ಕುಮಟಾ ತಾಲೂಕಾ ವ್ಯಾಪ್ತಿಯಲ್ಲಿ ಇಂದು ಒಟ್ಟು 2 ಕರೊನಾ ಸೋಂಕಿತ ಪ್ರಕರಣ ಪತ್ತೆಯಾಗಿದೆ. ತಾಲೂಕಿನ ಮೊರ್ಬಾದ 19 ವರ್ಷದ ಯುವತಿ ಹಾಗೂ ಕುಮಟಾದ 45 ವರ್ಷದ ಮಹಿಳೆಯಲ್ಲಿ ಸೋಂಕು ದೃಢಪಟ್ಟಿದೆ. ಇಂದು 2 ಪ್ರಕರಣ ದಾಖಲಾಗಿದ ಬೆನ್ನಲ್ಲೇ ಕುಮಟಾ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 2,014 ಕ್ಕೆ ಏರಿಕೆಯಾಗಿದೆ.

ಹೊನ್ನಾವರದಲ್ಲಿ ೨ ಕೇಸ್

ಹೊನ್ನಾವರ ತಾಲ್ಲೂಕಿನಲ್ಲಿಯೂ ಸಹ ಇಂದು ಎರಡು ಜನರಲ್ಲಿ ಕರೋನಾ ಪಾಸಿಟಿವ್ ಬಂದಿದೆ. ಹೊನ್ನಾವರ ತಾಲೂಕಿನ ಹಳದೀಪುರದ 18 ವರ್ಷದ ಯುವತಿ ಮತ್ತು ಹೊದ್ಕೆಶಿರೂರಿನ 55 ವರ್ಷದ ಪುರುಷನಲ್ಲಿ ಸೋಂಕು ಪತ್ತೆಯಾಗಿದೆ. ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ ಓರ್ವರು ಗುಣಮುಖರಾಗಿದ್ದು, ಆಸ್ಪತ್ರೆಯಲ್ಲಿ ಒಬ್ಬರು ಹಾಗೂ ಮನೆಯಲ್ಲಿ 9 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ.

RELATED ARTICLES  ೨ನೇ ಹಂತದ ಗ್ರಾಪಂ ಚುನಾವಣೆ ಶಾಂತಿಯುತ : ಜಿಲ್ಲೆಯಲ್ಲಿ ಶೇ. ೮೧.೪೧ರಷ್ಟು ಮತದಾನ

ಶಿರಸಿಯಲ್ಲಿಂದು 4 ಮಂದಿಗೆ ಸೋಂಕು:
ಶಿರಸಿ: ತಾಲೂಕಿನಲ್ಲಿ ಶನಿವಾರ ನಾಲ್ಕು ಕೊರೊನಾ ಕೇಸ್ ದೃಢವಾಗಿದ್ದು, ಏಳು ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇಂದು ಹಾಡಲಗಿ, ತಾರೇಹಳ್ಳಿ, ಬಾಳೆಗದ್ದೆ, ಎಸಳೆಯಲ್ಲಿ ತಲಾ ಒಂದೊಂದು ಕೇಸ್ ಪಾಸಿಟಿವ್ ಬಂದಿದೆ. ಈವರೆಗೆ 1656 ಮಂದಿಯಲ್ಲಿ ಕೊರೊನಾ ದೃಢವಾಗಿದ್ದು, 1612 ಮಂದಿ ಗುಣಮುಖರಾಗಿದ್ದಾರೆ.

RELATED ARTICLES  ನಾಡಿನ ಅಪರೂಪದ ಚಿಂತಕ ಕೆರೇಕೋಣದ ವಿಠ್ಠಲ ಭಂಡಾರಿ ಇನ್ನಿಲ್ಲ

ಅಂಕೋಲಾದಲ್ಲಿ 2 ಕೇಸ್.

ಅಂಕೋಲಾ : ತಾಲೂಕಿನಲ್ಲಿ ಶನಿವಾರ 2 ಹೊಸ ಕೋವಿಡ್ ಕೇಸ್ ದಾಖಲಾಗಿದೆ. ಬೊಬ್ರುವಾಡ ವ್ಯಾಪ್ತಿ ಯ 60 ಮತ್ತು 69ರ ವೃದ್ಧರಲ್ಲಿ ಸೋಂಕು ಲಕ್ಷಣಗಳು ಕಾಣಿಸಿಕೊಂಡಿದೆ. ಹೋಂ ಐಸೋಲೇಶನ್‍ನ ಲ್ಲಿರುವ 7 ಮಂದಿ ಸಹಿತ 8 ಸಕ್ರಿಯ ಪ್ರಕರಣಗಳು ಇವೆ. 5 ರ್ಯಾಟ್ ಮತ್ತು 168 ಆರ್‍ಟಿಪಿಸಿಆರ್ ಸೇರಿ 173 ಜನರ ಸ್ವ್ಯಾಬ್ ಟೆಸ್ಟ್ ನಡೆಸಲಾಗಿದೆ.