ಕುಮಟಾ : ಬಾಡದ ಗುಡೇಅಂಗಡಿಯ ಗ್ರಾಮಸ್ಥರಿಂದ ದ್ವಿತೀಯ ದಿನದ ಮುಕ್ತಿಧಾಮದ ಸ್ವಚ್ಚತೆ ಕಾರ್ಯಕ್ರಮ ಈ ವಾರವೂ ಉತ್ತಮ ರೀತಿಯಲ್ಲಿ ನಡೆಯಿತು.

ಈ ವಾರ ಭಾಗದ ಜನಪ್ರತಿನಿಧಿ ಗಳನ್ನು ಆಹ್ವಾನಿಸಿ ಅವರ ಸಲಹೆ ಸಹಕಾರ ಪಡೆದು 15 ಮಂದಿ ಸಮಿತಿ ನಿರ್ಮಿಸಿ ಜನಪ್ರತಿನಿಧಿಗಳನ್ನು ಯಾವತ್ತೂ ಆಹ್ವಾನಿತ ಸದಸ್ಯರಾಗಿ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾನ್ಯ ಜಿಲ್ಲಾ ಪಂಚಾಯತ ಸದಸ್ಯರು ಶ್ರೀಯುತ ರತ್ನಾಕರ ನಾಯ್ಕ,ಮಾನ್ಯ ತಾಲೂಕಾ ಪಂಚಾಯತ ಸದಸ್ಯರು ಶ್ರೀಯುತ ಜಗನ್ನಾಥ ನಾಯ್ಕ,ಮಾನ್ಯ ಪಂಚಾಯತ ಸದಸ್ಯರು ಶ್ರೀಯುತ ವಿಠ್ಠಲ ನಾಯಕ ಮತ್ತು ಶ್ರೀಮತಿ ಲಕ್ಷ್ಮೀ ದತ್ತಾತ್ರೇಯ ಪಟಗಾರ ಹಾಗೂ ಊರಿನ ಎಲ್ಲಾ ನಾಗರಿಕರು ಉಪಸ್ಥಿತರಿದ್ದರು.
ಎಲ್ಲರಿಗೂ ಸ್ವಾಗತ ರಾಜೇಶ ಶೇಟ್ ನಿರ್ವಹಿಸಿದರು ಹಾಗೂ ಅಭಿನಂದನೆ ಕಾರ್ಯಕ್ರಮವನ್ನು ನಾಗರಾಜ ಮಂಜುನಾಥ ಮಡಿವಾಳ ನಿರ್ವಹಿಸಿದರು.

RELATED ARTICLES  ಉತ್ತರಕನ್ನಡದ ಇಂದಿನ ಕೊರೋನಾ ಅಪ್ಡೇಟ್

ಈ ಸಂದರ್ಭದಲ್ಲಿ ಮಾರುತಿ ನಾಯ್ಕ, ಶಿವು ಮಡಿವಾಳ, ಚಂದ್ರಕಾಂತ ಪಟಗಾರ, ಗೋಪಾಲ ನಾಯ್ಕ,ಮಹಾಬಲೇಶ್ವರ ಮಡಿವಾಳ, ಬಂಗಾರಿ ಪಟಗಾರ, ವೆಂಕಟಾಚಲ ಶ್ಯಾನಭಾಗ, ವಿನೋದ ಭಟ್ಟ , ಎಸ್ ಎಸ್ ಹೆಗಡೆ, ವಿ ಎಚ್, ಹೆಗಡೆ, ಕಮಲಾಕ್ಷ ನಾಯ್ಕ, ಸಂತೋಷ ಮಡಿವಾಳ, ಪದ್ಮನಾಭ ಮಡಿವಾಳ ಇನ್ನೂ ಅನೇಕರು ಉಪಸ್ಥಿತರಿದ್ದರು.

RELATED ARTICLES  ಚೆಸ್ ನಲ್ಲಿ ಮತ್ತೆ ಮಿಂಚಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ನಿಕಿತಾ ಕಾಮತ್!