ಹೊನ್ನಾವರ : ತಾಲೂಕಿನ ಹಳದೀಪುರದ ಕೀಳೂರು ಸುಡದಾಳಮಕ್ಕಿಯ ಕಾಂಕ್ರೀಟ್ ರಸ್ತೆಗೆ ಶಾಸಕ ದಿನಕರ ಶೆಟ್ಟಿ ಗುದ್ದಲಿಪೂಜೆ ನೆರವೇರಿಸಿದರು. ಶಾಸಕರ ಅನುದಾನದಲ್ಲಿ ಬಿಡುಗಡೆಯಾದ ಸುಮಾರು 5 ಲಕ್ಷ ರೂ ಗಳ 100 ಮೀಟರ್ ಉದ್ದದ ರಸ್ತೆ ಇದಾಗಿದ್ದು ಶಾಸಕರು ಭೂಮಿಪೂಜೆಯಲ್ಲಿ ಪಾಲ್ಗೊಂಡು ನಂತರ ಗುದ್ದಲಿಪೂಜೆ ನೆರವೇರಿಸಿದರು.
ನಂತರ ನಡೆದ ಸರಳ ಕಾರ್ಯಕ್ರಮದಲ್ಲಿ ಪ್ರಾಸ್ಥಾವಿಕವಾಗಿ ಮಾತನಾಡಿದ ಗ್ರಾ.ಪಂ ಸದಸ್ಯ ಗೋವಿಂದ ಜೋಶಿ ಶಾಸಕರು ಊರಿಗೆ ನೀಡಿದ ಅನುದಾನದ ಬಗ್ಗೆ ತಿಳಿಸುತ್ತಾ, ಶಾಸಕರು ಈ ಗ್ರಾಮದ ಅಭಿವೃದ್ಧಿಯ ದಿಸೆಯಲ್ಲಿ ನಮ್ಮೊಂದಿಗೆ ಇರಬೇಕು ಎಂದರು.
ಶಾಸಕರಾದ ದಿನಕರ ಶೆಟ್ಟಿ ಮಾತನಾಡಿ ಈ ಗ್ರಾಮದ ಅಭಿವೃದ್ಧಿಯ ದೃಷ್ಟಿಯಿಂದ ಮೊದಲ ಬಾರಿಗೆ ಶಾಸಕನಾಗಿದ್ದಾಗ ಅನುದಾನ ನೀಡಿ ಗುದ್ದಲಿ ಪೂಜೆ ನಡೆಸಿದ್ದೆ. ಇದೀಗ ಇನ್ನೂ ಮುಂದಿನ ರಸ್ತೆಗೆ ಗುದ್ದಲಿ ಪೂಜೆ ಮಾಡಿದ್ದೇನೆ. ಕಾಮಗಾರ ಉತ್ತಮವಾಗಿ ನಡೆಯುವ ವಿಶ್ವಾಸವಿದೆ ಎಂದರು.
ಈ ಗ್ರಾಮದ ಜನರು ಇನ್ನೂ ಕೆಲ ಮೀಟರ್ ರಸ್ತೆ ಕಾಂಕ್ರೀಟ್ ರಸ್ತೆಯಾಗಿಸುವ ಬಗ್ಗೆ ಅನುದಾನ ಕೇಳಿದ್ದಾರೆ. ಖಂಡಿತವಾಗಿ ಆ ಕಾರ್ಯ ಮಾಡಿಕೊಡುವ ಭರವಸೆ ನೀಡಿದರು. ಜೊತೆಗೆ ಮೋದಿಯವರ ಸರಕಾರ ಬಂದ ನಂತರ ಮಾಡಿರುವ ಕಾರ್ಯಗಳ ಬಗ್ಗೆಯೂ ವಿವರಿಸಿದರು. ನಾವೆಲ್ಲ ದೇಶದ ಋಣ ತೀರಿಸಬೇಕು ಬಿ.ಜೆ.ಪಿ ಸರಕಾರ ಆ ಕಾರ್ಯದ ಜೊತೆ ಜೊತೆಗೆ ರೈತರಿಗೂ ನೆರವಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಗ್ರಾ.ಪಂ ಸದಸ್ಯರುಗಳಾದ ಮಹೇಶ ನಾಯ್ಕ,ರತ್ನಾಕರ ನಾಯ್ಕ, ಶಿವಾನಂದ ನಾಯ್ಕ, ರೇಣುಕಾ ಹಳದೀಪುರ ಹಾಜರಿದ್ದರು ಸತೀಶ ಹಬ್ಬು, ಜನಾರ್ದನ ನಾಯ್ಕ, ತಿಮ್ಮಣ್ಣ ಗೌಡ,ತುಳಸು ಗೌಡ ಹಾಗೂ ಇತರರು ಹಾಜರಿದ್ದರು, ಊರಿನ ಪರವಾಗಿ ಶಾಸಕರಿಗೆ ಶಾಲು ಹೊದೆಸಿ ಸನ್ಮಾನಿಸಲಾಯಿತು.