ಹೊನ್ನಾವರ : ತೀವ್ರವಾಗಿ ಕುತೂಹಲ ಕೆರಳಿಸಿದ್ದ ಗ್ರಾಮ ಪಂಚಾಯತಿ ಕ್ಷೇತ್ರಗಳ ಮತ ಎಣಿಕೆ ಕಾರ್ಯ ಪೂರ್ಣಗೊಂಡಿದೆ. ವಿವಿಧ ಕ್ಷೇತ್ರಗಳಲ್ಲಿ ಅನೇಕ ಹೊಸ ಮುಖಗಳು ಗೆಲುವಿನ ನಗು ಬೀರಿದರೆ ಇನ್ನೂ ಕೆಲವೆಡೆ ಹಳೆಯ ಕಲಿಗಳೇ ಗೆದ್ದು ಬೀಗಿದ್ದಾರೆ.
ಪಂಚಾಯಿತಿ ಚುನಾವಣೆ 2020 ರಲ್ಲಿ ಹೊನ್ನಾವರ ತಾಲೂಕಿನ ಕಡತೋಕಾದ ಕೆಕ್ಕಾರು – ಹೆಬ್ಳೆಕೇರಿ ವಾರ್ಡನಲ್ಲಿ ಸ್ಪರ್ಧಿಸಿದ್ದ ಸಾವಿತ್ರಿ ಶ್ರೀಕೃಷ್ಣ ಭಟ್ಟ ಕಂಚಿ ಗೆಲುವಿನ ನಗು ಬೀರಿದ್ದಾರೆ.
ಸಾಮಾನ್ಯ ಮಹಿಳಾ ಮೀಸಲಾತಿ ಹೊಂದಿದ್ದ ಹೊನ್ನಾವರ ತಾಲೂಕಿನ ಕಡತೋಕಾದ ಕೆಕ್ಕಾರು – ಹೆಬ್ಳೆಕೇರಿ ವಾರ್ಡನಲ್ಲಿ 389 ಮತಗಳಿಸುವ ಮೂಲಕ ಭರ್ಜರಿ 212 ಮತಗಳ ಅಂತರದಿಂದ ಗೆಲುವು ಪಡೆದಿದ್ದಾರೆ. ಇವರ ಪ್ರತಿಸ್ಪರ್ಧಿ 177 ಮತಗಳಿಸಿದ್ದರು.
ಡಿಸೆಂಬರ್ 22 ರಂದು ನಡೆದ ಚುನಾವಣೆಯಲ್ಲಿ ಸ್ಪರ್ಧಿಸುವ ಮೂಲಕ ಗ್ರಾಮದ ಅಭಿವೃದ್ಧಿ ದಿಸೆಯಲ್ಲಿ ಪ್ರಾಮಾಣಿಕವಾಗಿ ಪ್ರಯತ್ನ ಮಾಡುವ ಆಶಯ ವ್ಯಕ್ತಪಡಿಸಿ ಹೊಸ ಕನಸು ಹಾಗೂ ಗ್ರಾಮದಲ್ಲಿ ಹೊಸ ಭರವಸೆ ಮೂಡಿಸಿದ್ದರು.
ಪದವೀಧರೆಯಾಗಿರಯವ ಸಾವಿತ್ರಿಯವರು ಪ್ರಸಿದ್ಧ ಹಾಗೂ ಸಮಾಜ ಸೇವೆ ಹಾಗೂ ಇತರ ಧಾರ್ಮಿಕ ಕೈಂಕರ್ಯಗಳ ಮೂಲಕ ಗ್ರಾಮದಲ್ಲಿ ಹೆಸರಾಗಿರುವ ಕಂಚಿ ಕುಟುಂಬದ ಸೊಸೆಯಾಗಿ ಇದೀಗ ಗ್ರಾ.ಪಂ ಸದಸ್ಯರಾಗುವ ಮೂಲಕವೂ ಗ್ರಾಮಸೇವೆಗೆ ಮುಂದಾಗಿದ್ದಾರೆ.
ಗ್ರಾಮದ ಸೇವೆಗೆ ಅವಕಾಶ ಮಾಡಿಕೊಟ್ಟಿರುವ ಕ್ಷೇತ್ರದ ಜನತೆಗೆ ಇವರು ತುಂಬು ಮನದ ಅಭಿವಂದನೆ ಸಲ್ಲಿಸಿದ್ದಾರೆ. ನನ್ನ ಗೆಲುವಿಗೆ ಶ್ರಮಿಸಿದ ಹಾಗೂ ಮತದಾನ ಮಾಡಿ ಅಭೂತಪೂರ್ವ ಗೆಲುವು ದಾಖಲಿಸಲು ಕಾರಣರಾದ ಜನತೆಗೆ ವಂದನೆ ಸಲ್ಲಿಸಿದ್ದಾರೆ.