ಬೆಂಗಳೂರು: ನದಿಗಳ ರಕ್ಷಣೆಗಾಗಿ ಸಂತ ಜಗ್ಗಿ ವಾಸುದೇವನ್ ನಡೆಸುತ್ತಿರುವ ಅಭಿಯಾನಕ್ಕೆ ಸ್ಯಾಂಡಲ್’ವುಡ್ ಸ್ಟಾರ್’ಗಳು ಈಗಾಗಲೇ  ಕೈ ಜೋಡಿಸಿದ್ದಾರೆ. ಈ ಅಭಿಯಾನಕ್ಕೆ ಕೈ ಜೋಡಿಸಿದ್ದ ಪವರ್ ಸ್ಟಾರ್ ಪುನೀತ್ ರಾಜ್’ಕುಮಾರ್ ನದಿಗಳ ಸಂರಕ್ಷಣೆ ಕುರಿತು ವಿಶೇಷ ಹಾಡನ್ನು ಹಾಡಿದ್ದಾರೆ.

RELATED ARTICLES  ಸರ್ಕಾರಿ ಶಾಲೆಗಳಲ್ಲಿ ಮುಂದಿನ ವರ್ಷ ದಿಂದ ಇಂಗ್ಲಿಷ್ ಶಿಕ್ಷಣಕ್ಕೆ ಆದ್ಯತೆ: ಮುಖ್ಯಮಂತ್ರಿ ಕುಮಾರಸ್ವಾಮಿ.!

ನೆಲ, ಜಲದ ರಕ್ಷಣೆ ಬಗ್ಗೆ ಪ್ರತಿಯೊಬ್ಬರಿಗೂ ಸ್ಪೂರ್ತಿ ನೀಡಿ ಕಾಳಜಿ ಮೂಡಿಸಲಿದೆ ಈ ಹಾಡು. ಹಾಡಿಗೆ ಪುನೀತ್ ರಾಜ್’ಕುಮಾರ್ ಅಭಿನಯದ ರಾಜಕುಮಾರ ಚಿತ್ರ ನಿರ್ದೇಶಕ ಸಂತೋಷ್ ಅಭಿರಾಮನ್ ಸಾಹಿತ್ಯ ಬರೆದಿದ್ದಾರೆ.  ಉತ್ತಮ ಉದ್ದೇಶದೊಂದಿಗೆ ಭವಿಷ್ಯದ ದೃಷ್ಟಿಯನ್ನು ಹೊಂದಿರುವ ನದಿ ಸಂರಕ್ಷಣಾ ಯೋಜನೆಗೆ ಪ್ರತಿಯೊಬ್ಬರು ಕೈ ಜೋಡಿಸಬೇಕು ಎಂದು ಈಗಾಗಲೇ ಸಂತ ಜಗ್ಗಿ ವಾಸುದೇವನ್ ಮನವಿ ಮಾಡಿದ್ದಾರೆ. ಪುನೀತ್ ಕಂಠದಲ್ಲಿ ಹೊರ ಹೊಮ್ಮಿರುವ ಹಾಡು ಈಗಾಗಲೇ ಜನರ ಮನಸ್ಸು ಗೆದ್ದಿದ್ದು, ಜನ ಜಾಗೃತಿ ಮೂಡಿಸುತ್ತಿದೆ

RELATED ARTICLES  ಬದುಕಿಗೆ ಬಣ್ಣ ತುಂಬಿದವರು