ಕುಮಟಾ: ತಾಲೂಕಿನ ಹೆಗಡೆ ಗ್ರಾಮದ ಮೋಜಿನಕೇರಿ ನಿವಾಸಿಯಾದ ಶ್ರೀ ಗಣೇಶ ಕೃಷ್ಣ ಪಟಗಾರ, ಇವರು ಬೈಕ್ ಅಪಘಾತದಲ್ಲಿ ತನ್ನ ಕಾಲಿಗೆ ಏಟು ಬಿದ್ದು ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದು, ಅವರಿಗೆ ಕಿಂಚಿತ್ತಾದರೂ ಸಹಾಯವಾಗಲಿ ಎನ್ನುವ ದೃಷ್ಟಿಯಿಂದ ಗ್ರಾಮ ಒಕ್ಕಲು ಯುವ ಬಳಗದವರು ಅವರ ಮನೆಗೆ ಭೇಟಿ ನೀಡಿ ರೂಪಾಯಿ 5000=00(ಐದು ಸಾವಿರ)ವನ್ನು ನೀಡಿದರು.ಮತ್ತು ಶ್ರೀ ಗಣೇಶರವರು ಬೇಗ ಗುಣಮುಖರಾಗಲಿ ಎಂದು ಬಳಗದವರು ಹಾರೈಸಿದರು, ಈ ಸಂದರ್ಭದಲ್ಲಿ ಸ್ಥಳೀಯ ಗ್ರಾಮ ಒಕ್ಕಲು ಯುವ ಬಳಗದ ಸದಸ್ಯರು ಮತ್ತು ಬಳಗದ ಸದಸ್ಯರು ಹಾಜರಿದ್ದರು, ಗಣೇಶನ ಕುಟುಂಬವರ್ಗದವರು ಈ ಮೂಲಕ ಯುವ ಬಳಗದವರಿಗೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.