ಹೊನ್ನಾವರ : ಉತ್ತರ ಕನ್ನಡ ಜಿಲ್ಲೆಯಲ್ಲಿ ಖಾಸಗಿ ಪ್ರವಾಸದಲ್ಲಿರುವ ಕಾಂಗ್ರೇಸ್ ಪಕ್ಷದ ಹಿರಿಯ ಮುಖಂಡ, ಮಾಜಿ ಸಚಿವ ಆಂಜನಮೂರ್ತಿ, ರಾಮನಗರ ಮಾಜಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು, ಡಿ. ಕೆ. ಶಿವಕುಮಾರ ರವರ ಪರಮಾಪ್ತರಾದ ವಿಧಾನ ಪರಿಷತ್ ಸದಸ್ಯ ಸಿ. ಎಂ. ಲಿಂಗಪ್ಪ. ತುರುವೆಕೆರೆ ಕ್ಷೇತ್ರದ ಮಾಜಿ ಶಾಸಕ ರುದ್ರಪ್ಪ, ಬಿಡದಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಟರಾಜ್ ಅವರು ಉತ್ತರ ಕನ್ನಡ ಜಿಲ್ಲಾ ಕಾಂಗ್ರೇಸ್ ಕಾರ್ಯದರ್ಶಿ ರವಿ ಕೆ. ಶೆಟ್ಟಿ ಕವಲಕ್ಕಿ, ಇವರ ನಿವಾಸಕ್ಕೆ ಕುಟುಂಬ ಸಮೆತ ಆಗಮಿಸಿ ಕಾಂಗ್ರೇಸ್ ಪಕ್ಷದ ಸಂಘಟನೆಯ ಕುರಿತಂತೆ ವಿಚಾರ ವಿನಿಮಯ ನಡೆಸಿದರು.
ಈ ಸಂದರ್ಭದಲ್ಲಿ ರವಿ ಶೆಟ್ಟಿ ದಂಪತಿಗಳು ಸಿ.ಎಂ. ಲಿಂಗಪ್ಪ ಮತ್ತು ಆಂಜನಮೂರ್ತಿ ದಂಪತಿಗಳಿಗೆ ಶಾಲು ಹೊದಿಸಿ ಸನ್ಮಾನಿಸಿದರು. ಈ ವೇಳೆಯಲ್ಲಿ ಹೊನ್ನಾವರ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಜಗದೀಪ ಎನ್. ತೆಂಗೇರಿ, ಕುಮಟಾ ಬ್ಲಾಕ್ ಕಾಂಗ್ರೇಸ್ ಮಾಜಿ ಅಧ್ಯಕ್ಷ ಅಶೋಕ ಗೌಡ, ಮಂಜುನಾಥ ಗೌಡ, ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಮಾಜಿ ಯುವ ಕಾಂಗ್ರೇಸ್ ಅಧ್ಯಕ್ಷ ಶ್ರೀಧರ ಹೆಗಡೆ, ಪ.ಪಂ. ಮಾಜಿ ಸದಸ್ಯ ಇಸ್ಮಾಯಲ್ ಶೇಖ್, ಕೆ.ಡಿ.ಸಿ.ಸಿ. ಬ್ಯಾಂಕ ನಿರ್ದೇಶಕ ವಿಶ್ವನಾಥ ಭಟ್ಟ, ಗಿರೀಶ ಶೆಟ್ಟಿ, ಶೈಲೇಶ ನಾಯ್ಕ ಕುಮಟಾ, ತಾ.ಪಂ. ಸದಸ್ಯ ವಿವೇಕ ಭಟ್ಟ ಸಿದ್ಧಾಪುರ, ಮಹೇಶ ಹೆಗಡೆ ಇನ್ನು ಹಲವಾರು ಮುಖಂಡರು ಉಪಸ್ಥಿತರಿದ್ದರು.