಂಶ ಬಂದಿದ್ದು ವಿವರ ಈ ಕೆಳಗಿನಂತಿದೆ.

RELATED ARTICLES  ಹೆಗಡೆಯಲ್ಲಿ ರಸ್ತೆ ಕಾಮಗಾರಿ ವೀಕ್ಷಿಸಿದ ಶಾಸಕ ದಿನಕರ ಶೆಟ್ಟಿ

ದೀವಗಿ ಪಂಚಾಯತದ ಅಂತ್ರವಳ್ಳಿ – ಹೊಂಡದಕ್ಕಲ ಕ್ಷೇತ್ರದ ಶಂಕರ ತುಳಸು ಗೌಡ – 556 ಮತಗಳೊಂದಿಗೆ, ವೀಣಾ ಗೌಡ – 274 ಮತಗಳಿಸುವ ಮೂಲಕ, ರಾಮಚಂದ್ರ ದೇಸಾಯಿ – 402 ಮತಗಳಿಂದ ಹಾಗೂ ಶೋಭಾ ಭಟ್ಟ – 267 ಮತಗಳಿಸಿ ಭರ್ಜರಿ ಜಯಭೇರಿ ಬಾರಿಸಿದ್ದಾರೆ.

RELATED ARTICLES  ಸಾವಿನಲ್ಲೂ ತಾಯಿ ಮಗನ ಬಾಂಧವ್ಯ..! ತಾಯಿಯ ಚಿತೆಗೆ ಬೆಂಕಿ ಇಡುತ್ತಾ ತಾನೂ ಮರೆಯಾದ ಮಗ!!

ಈ ಅಭ್ಯರ್ಥಿಗಳಿಗೆ ಬಿಜೆಪಿ ಬೆಂಬಲ ನೀಡಿದ್ದ ಬಗ್ಗೆಯೂ ಸ್ಥಳೀಯವಾಗಿ ಮಾಹಿತಿ ಲಭ್ಯವಾಗಿದೆ. ರಂಗೇರಿದ ಕದನ ಕಣದ ಫಲಿತಾಂಶ ಹೊರಬರುವ ಮೂಲಕ ಮತದಾರ ಪ್ರಭು ಯಾರಿಗೆ ಒಲಿದಿದ್ದಾನೆ ಎಂಬ ಬಗ್ಗೆ ಸ್ಪಷ್ಟತೆ ಸಿಕ್ಕಿದೆ.