ಕುಮಟಾ : ಬೆಂಕಿಯಿಂದ ಅರಣ್ಯ ಸಂರಕ್ಷಣೆ ಕುರಿತು ಕುಮಟಾ ಉಪವಿಭಾಗದ ಸಿಬ್ಬಂದಿಯವರಿಗೆ ಅಗ್ನಿಶಾಮಕ ದಳದ ಸಹಾಯಕ ಸಹಯೋಗದೊಂದಿಗೆ ಬೆಳ್ಳಂಗಿ ನೇಚರ್ ಕ್ಯಾಂಪ್‍ನಲ್ಲಿ ಕಾರ್ಯಗಾರ ನಡೆಸಲಾಯಿತು. ಶ್ರೀಯುತ ಜಿ.ಕೆ. ಶೇಟ್ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಕುಮಟಾ ಉಪವಿಭಾಗ ಕುಮಟಾರವರು ಕಾರ್ಯಗಾರದ ಉದ್ದೇಶದ ಕುರಿತು ತಿಳಿಸಿ ಕಾಡಿನಲ್ಲಿ ಬೆಂಕಿ ಬೀಳುವುದು ಬಹುತೇಕ ಕಾಡಿನ ಉತ್ಪನ್ನ ಸಂಗ್ರಹಿಸುವ ಮತ್ತು ಕಾಡಿನ ರಸ್ತೆಯಲ್ಲಿ ಸಂಚರಿಸುವ ಕೀಡಿಗೇಡಿ ದಾರಿಕೋರರಿಂದ ಹೆಚ್ಚಿನದಾಗಿ ಬೆಂಕಿ ಬೀಳುವ ಸಂಭವ ಇರುತ್ತದೆ.
ಕಾರಣ ನಮ್ಮ ಸಿಬ್ಬಂದಿಗಳು ಮುಂಜಾಗ್ರತೆ ಕ್ರಮಕೈಗೊಂಡು ದಾರಿಹೋಕರಿಗೆ ಹಾಗೂ ಸಾರ್ವಜನಿಕರಿಗೆ ಕಾಡಿನ ಸಂರಕ್ಷಣೆಯ ಕುರಿತು ಅರಿವು ಮೂಡಿಸುವುದು ಅನಿವಾರ್ಯವಾಗಿರುತ್ತದೆೆ ಎಂದರು.

ಶ್ರೀ ಸುರೇಶ ಸಿ.ಎನ್. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಪರೀಕ್ಷಾರ್ಥಿ ಹಿರೇಗುತ್ತಿ ವಲಯರವರು ಕಾರ್ಯಗಾರದ ಉದ್ದೇಶವನ್ನು ತಿಳಿಸಿ ಕಾಡಿನಲ್ಲಿ ಬೆಂಕಿ ಬೀಳದಂತೆ ಸಾರ್ವಜನಿಕರ ಸಹಕಾರದೊಂದಿಗೆ ಹಾಗೂ ಗ್ರಾಮ ಅರಣ್ಯ ಸಮಿತಿಯ ಸಹಕಾರದೊಂದಿಗೆ ಬೆಂಕಿರೇಖೆ ತೆಗೆದು ಬೆಂಕಿ ಬೀಳದಂತೆ ಮುಂಜಾಗ್ರತ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು.
ಶ್ರೀ ದೀಪಕ ನಾಯ್ಕ ವಲಯ ಅರಣ್ಯಾಧಿಕಾರಿಗಳು ಕತಗಾಲರವರು ಸಭೆಯಲ್ಲಿ ಉಪಸ್ಥಿತ ಇರುವ ಎಲ್ಲರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ|| ಚೈತ್ರಪ್ರಭಾ ವೈದ್ಯಾಧಿಕಾರಿಗಳು ಕತಗಾಲರವರು (ಕೆ.ಎಫ್.ಡಿ.) ಮಂಗಲಕಾಯಿಲೆ ತಡೆಗಟ್ಟುವ ಕುರಿತು ಮಾತನಾಡಿ ಹೆಚ್ಚಿನದಾಗಿ ಕೆ.ಎಫ್.ಡಿ.ಯು ಕಾಡಿನಲ್ಲಿಯೇ ಉದ್ಭವಾಗಿರುವುದರಿಂದ ಅರಣ್ಯ ಸಿಬ್ಬಂದಿಗಳು ಕಾಡಿನಲ್ಲಿ ಸಂಚರಿಸುತ್ತಿರುವುದರಿಂದ ಮಂಗನ ಕಾಯಿಲೆ ಬರುವ ಸಂಭವ ಇರುತ್ತದೆ. ಮಂಗನ ಕಾಯಿಲೆ ಬರದಂತೆ ಮುಂಜಾಗ್ರತೆ ಕ್ರಮ ಕೈಗೊಂಡು ವ್ಯಾಕ್ಸಿನ್‍ನ್ನು ನಮ್ಮ ಕುಮಟಾ ತಾಲೂಕಿನ ನಮ್ಮ ಪ್ರಾಥಮಿಕ ಕೇಂದ್ರದಲ್ಲಿ ವ್ಯವಸ್ಥೆಯು ಇರುತ್ತಿದ್ದು, ತಮಗೆ ಯಾವುದೇ ವ್ಯಾಕ್ಸಿನ್ ಬೇಕಾದಲ್ಲಿ ನಮ್ಮನ್ನು ಸಂಪರ್ಕಿಸಿ ಮಂಗನ ಕಾಯಿಲೆ ತಡೆಗಟ್ಟಬಹುದೆಂದು ಸವಿಸ್ತರವಾಗಿ ಮಾಹಿತಿ ನೀಡಿದರು. ಶ್ರೀ ಪ್ರವೀಣ ನಾಯಕ ವಲಯ ಅರಣ್ಯಾಧಿಕಾರಿಗಳು ಕುಮಟಾರವರು ಉಪಸ್ಥಿತರಿದ್ದು ಮಾತನಾಡಿದರು. ಶ್ರೀ ಗೊಂಡ ಠಾಣಾಧಿಕಾರಿಗಳು ಅರಣ್ಯ ಶಾಮಕ ದಳ ಕುಮಟಾರವರು ಬೆಂಕಿ ವಿಧಗಳ ವಿವರಿಸಿ ಬೆಂಕಿಯನ್ನು ನಂದಿಸುವ ಪ್ರಾತಕ್ಷತೆಯನ್ನು ತಮ್ಮ ಸಿಬ್ಬಂದಿ ವರ್ಗದವರೊಂದಿಗೆ ಅರಣ್ಯ ಸಿಬ್ಬಂದಿಯವರಿಗೆ ತೋರಿಸಿ ವಿವರಿಸಿದರು.

RELATED ARTICLES  ಇಂದಿನ‌ ದಿನ ನಿಮ್ಮ ಪಾಲಿಗೆ ಹೇಗಿದೆ ಗೊತ್ತಾ? ಇಲ್ಲಿದೆ ನೋಡಿ ದ್ವಾದಶ ರಾಶಿಗಳ ಫಲಾಫಲ

ಶ್ರೀ ಬಿ.ಎನ್. ಬಂಕಾಪುರ ಉಪವಲಯ ಅರಣ್ಯಾಧಿಕಾರಿ ಕತಗಾಲರವರು ಕಾರ್ಯಕ್ರಮವನ್ನು ಸಂಘಟಿಸಿದರು. ಶ್ರೀ ದುರ್ಗು ಬಿ.ಎಚ್. ಪೆಸಿಲೀಟೆಟರ್ ಕುಮಟಾರವರು ಕಾರ್ಯಕ್ರಮ ನಿರೂಪಿಸಿದರು.

RELATED ARTICLES  ಕಾರವಾರ : ಸಾಮಾನ್ಯ ಸಭೆಯಲ್ಲಿ ಕೆಪಿಸಿ ಅಧಿಕಾರಿಗಳು ತರಾಟೆಗೆ