ಭಟ್ಕಳ : ಶ್ರೀ ತಿಮ್ಮಯ್ಯ ದಾಸರಿಂದ ಸಂಸ್ಥಾಪಿಸಲ್ಪಟ್ಟಿರುವ ಶ್ರೀ ಶ್ರೀಧರ ಪದ್ಮಾವತಿ ದೇವಿಯ ಸನ್ನಿಧಿಯಲ್ಲಿ ವರ್ಷಂಪ್ರತಿಯಂತೆ ದತ್ತಜಯಂತಿಯ ಅ0ಗವಾಗಿ ಶ್ರೀ ಶ್ರಿಧರ ಪದ್ಮಾವತಿ ದೇವಿಯ ರಥೋತ್ಸವವು ಅತ್ಯಮತ ವಿಜ್ರಂಭಣೆಯಿಂದ ಸಂಪನ್ನಗೊಂಡಿತು. ಮುಂಜಾನೆ ದೇವತಾ ಪ್ರಾರ್ಥನೆ, ಪುಣ್ಯಾಹ, ಪಂಚಗವ್ಯ ಹವನ, ಸಂಕಲ್ಪ, ಶ್ರೀ ಗುರು ಮಂತ್ರ ಹವನ, ಶ್ರೀ ಸೂಕ್ತ ಹವನ, ಪುರುಷಸೂಕ್ತ ಹವನ ಮಹಾಪೂಜೆ, ದಿಗ್ಬಲಿ, ರಥಬಲಿ, ಶ್ರೀಧರ ಪದ್ಮಾವತಿ ದೇವಿಯ ಮಹಾಪೂಜೆ ತೀರ್ಥ ಪ್ರಸಾದ ವಿತರಣೆ ಅನ್ನಸಂತರ್ಪಣೆಯು ನಡೆಯಿತು.
ದೇವಿಯ ರಥೋತ್ಸವದ ಮೆರವಣಿಗೆಯು ಸಂಜೆ 4ಗಂಟೆಗೆ ದೇವಾಲಯದಿಂದ ಹೊರಟು ರಘುನಾಥ ರಸ್ತೆಯ ಮಾರ್ಗವಾಗಿ ಪುಷ್ಪಾಂಜಲಿ ಚಿತ್ರಮಂದಿರದ ವರೆಗೆ ತಲುಪಿ ಅಲ್ಲಿಂದ ಹಿಂದಿರುಗಿ ವೀರವಿಠ್ಠಲ ರಸ್ತೆಯ ಮೂಲಕ ನೆಹರು ರಸ್ತೆ, ಹೂವಿನ ಚೌಕ ಅಲ್ಲಿಂದ ಮುಖ್ಯ ರಸ್ತೆಯ ಮೂಲಕ ಅರ್ಬನ್ ಬ್ಯಾಂಕವರೆಗೆ ಬಂದು ಅಲ್ಲಿಂದ ಹಿಂದಿರುಗಿ ಕಳಿಹನುಮಂತ ದೇವಸ್ಥಾನದ ಮಾರ್ಗವಾಗಿ ದೇವಾಲಯಕ್ಕೆ ಹಿಂದಿರುಗಿತು. ರಥೋತ್ಸವ ಮಾರ್ಗ ಮಧ್ಯದಲ್ಲಿ ನೂರಾರು ಭಕ್ತರು ದೇವರಿಗೆ ಹಣ್ಣು ಕಾಯಿ ಆರತಿ ಸಲ್ಲಿಸಿದರು.
ರಥೊತ್ಸವದಲ್ಲಿ ದೇವಾಲಯದ ಧರ್ಮದರ್ಶಿಗಳಾದ ರಾಮ ನಾಯ್ಕ ಮತ್ತು ಪದ್ಮಾವತಿ ನಾಯ್ಕ ದಂಪತಿಗಳು, ನಿಚ್ಛಲಮಕ್ಕಿ ತಿರುಮಲ ವೆಂಕಟರಮಣ ದೇವಾಲಯದ ಅಧ್ಯಕ್ಷ ಕೃಷ್ಣ ನಾಯ್ಕ ಆಸರಕೇರಿ, ಉಪಾಧ್ಯಕ್ಷ ಭವಾನಿಶಂಕರ ನಾಯ್ಕ, ಸದಸ್ಯರಾದ ಶ್ರೀಧರ ನಾಯ್ಕ, ಸುರೇಶ ನಾಯ್ಕ, ಮಂಜು ನಾಯ್ಕ, ಗಿರೀಶ ನಾಯ್ಕ, ಶ್ರೀಧರ ನಾಯ್ಕ ಆಸರಕೇರಿ, ಶಾಂತಾರಾಮ ನಾಯ್ಕ ಜಾಲಿ, ಗಂಗಾಧರ ನಾಯ್ಕ, ರಮೇಶ ನಾಯ್ಕ, ವೆಂಕಟೇಶ ನಾಯ್ಕ ಆಸರಕೇರಿ, ರಾಧಾಕೃಷ್ಣ ಪ್ರಭು, ಶ್ರೀಕಾಂತ ನಾಯ್ಕ ಆಸರಕೇರಿ, ಈಶ್ವರ ನಾಯ್ಕ ಆಸರಕೇರಿ, ವೆಂಕಟೇಶ ನಾಯ್ಕ ಚೌಥನಿ, ಎಂ,ಎಸ್,ನಾಯ್ಕ, ಗಣಪತಿ ನಾಯ್ಕ ಮುಠ್ಠಳ್ಳಿ, ಈಶ್ವರ ಹಕ್ರೆ, ಪಾಂಡುರಂಗ ನಾಯ್ಕ, ಸೋಮೇಶ್ವರ ಹನುಮಾನ ನಗರ, ಮಂಜುನಾಥ ನಾಯ್ಕ ಹನುಮಾನ ನಗರ, ಶೇಕರ ನಾಯ್ಕ ಹನುಮಾನ ನಗರ, ಶೇಷಗಿರಿ ಮುಠ್ಠಳ್ಳಿ, ನಾಗೇಶ ಮುಠ್ಠಳ್ಳಿ, ಹಾಗೂ ನೂರಾರು ಭಕ್ತರು ಉಪಸ್ಥಿತರಿದ್ದರು. ಜೈ ಮಾರುತಿ ಚಂಡೆ ವಾಧ್ಯವು ರಥೋತ್ಸವದ ಮೆರವಣ ಗೆಗೆ ರಂಗು ನೀಡಿತ್ತು.