ಗೋಕರ್ಣ: ಸಮುದ್ರದಲ್ಲಿ ಈಜಲು ತೆರಳಿದ ವೇಳೆ ಮುಳುಗಿ ಮೃತಪಟ್ಟ ಘಟನೆ ವರದಿಯಾಗಿದ್ದು, ಗೋಕರ್ಣದ ಮುಖ್ಯ ಕಡಲ ತೀರದಲ್ಲಿ ಈಜಲು ಹೋದ ಯುವಕನೋರ್ವ ಸಮುದ್ರದಲ್ಲಿ ಮುಳುಗಿ ಮೃತಪಟ್ಟ ಘಟನೆ ಇಂದು ಸಂಜೆ ನಡೆದಿದೆ.
ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಚೋಳೂರು ನಿವಾಸಿ ಸಿ. ಆರ್. ರಂಗನಾಥ ಮೃತಪಟ್ಟ ಯುವಕ. ಈತನು ಮ್ಯಾಕಾನಿಕ್ ವೃತ್ತಿ ಮಾಡುತ್ತಿದ್ದು, ತನ್ನ ನಾಲ್ವರು ಸ್ನೇಹಿತರೊಂದಿಗೆ ಗೋಕರ್ಣ ಕಡಲ ತೀರಕ್ಕೆ ಬಂದಿದ್ದರು. ಮೇನ್ ಬೀಚ್‌ನಲ್ಲಿ ಸ್ನೇಹಿತರೊಂದಿಗೆ ಈಜುತ್ತಿರುವಾಗ ಕಡಲ ಅಬ್ಬರದ ಅಲೆಗಳಿಗೆ ಐವರೂ ಮುಳುಗಿಹೋಗಿದ್ದಾರೆ. ತಕ್ಷಣ ಬೋಟ್‌ನಲ್ಲಿದ್ದ ಸ್ಥಳೀಯ ಮೀನುಗಾರರು ನಾಲ್ವರು ಯುವರನ್ನು ರಕ್ಷಿಸಿದ್ದಾರೆ.
ಈತನನ್ನು ರಕ್ಷಿಸಿ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ವರದಿಯಾಗಿದೆ. ಈಗ ಕಡಲ ತೀರದಲ್ಲಿ ಲೈಫ್ ಗಾರ್ಡ್ಗಳು ಇಲ್ಲವಾಗಿದ್ದು ಇಂತಹ ಅವಘಡಗಳ ತಡೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ.