ಕುಮಟಾ: ತೊರ್ಕೆ ಗ್ರಾಮಪಂಚಾಯತ ವ್ಯಾಪ್ತಿಯ ಹಿಂದುಳಿದ ಬಡ ಹಾಲಕ್ಕಿ ಗೌಡರೇ ಹೆಚ್ಚಾಗಿರುವ ಮೂಲೆಕೇರಿಯಲ್ಲಿ ಕೇಂದ್ರದ ಉಜ್ವಲ ಯೋಜನೆಯಡಿ ಉಚಿತ ಗ್ಯಾಸ್ ಕಿಟ್ ವಿತರಿಸಲಾಯಿತು.
ಹಿಂದುಳಿದ ಬಡ ಫಲಾನುಭವಿಗಳು ಸಮಯ, ಹಣ ವ್ಯಯಿಸದೆ ಅಲೆದಾಟವಿಲ್ಲದೆ ಸುಲಭವಾಗಿ ಅವರ ಮನೆ ಬಾಗಿಲಲ್ಲೆ ಈ ಯೋಜನೆಯ ಅನುಕೂಲತೆ ಪಡೆದುಕೊಳ್ಳಬೇಕೆಂಬ ಸದುದ್ದೇಶದಿಂದ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷರಾದ ನಾಗರಾಜ ನಾಯಕ ತೊರ್ಕೆ ಅವರು ತಮ್ಮ ಸಿಬ್ಬಂದಿಗಳೊಂದಿಗೆ ಕಾರ್ಯ ಪ್ರವೃತ್ತರಾಗಿದ್ದಾರೆ. ತಾಯಂದಿರ ಸ್ವಾಸ್ಥ್ಯ ಮತ್ತು ಪರಿಸರ ಸಂರಕ್ಷಣೆಯ ನಿಟ್ಟಿನಲ್ಲಿ ಜಾರಿಯಾದ ಈ ಯೋಜನೆಯ ಫಲ ಅರ್ಹ ಫಲಾನುಭವಿಗಳಿಗೆ ತಲುಪಬೇಕು ಆ ಮೂಲಕ ಕೇಂದ್ರದ ಹೊಗೆ ಮುಕ್ತ ಮನೆ ನಿರ್ಮಾಣದ ಗುರಿ ಈಡೇರಬೇಕೆಂಬ ನಿಟ್ಟಿನಲ್ಲಿ ಇವರು ಶ್ರಮಿಸುತ್ತಿದ್ದಾರೆ.
ಗಿರಿಜಾ ಎಸ್.ಗೌಡ, ದುರ್ಗಿ ಗೌಡ, ದುರ್ಗಿ.ಆರ್.ಗೌಡ, ವೆಂಕಮ್ಮ ಪಿ.ಗೌಡ, ದೇವಿ ಗೌಡ, ಬೇಬಿ ಗೌಡ, ನಾಗಮ್ಮ ಗೌಡ, ದುರ್ಗಿ ತುಳಸು ಗೌಡ, ಸೋಮಿ ಗೌಡ, ಪರಮೇಶ್ವರಿ ಗೌಡ, ದೇವಿ ಗೌಡ, ನಾಗವೇಣಿ ಗೌಡ, ನಾಗಮ್ಮ ಗೌಡ, ಕಮಲಾ ಗೌಡ, ಮುಂತಾದ ಫಲಾನುಭವಿಗಳು ಗ್ಯಾಸ್ ಸಂಪರ್ಕದೊಂದಿಗೆ ಟ್ರಸ್ಟ್ ವತಿಯಿಂದ ಲೈಟರನ್ನು ಸಹ ಉಚಿತವಾಗಿ ಪಡೆದುಕೊಂಡರು. ಎಲ್ಲಾ ಫಲಾನುಭವಿಗಳು ಹಾಗೂ ಊರ ಪ್ರಮುಖರು ನಾಗರಾಜ ನಾಯಕ ತೊರ್ಕೆ ಅವರ ಕಾರ್ಯವನ್ನು ಶ್ಲಾಘಿಸಿದರು. ಈ ಸಂಧರ್ಭದಲ್ಲಿ ಊರ ಮುಖ್ಯ ಗೌಡರು, ಗುರು ಗೌಡ, ರಾಮು ಕೆಂಚನ, ಟ್ರಸ್ಟ ಕಾರ್ಯದರ್ಶಿ ಅರುಣ ಕವರಿ, ಶ್ರೀನಿವಾಸ ನಾಯಕ, ಮಿರ್ಜಾನ ಶಕ್ತಿ ಕೇಂದ್ರದ ಅಧ್ಯಕ್ಷರಾದ ವೆಂಕಟ್ರಮಣ ಕವರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.