ಯಲ್ಲಾಪುರ: ಶ್ರೀ ಕಾಲಭೈರವೇಶ್ವರ ಸಂಸ್ಕೃತ ವೇದ ಆಗಮ ಮಹಾವಿದ್ಯಾಲಯ ಆದಿಚುಂಚನಗಿರಿ ಹಾಗೂ ತರುಣೋದಯ ಸಂಸ್ಕೃತ ಸೇವಾ ಸಂಸ್ಥೆ ಶಿವಮೊಗ್ಗ ಇವರುಗಳು ಆದಿಚುಂಚನಗಿರಿಯಲ್ಲಿ ನಡೆಸಿದ ರಾಜ್ಯಮಟ್ಟದ ಸಂಸ್ಕೃತ ಸ್ಪರ್ಧೆಗಳಲ್ಲಿ ಶ್ರೀಮಾತಾ ಸಂಸ್ಕೃತ ಮಹಾವಿದ್ಯಾಲಯ ಉಮ್ಮಚಗಿಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.

RELATED ARTICLES  ಸೇತುವೆಯ ಮೇಲಿಂದ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಯುವತಿ

ಗುರುಪ್ರಸಾದ ಶ್ರೀಧರ ಹೆಗಡೆ ಸಂಸ್ಕೃತ ಭಾಷಣದಲ್ಲಿ ಪ್ರಥಮ ಸ್ಥಾನ, ಶ್ರೀಪಾದ ಹೆಗಡೆ ದ್ವಿತೀಯ, ಶ್ರೀಪಾದ ಹೆಗಡೆ, ನರೇಂದ್ರ ಶ್ರೀಪಾದ ಜೋಶಿ- ರಸಪ್ರಶ್ನೆಯಲ್ಲಿ ಪ್ರಥಮ, ಅಕ್ಷಯಕುಮಾರ ಭಟ್ಟ-ಪ್ರಬಂಧ ಲೇಖನದಲ್ಲಿ ಪ್ರಥಮ, ಅಚ್ಯುತ ಹೆಗಡೆ ಚಿತ್ರಕಲೆಯಲ್ಲಿ ಪ್ರಥಮ, ಶ್ರೀರಾಮ ಭಟ್ಟ ಕಾವ್ಯವ್ಯಾಖ್ಯಾನದಲ್ಲಿ ದ್ವಿತೀಯ, ಭಾರ್ಗವ ವಿ.ಜಿ- ಕಾವ್ಯವ್ಯಾಖ್ಯಾನ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ಈ ಎಲ್ಲಾ ವಿದ್ಯಾರ್ಥಿಗಳಿಗೆ ಶ್ರೀ ಸಂಸ್ಥೆಯ ಅಧ್ಯಕ್ಷರು ಸದಸ್ಯರುಗಳು ಎಲ್ಲಾ ಪದಾಧಿಕಾರಿಗಳು ಹಾಗೂ ಅಧ್ಯಾಪಕ ವೃಂದದವರು ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.

RELATED ARTICLES  ನಾಡ ಹಬ್ಬದಂದು ನಡೆಯುತ್ತಿರುವ ದಸರಾ ಕಾವ್ಯೊತ್ಸವ ಅತ್ಯಂತ ವಿಶಿಷ್ಟ : ಡಾ. ಆರ್. ನರಸಿಂಹ ಮೂರ್ತಿ