ಕಾರವಾರ: ಹಲವು ಕೃತಿಗಳನ್ನು ನೀಡಿದ ಹೊನ್ನಾವರದ ಸಾಹಿತಿ ಡಾ. ಸುರೇಶ ಎನ್. ನಾಯ್ಕ ನಿಧನರಾದದ್ದು ನೋವಿನ ಸಂಗತಿ. ಸಾಹಿತ್ಯದ ಕುರಿತಂತೆ ಸದಾ ಹಸಿವಿನಿಂದ ಇರುತ್ತಿದ್ದ ಅವರು ದಾಸ ಸಾಹಿತ್ಯದ ಮೇಲೆ, ಅದರಲ್ಲೂ ಮುಖ್ಯವಾಗಿ ಕನಕದಾಸರ ಬಗ್ಗೆ ಖಚಿತ ಧ್ವನಿಯಲ್ಲಿ ವಿಮರ್ಶಿಸುತ್ತಿದ್ದ ರೀತಿ ಎಲ್ಲರನ್ನೂ ಅಚ್ಚರಿ ಮೂಡಿಸುತ್ತಿತ್ತು ಮಾತ್ರವಲ್ಲ, ಕರ್ನಾಟಕ ಸರಕಾರದ ಕನಕ ಪ್ರತಿಷ್ಠಾನದ ಮೂಲಕ ಹಲವು ಪ್ರಬಂಧಗಳನ್ನು ಮಂಡನೆ ಮಾಡಿ ಹಿರಿಯ ಸಾಹಿತಿಗಳಿಂದ ಬೆನ್ನು ತಟ್ಟಿಸಿಕೊಂಡಿದ್ದರು ಎಂದು ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಅರವಿಂದ ಕರ್ಕಿಕೋಡಿ ಅವರು ತಿಳಿಸಿದ್ದಾರೆ.

RELATED ARTICLES  ಸದ್ಗುಣಗಳನ್ನು ರೂಢಿಸಿಕೊಳ್ಳುವುದೇ ನಿಜವಾದ ವಿದ್ಯಾಭ್ಯಾಸ -ಬ್ರಹ್ಮಾನಂದ ಭಾರತೀ ಸ್ವಾಮೀಜಿ

ಯಶವಂತ ಚಿತ್ತಾಲರ ಮೇಲೆ ಪಿಹಚ್‍ಡಿ ಪ್ರಬಂಧ ಸಲ್ಲಿಸಿ ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪಡೆದ ಡಾ. ಸುರೇಶ ನಾಂiÀiಕ ತಮ್ಮ ತಂದೆಯ ಹೆಸರಿನಲ್ಲಿ ಸ್ಥಾಪಿಸಿದ ‘ನಾರಾಯಣ ಸಾಹಿತ್ಯಕ ಸಾಂಸ್ಕøತಿಕ ಪ್ರತಿಷ್ಠಾನ’ ದ ಮೂಲಕ ಹಲವು ಮಹತ್ವದ ಕಾರ್ಯಕ್ರಮವನ್ನು ಕೊಡುತ್ತಿದ್ದರು. ಸದಾ ಸ್ನೇಹಪರ ವ್ಯಕ್ತಿತ್ವದವರಾದ ಡಾ. ನಾಯಕ ಅಸಂವಿಧಾನಿಕ ಸಂಗತಿಗಳೊಟ್ಟಿಗೆ ಎಂದೂ ರಾಜಿ ಮಾಡಿಕೊಂಡವರಲ್ಲ. ಕನ್ನಡ ಸಾಹಿತ್ಯ ಪರಿಷತ್ತಿನ ಎಲ್ಲ ಕಾರ್ಯಕ್ರಮಗಳಲ್ಲೂ ತುಂಬ ಜವಾಬ್ದಾರಿಯಿಂದ ಪಾಲ್ಗೊಳ್ಳುತ್ತಿದ್ದರು ಎಂದು ಕ.ಸಾ.ಪ. ಜಿಲ್ಲಾಧ್ಯಕ್ಷರು ತಮ್ಮ ಸಂತಾಪ ಸೂಚಕ ನುಡಿಯಲ್ಲಿ ತಿಳಿಸಿದ್ದಾರೆ.

RELATED ARTICLES  ಲೋಕೇಶ್ವರ ಮತ ಕ್ಷೇತ್ರದಲ್ಲಿ ಗೆಲುವು ಕಂಡ ನಿಧಿ. ಹೊಸಚಿಗು ಹಳೆಬೇರು ಕೂಡಿರಲು ಮರಸೊಬಗೆಂಬ ನುಡಿ ನೆನಪಿಸಿದ ಮತದಾರ.