ಜೂನ್ ತಿಂಗಳಲ್ಲಿಯೇ ಮಾಧ್ಯಮಗಳು ವರದಿ ಮಾಡಿದರೂ ಇನ್ನೂ ಕ್ರಮ ಜರುಗಿಸದ ಇಲಾಖೆ.

ಕುಮಟಾ : ಕಾಗಾಲ ಗ್ರಾಮಪಂಚಾಯತದ ಲೋಕೇಶ್ವರ ವಾರ್ಡನ ಗೌಡರ ಕೊಪ್ಪದಲ್ಲಿ ಕುಮಟಾ ಅಘನಾಶಿನಿ ಮುಖ್ಯರಸ್ತೆಯಲ್ಲಿರುವ ಬೃಹತ್ ಮರವು ಮುರಿದು ಬೀಳುವ ಹಂತದಲ್ಲಿದ್ದು ಇದರ ಕೆಳಗಡೆಯೇ ವಿದ್ಯುತ್ ತಂತಿಯೂ ಹಾದು ಹೋಗಿದೆ.ಈ ಮರವನ್ನು ತೆರವು ಗೊಳಿಸಲು ಸಾರ್ವಜನಿಕರು ಜೂನ್ ತಿಂಗಳಲ್ಲಿಯೇ ಆಗ್ರಹಿಸಿದ್ದರೂ ಸಂಬಂಧಿಸಿದ ಇಲಾಖೆಯವರು ಜಾಣಕುರುಡು ಪ್ರದರ್ಶನ ಮಾಡಿದ್ದರಿಂದ ಇನ್ನೂ ಮರ ತೆರವುಗೊಳಿಸಿಲ್ಲ.

RELATED ARTICLES  ಉತ್ತರ ಕನ್ನಡದಲ್ಲಿ ಇಂದು ಐವರಲ್ಲಿ ಕೊರೋನಾ ದೃಢ

ಇದೀಗ ಮರದ ಕೊಂಬೆಯಿಂದ ಧಾರಾಕಾರವಾಗಿ ಸೊನೆಸುರಿಯುವುದರಿಂದ ಯಾವುದೇ ಕ್ಷಣದಲ್ಲೂ ಮರಮುರಿದು ಬೀಳುವ ಸಾಧ್ಯತೆಇದ್ದು ಕೋಟೆ ಕೊಳ್ಳೆಹೋದ ಮೇಲೆ ಬಾಗಿಲು ಭದ್ರಪಡಿಸುವ ಇರಾದೆ ಇದ್ದಹಾಗಿದೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

RELATED ARTICLES  ಶ್ರೋತೃಗಳ ಮನಗೆದ್ದ ಪ್ರವೀಣ್ ಗೋಡ್ಖಿಂಡಿ ಕೊಳಲು ವಾದನವಿವಿವಿಯಲ್ಲಿ ಗಂಧರ್ವಕಲೆಗಳಿಗಾಗಿಯೇ ಪ್ರತ್ಯೇಕ ಗುರುಕುಲ: ರಾಘವೇಶ್ವರ ಶ್ರೀ

ವಿಡಿಯೋ

https://youtu.be/asmQhdfArT4