ಹಿರೇಗುತ್ತಿ: ಕೊರೊನಾ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಸೋಮವಾರ ಇಲ್ಲಿನ ಹಿರೇಗುತ್ತಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಾಲನೆ ನೀಡಲಾಯಿತು. ಮಾಜಿ ಗ್ರಾಮ ಪಂಚಾಯತ ಅಧ್ಯಕ್ಷರು ಹಾಲಿ ಚುನಾಯಿತ ಪ್ರತಿನಿಧಿ ಶಾಂತಾ ನಾರಾಯಣ ನಾಯಕ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. “ಕೊರೊನಾ ಮಹಾಮಾರಿಯು ಕಳೆದ 10 ತಿಂಗಳಿನಿಂದ ಜನರನ್ನು ಬಾದಿಸಿ ಸಾಕಷ್ಟು ಸಾವಿಗೆ ಕಾರಣವಾಗಿದೆ ನಮ್ಮ ದೇಶದ ವಿಜ್ಞಾನಿಗಳು ನಮ್ಮ ದೇಶದಲ್ಲಿಯೇ ಲಸಿಕೆಯನ್ನು ತಯಾರಿಸಿದ್ದು ನಿಜಕ್ಕೂ ಶ್ಲಾಘನೀಯ ಈ ಲಸಿಕೆಯ ಪ್ರಯೋಜನವನ್ನು ಆರೋಗ್ಯ ಇಲಾಖೆ ಹಾಗೂ ಜನಸಾಮಾನ್ಯರು ಪಡೆಯುವಂತಾಗಲಿ” ಎಂದು ನುಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಹಿರೇಗುತ್ತಿ ಗ್ರಾ.ಪಂ.ಆಡಳಿತಾಧಿಕಾರಿ ಶಶಿಕಾಂತ ಕೊಲ್ಲೆ ರವರು “Covid-19 ರೋಗಕ್ಕೆ ವ್ಯಾಕ್ಸಿನ್ ಲಸಿಕೆ ವರದಾನವಾಗಿದೆ ಕೊರೊನಾ ಬಾರದಂತೆ ಮುಂಜಾಗ್ರತೆಯನ್ನು ವಹಿಸಬೇಕು ಕೊರೊನಾ ಮಹಾಮಾರಿ ಸಂಹಾರಕ್ಕೆ ಅಣ ಯಾಗಿದ್ದೇವೆ” ಎಂದರು.
ಹಿರೇಗುತ್ತಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಗಿರೀಶ ನಾಯ್ಕ ಸ್ವಾಗತಿಸಿ ಮೊದ¯ ಹಂತದಲ್ಲಿ ಪೌರಕಾರ್ಮಿಕರು(ಪ್ರಂಟ್‍ಲೈನ್ ವಾರಿಯರ್ಸ್) ವೈದ್ಯರು ಆರೋಗ್ಯ ಸಿಬ್ಬಂದಿ ಆಶಾಕಾರ್ಯಕರ್ತೆಯರು ಎರಡನೇ ಹಂತದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ನಂತರ ಪೊಲೀಸ್ ಸಿಬ್ಬಂದಿಗೆ ಲಸಿಕೆ ನೀಡಲಾಗುತ್ತದೆ. ನಂತರ ಸಾರ್ವಜನಿಕರಿಗೂ ಲಸಿಕೆ ದೊರೆಯಲಿದೆ ಎಂದರು.
ಕಾರ್ಯಕ್ರಮದಲ್ಲಿ ಹಿರೇಗುತ್ತಿ ಆಸ್ಪತ್ರೆಯ ಬಿ.ಪಿ ಪಟಗಾರ, ಕುಸುಮಾ ಗಾಂವಕರ, ಶ್ರೀಮತಿ ಶಾರದಾ ಜೋಶಿ, ಸುನೀತಾ ಚಲುವಾದಿ, ಮಮತಾ ದೇಶಭಂಡಾರಿ, ಚಂದ್ರಿಕಾ ಗೌಡ, ಸವಿತಾ ಗೌಡÀ, ಶಶಾಂಕ ಎಂ ನಾಯ್ಕ್, ರತನ್ ನಾಯ್ಕ, ಸುಶೀಲಾ ನಾಯ್ಕ, ಸುರೇಖಾ ವಾರ್ಕರ್, ವಾದಿರಾಜ ರಾಯ್ಕರ್,ಇತರರು ಉಪಸ್ಥಿತರಿದ್ದರು.
ವರದಿ: ಎನ್.ರಾಮು ಹಿರೇಗುತ್ತಿ,