ಕುಮಟಾ : ತಾಲೂಕಿನ ದೇವಗಿರಿಪಂಚಾಯತದ ವ್ಯಾಪ್ತಿಯ ಧಾರೇಶ್ವರ ದ ಸೊಸೈಟಿಯ ನೂತನ ಕಾರ್ಯಾಲಯದ ಉದ್ಘಾಟನೆ ನಿನ್ನೆ 7-12-21 ರಂದು ನಡೆಯಿತು. ಕುಮಟಾ ದ ಶಾಸಕರಾದ ದಿನಕರ ಶೆಟ್ಟಿ ಉದ್ಘಾಟನೆಯನ್ನ ನೆರವೇರಿಸಿದರು. ನಂತರ ಸಭೆಯಲ್ಲಿ ಮಾತನಾಡಿದ ಅವರುಸಂಘದ ಸಾಧನೆಯನ್ನು ಶ್ಲಾಘಿಸಿದರು. ಸಹಕಾರಿ ಕ್ಷೇತ್ರದಲ್ಲಿ ರಾಜಕೀಯ ಇರಬಾರದೆಂದು ಕಿವಿಮಾತನ್ನೂ ಹೇಳಿದರು. ಇಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿ ಗ್ರಾಮದ ಜನರಿಗೆ ಒಳ್ಳೆಯ ಸೇವೆಯನ್ನ ಒದಗಿಸಬೇಕೆಂದು ಸಲಹೆ ನೀಡಿದರು, ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಕೆ ಡಿ ಡಿ ಸಿ ನಿರ್ದೇಶಕ ಗಜಾನನ ಪೈ ಮಾತನಾಡಿ ರೈತರೇ ದೇಶದ ಜೀವಾಳ, ಅಂಥ ರೈತರಿಗೆ ನೆರವಾಗಬಲ್ಲಂಥ ಎಲ್ಲ ವ್ಯವಸ್ಥೆಗಳೂ ಸೊಸೈಟಿಯಿಂದ ಸಿಗುವಂತಾಗಲಿ, ಯಾವುದೇ ಬ್ರಷ್ಟಾಚಾರ ನಡೆಯದೇ ಒಳ್ಳೆಯ ಹೇಸರನ್ನು ಇರಿಸಿಕೊಳ್ಳುವುದು ಇಂದಿನ ಅಗತ್ಯವಾಗಿದೆ ಅಂದರು. ಅಲ್ಲದೇ ಕೆಡಿಸಿಸಿ ಬ್ಯಾಂಕಿನ ಅಡಿಯಲ್ಲಿ ಮುಂದಿನ ದಿನಗಳಲ್ಲಿ ಸ಼ಘಕ್ಕೆ ಪೀಠೋಪರಕಣ ವ್ಯವಸ್ಥೆ ಮಾಡಿಸುವುದಾಗಿ ಹೇಳಿದರು. ಬ್ಯಾಂಕಿನ ಕಡೆಯಿಂದ ತೀರಾ ಕಷ್ಟದಲ್ಲಿರುವ ರೈತರಿಗೆ ನೆರವಾಗುವ ಯೋಜನೆಯೂ ಇರುತ್ತಿದ್ದು ಅದರ ಕುರಿತಾಗಿಯೂ ಅಗತ್ಯವಿದ್ದರೆ ಸ್ಪಂದಿಸುವುದಾಗಿ ತಿಳಿಸಿದರು, ಸಹಕಾರಿ ಸಂಘಗಳ ಸಹಾಯಕ ನಿಬಂಧಕರಾದ ಶ್ರೀಮತಿ ಸುಜಾತಾ ಬಂಟ ರವರೂ ಅತಿಥಿಯಾಗಿ ಭಾಗವಹಿಸಿದ್ದರು. ತಾಲೂಕಿನ ವಿವಿಧ ಸೊಸೈಟಿಯ ಅಧ್ಯಕ್ಷರು ಕಾರ್ಯದರ್ಶಿಗಳು ಆಗಮಿಸಿದ್ದರು.

RELATED ARTICLES  ತಾಜ್ ಮಹಲ್ ಸಹ ಶಿವನ ದೇವಸ್ಥಾನವಾಗಿದೆ : ಕೇಂದ್ರ ಸಚಿವ ಅನಂತಕುಮಾರ ಹೆಗಡೆ

ಸೊಸೈಟಿಯ ಅಧ್ಯಕ್ಷರಾದ ಕುಮಾರ ಭಟ್ಟ ಸಭಾಧ್ಯಕ್ಷರಾಗಿದ್ದರು. ನೂತನ ಕಟ್ಟಡ ನಿರ್ಮಾಣದ ಹಿನ್ನೆಲೆಯನ್ನು ಹೇಳಿ ಅಂದಿನ ಮತ್ತು ಇಂದಿನ ಸರಕಾರದ ಹಸಕಾರವನ್ನು ಸ್ಮರಿಸಿದರು, ಜನರಿಗೆ ಮುಂದೆಯೂ ಪ್ರಾಮಾಣಿಕ ಸೇವೆಯನ್ನು ಮುಂದುವರಿಸುವುದಾಗಿ ಹೇಳಿದರು. ಸಂಘದಲ್ಲಿ ಈ ಹಿಂದೆ ಅಧ್ಯಕ್ಷರಾಗಿ ಸೇವೆಸಲ್ಲಿಸಿದ್ದ ಹಿರಿಯರಿಗೆ ಗೌರವಾರ್ಪಣೆ ಮಾಡಿದರು.

RELATED ARTICLES  ಯಶಸ್ವಿಯಾದ 'ಕಾವ್ಯ ಶ್ರಾವಣ' ಕವಿಗೋಷ್ಠಿ

ಸಚಿನ ನಾಯ್ಕ ಆಗಮಿಸಿದ ಎಲ್ಲೂರನ್ನೂ ಸ್ವಾಗತಿಸಿದರು. ಸಂಘದ ಹಿನ್ನೆಲೆ ಮುನ್ನೋಟಗಹ ಕುರಿತಾಗಿ ರಾಮು ಅಡಿ ಪ್ರಾಸ್ತಾವಿಕ ಮಾತನಾಡಿದರು. ಎಸ್ ಟಿ ನಾಯ್ಕ ವಂದಿಸಿದರು. ಉದಯ,ಭಟ್ಟ ಕಾರ್ಯಕ್ರಮದ ನಿರೂಪಣೆ ಮಾಡಿದರು.