ಭಟ್ಕಳ: ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ನ ಸೂಚನೆಯಂತೆ ಅಯೋಧ್ಯಾ ಶ್ರೀರಾಮಜನ್ಮಭೂಮಿ ಮಂದಿರ ನಿರ್ಮಾಣಕ್ಕೆ ನಿಧಿ ಸಮರ್ಪಣ ಮಹಾ ಅಭಿಯಾನ ಕಾರ್ಯಕ್ರಕ್ಕೆ ವಿಶ್ವ ಹಿಂದೂ ಪರಿಷತ್ ಭಟ್ಕಳ ಇವರ ನೇತೃತ್ವದಲ್ಲಿ ಇಂದು ಚಾಲನೆ ನೀಡಲಾಯಿತು.
ಕಾರ್ಯಕ್ರಮದ ಬೌದ್ಧಿಕವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ಉತ್ತರ ಪ್ರಾಂತ್ಯದ ಪ್ರಾಂತ ಪ್ರಚಾರಕರು ಶ್ರೀ ಸುಧಾಕರ ಜೀ ನೆರವೇರಿಸಿದರು. ಕಾರ್ಯಮದಲ್ಲಿ ಅಯೋಧ್ಯೆ ಶ್ರೀರಾಮಮಂದಿರ ನಿರ್ಮಾಣದ ನಿಧಿ ಸಮರ್ಪಣಾ ಅಭಿಯಾನದ ಜಿಲ್ಲಾ ಹಾಗೂ ಭಟ್ಕಳ ತಾಲೂಕಿನ ಪ್ರಮುಖರು ಶ್ರೀ ಶಂಕರ್ ಶೆಟ್ಟಿ, ಕರಸೇವಕರಾದ ನಾರಾಯಣ ನಾಯ್ಕ ಮುಟ್ಠುಳ್ಳಿ ಹಾಗೂ ಯೋಗ ಗುರುಗಳಾದ ವಿಠಲ್ ಬಾಳೆರಗಿ ಉಪಸ್ಥಿತರಿದ್ದರು.
ಈ ಒಂದು ಶ್ರೇಷ್ಠ ಮತ್ತು ಪುಣ್ಯ ಕಾರ್ಯದಲ್ಲಿ ಶಾಸಕರಾದ ಸುನೀಲ್ ನಾಯ್ಕ ಭಾಗವಹಿಸಿ ಪ್ರಭು ಶ್ರೀರಾಮನ ಭವ್ಯ ಮಂದಿರ ನಿರ್ಮಾಣಕ್ಕೆ ಕಾಣಿಕೆಯನ್ನು ಸಲ್ಲಿಸಿದರು. ರಾಷ್ಟ್ರಪುರುಷ ಪ್ರಭು ಶ್ರೀರಾಮನ ಕಾರ್ಯಕ್ಕೆ ಕೈ ಜೋಡಿಸುವಂತೆ ಅವರು ಕರೆ ನೀಡಿದರು.