ಕುಮಟಾ: ಆಯ್ ಆರ್ ಬಿ ಕಂಪನಿಯ ಅವೈಜ್ಞಾನಿಕ ಕಾಮಗಾರಿ ವಿರೋಧಿಸಿ ಅರೆಬೆತ್ತಲೆ ಪ್ರತಿಭಟನೆ ನಡೆಸುವ ಕುರಿತಂತೆ ತಾಲೂಕಿನ ಖಾಸಗಿ ಹೊಟೇಲ್ ನಲ್ಲಿ ಮಾದ್ಯಮಗೋಷ್ಠಿ ಕೆರಯಲಾಗಿತ್ತು.

ಈ ವೇಳೆ ಪ್ರತಿಭಟನೆಯನ್ನೇ ಹತ್ತಿಕ್ಕುವ ಪ್ರಯತ್ನ ನಡೆದಿದೆ.ಆದರೂ ಅನಿವಾರ್ಯವಾಗಿ ಜನಪರ ಖಾಳಜಿಯಿಂದ ಪ್ರತಿಭಟನೆ ಮಾಡುತ್ತೇವೆ ಎಂದು ಹಿರಿಯ ನ್ಯಾಯವಾದಿ ಆರ್.ಜಿ ನಾಯ್ಕ ಹೇಳಿದರು.

ರಾಷ್ಟ್ರೀಯ ಹೆದ್ದಾರಿ 66 ರ ದೀವಗಿ ಬಳಿ ಮೂರು ರಸ್ತೆಗಳು ಕೂಡಿಕೊಂಡಿದೆ.ಈ ಭಾಗದಲ್ಲಿ ಒಂದು ಮೇಲ್ಸೇತುವೆ, ಅಥವಾ ಸರ್ಕಲ್ ನಿರ್ಮಾಣದ ಅವಶ್ಯಕತೆ ತೀರಾ ಅಗತ್ಯವಾಗಿತ್ತು. ಯಾಕೆಂದರೆ ಇಲ್ಲಿ ಕುಮಟಾದಿಂದ ಕಾರವಾರ ಮಾರ್ಗವಾಗಿ ಸಾಗುವ ವಾಹನ,ಕಾರವಾರದಿಂದ ಶಿರಸಿಗೆ ಹೋಗುವ ವಾಹನ, ಶಿರಸಿಯಿಂದ ಕುಮಟಾ ಗೆ ಬರುವ ಮತ್ತು ಕುಮಟಾದಿಂದ ಶಿರಸಿಗೆ ಹೋಗುವ ವಾಹನಗಳು ಏಕಕಾಲದಲ್ಲಿ ಸಂಚಾರ ಮಾಡುವುದರಿಂದ ಇಲ್ಲಿ ಅಪಘಾತಗಳು ನಡೆಯುವ ಸಂಭವ ಹೆಚ್ಚಿದೆ.ಇನ್ನೂ ಈ ರಸ್ತೆಯಲ್ಲಿ ಈಗಾಗಲೇ ಅನೇಕ ಅಪಘಾತಗಳು ನಡೆದಿದ್ದು ಮತ್ತಷ್ಟು ಅಪಘಾತಗಳು ನಡೆಯುವ ಸಾದ್ಯತೆ ಹೆಚ್ಚಿದೆ.ಹೀಗಾಗಿ ಈ ಭಾಗದಲ್ಲಿ ಸರ್ಕಲ್ ಅಥವಾ ಮೇಲ್ಸೇತುವೆ ಅಗತ್ಯತೆ ಇದೆ.ಇದ್ಯಾವುದನ್ನು ಮಾಡದೇ ಕಾಮಗಾರಿ ನಡೆಸಿರುವ ಆಯ್ ಆರ್ ಬಿ ಕಂಪನಿ ಜನರ ಜೀವದ ಜೊತೆಗೆ ಚೆಲ್ಲಾಟವಾಡುತ್ತಿದೆ‌‌.ಈ ಕುರಿತಂತೆ ಅನೇಕ ಬಾರಿ ಸಂಘಟನೆಗಳು ಮನವಿ ಮಾಡಿದ್ದರೂ ಸಹ ಯಾವುದೇ ಆಧಿಕಾರಿ,ಜನಪ್ರತಿನಿಧಿಗಳು ಗಮನಹರಿಸದೇ ಇರುವುದರಿಂದ ಅವರನ್ನು ಎಚ್ಚರಿಸುವ ಉದ್ದೇಶದಿಂದ ರಾಜು ಮಾಸ್ತಿಹಳ್ಳ ನೇತ್ರತ್ವದ ಕರವೇ ಸ್ವಾಭಿಮಾನಿ ಬಣದಿಂದ ಹಾಗೂ ಸಾರ್ವಜನಿಕರ ಸಹಕಾರದಿಂದ ಜನವರಿ 5 ಮದ್ಯಾಹ್ನ 11 ಗಂಟೆಗೆ ದೀವಗಿ ಕ್ರಾಸ್ ಬಳಿ ಅರೆಬೆತ್ತಲೆ ಮೆರವಣಿಗೆ ಹಮ್ಮಿಕೊಂಡಿದ್ದು ಸಾರ್ವಜನಿಕರು ಪ್ರತಿಭಟನೆಗೆ ಬೆಂಬಲಿಸುವಂತೆ ವಿನಂತಿಸಿದ್ದಾರೆ.

RELATED ARTICLES  ಬೃಹತ್ ಗಾತ್ರದ ಮರ ಬಿದ್ದು ಎರಡು ಮನೆಗಳು ಜಖಂ : ಕುಮಟಾ ಪಟ್ಟಣದಲ್ಲಿ ನಡೆದ ಘಟನೆ.

ಈಗಾಗಲೇ ಪ್ರತಿಭಟನೆಗೆ ಅನುಮತಿ ಕೇಳಿದಾಗ ಕೋವಿಡ್ ಕಾರಣವೊಡ್ಡಿ ಪ್ರತಿಭಟನೆಯನ್ನು ಹತ್ತಿಕ್ಕುವ ಒಂದು ಹಂತದ ಪ್ರಯತ್ನ ನಡೆದಿದೆಯಾದರೂ ಜನರ ಪರವಾಗಿ ,ಜನರ ಜೀವ ಉಳಿಸುವ ದೃಷ್ಟಿಯಿಂದ ಪ್ರತಿಭಟನೆ ಮಾಡೇ ಮಾಡುತ್ತೇವೆ ಎಂದರು.

RELATED ARTICLES  ಅಘನಾಶಿನಿ ನದಿಗೆ ಬಿದ್ದು ಯುವಕ ಸಾವು.

ನಂತರ ಮಾತನಾಡಿದ ಕರವೇ ಸ್ವಾಭಿಮಾನಿ ಬಣದ ಜಿಲ್ಲಾಧ್ಯಕ್ಷ ರಾಜು ಮಾಸ್ತಿಹಳ್ಳ, ಕೆಲ ದಿನಗಳ ಹಿಂದೆಯೇ ಈ ಕುರಿತು ಅರೆಬೆತ್ತಲೆ ಮೆರವಣಿಗೆ ಮಾಡುವುದಾಗಿ ತಿಳಿಸಲಾಗಿತ್ತು.ಆದರೆ ಯಾವೊಬ್ಬ ಅಧಿಕಾರಿಯೂ ಈ ಬಗ್ಗೆ ಗಮನಹರಿಸಿ ವೈಜ್ಞಾನಿಕವಾಗಿ ಕಾಮಗಾರಿ ನಡೆಸುವ ಕುರಿತು ಮಾತನಾಡಿಲ್ಲ.ಇದರಿಂದಾಗಿ ‌ನಮ್ಮ ಆಡಳಿತ ವ್ಯವಸ್ಥೆಯ ಮೇಲೆ ನಂಬಿಕೆ ಕಳೆದುಕೊಳ್ಳುವಂತಾಗಿದೆ.ಜೊತೆಗೆ ಪ್ರತಿಭಟನೆ ಹತ್ತಿಕ್ಕುವ ಪ್ರಯತ್ನ ನಡೆದಿದ್ದು, ನಾವು ಯಾವುದೇ ದುರುದ್ದೇಶದಿಂದ ಪ್ರತಿಭಟನೆ ಕೈಗೊಂಡಿಲ್ಲ.ಬದಲಾಗಿ ಜನರ ಜೀವ ಉಳಿಸುವ ಸಲುವಾಗಿ ಒಂದು ಪ್ರಯತ್ನ ಎಂದರು.

ಈ ಸಂದರ್ಭದಲ್ಲಿ ತಾಲೂಕಾ ಅಧ್ಯಕ್ಷ ಮಂಜುನಾಥ ಮರಾಠಿ,ಜಿಲ್ಲಾ ಕಾರ್ಯದರ್ಶಿ ಕೆ.ಎನ್ ಮಂಜು, ವಕೀಲರಾದ ನಾಗರಾಜ ಹೆಗಡೆ ಇದ್ದರು.