ಕಾರವಾರ: ಜಿಲ್ಲೆಯ ಶಿರಸಿ, ಸಿದ್ದಾಪುರ, ಯಲ್ಲಾಪುರ, ಹೊನ್ನಾವರ, ಕುಮಟಾದ ವಿವಿಧಡೆ ಸೋಮವಾರ ಮಳೆ ಬಂದಿದ್ದು ಬೇಸಾಯಕ್ಕೆ‌ ಸಂಕಷ್ಟ ತಂದಿದೆ.

ಇನ್ನೂ ಕೆಲವಡೆ ರವಿವಾರ ರಾತ್ರಿ ಮಳೆ ಬಂದರೆ, ತಾಲೂಕಿನ ಬಹುತೇಕ‌ ಕಡೆ ಸೋಮವಾರ‌ ಸಂಜೆ ಮಳೆ ಆರಂಭವಾಗಿದೆ.

RELATED ARTICLES  ಕುಮಟಾದಲ್ಲಿ ಯಶಸ್ವಿಯಾಗಿ ಜರುಗಿದ ಕೊಂಕಣಿ ಭಾಷಾ ಮಾನ್ಯತಾ ದಿನಾಚರಣೆ.

ಈ‌ ಅಕಾಲಿಕ ಮಳೆ ಜ.೮ರ ತನಕವೂ ಜಿಲ್ಲೆಯಲ್ಲಿ ಬೀಳುವ ಸಾಧ್ಯತೆ ಇದ್ದು, ಅಡಿಕೆ ಹಾಗೂ ಭತ್ತದ ಕೊಯ್ಲು ಮಾಡಿದ ರೈತರಿಗೆ ಇಕ್ಕಟ್ಟು ತಂದಿದೆ. ಭತ್ತ ಬೆಳೆ ಮುಗ್ಗಾಗಿ ಮೊಕೆ ಬರುವ ಮೂಲಕ ಹಾನಿಯಾಗುವ ಆತಂಕ ನಿರ್ಮಾಣವಾಗಿದೆ.

RELATED ARTICLES  ದ್ವಿತೀಯ ಪಿ.ಯು. ಅಂಕಗಳನ್ನು ತಿರಸ್ಕರಿಸಿ ಪುನಃ ವಾರ್ಷಿಕ ಪರೀಕ್ಷೆ ಬರೆದ ಮಂಗಳಗೌರಿ ಭಟ್ ‌ ಮಹಾವಿದ್ಯಾಲಯಕ್ಕೆ ಪ್ರಥಮ ಸ್ಥಾನ

ಅಡಿಕೆಗೆ ಮುಗ್ಗುವ ಆತಂಕ ತಂದಿದೆ. ಮೋಡದ ವಾತಾವರಣ ಕೂಡ ಕಳೆದ ಎರಡು ದಿನದಿಂದ ಇದ್ದು ಕಷ್ಟಕ್ಕೆ ತಂದಿದೆ. ಸಣ್ಣಗೆ ಮಳೆ ಇದ್ದರೂ ಗಾಳಿ, ಗುಡಗು ಇಲ್ಲ ಆದರೂ ರೈತರ ಮನದಲ್ಲಿ ಈ ಮಳೆ‌ ಆತಂಕ ಮೂಡಿಸಿದೆ.