ಕುಮಟಾ : ವಿಶ್ವದಲ್ಲಿ ಅಪರೂಪವೆನಿಸಿದ ಏಕೈಕ ಗೋಬ್ಯಾಂಕ್ ಎನಿಸಿಕೊಂಡಿರುವ ಹೊಸಾಡದ ಅಮೃತಧಾರಾ ಗೋಶಾಲೆಯ ನಿರ್ವಹಣೆ ಹಾಗೂ ಅಭಿವೃದ್ಧಿಗೆ ಪೂರಕವಾಗಿ ಆರ್ಥಿಕ ಸಂಪನ್ಮೂಲ ಸಂಗ್ರಹದ ದೃಷ್ಟಿಯಿಂದ ದಿನಾಂಕ 23 /1/ 2021ರಂದು ಶನಿವಾರ ಪ್ರಗತಿ ವಿದ್ಯಾಲಯ ಮೂರೂರು ಶಾಲೆಯ ಆವರಣದಲ್ಲಿ ಶ್ರೀ ಮಹಾವಿಷ್ಣು ಕಲಾ ಬಳಗ ಕೋಣಾರೆ ಇದರ ಆಶ್ರಯದಲ್ಲಿ ಪ್ರಖ್ಯಾತ ಯಕ್ಷಗಾನ ಕಲಾವಿದರ ಕೂಡುವಿಕೆಯಲ್ಲಿ ಯಕ್ಷ- ಚಿತ್ರ- ಗಾನ -ನೃತ್ಯ ಮತ್ತು “ಕನಕಾಂಗಿ ಕಲ್ಯಾಣ” ಯಕ್ಷಗಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಬಲು ಅಪರೂಪದ ಕಾಮಧೇನುವಿನ ಮೂರ್ತಿ ಇರುವ ಹೊಸಾಡದ ಅಮೃತಧಾರಾ ಗೋ ಶಾಲೆ ಪರಮಪೂಜ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಯವರ ದಿವ್ಯ ಸಂಕಲ್ಪ ಹಾಗೂ ಮಾರ್ಗದರ್ಶನದಲ್ಲಿ ನಡೆಯುತ್ತಿದೆ. ಇದು ಇಂದು ಅಂದಾಜು 300 ಗೋವುಗಳ ಅಭಯ ಧಾಮವಾಗಿದೆ.

RELATED ARTICLES  ಪದೇ ಪದೆ ಕಾಣಿಸಿಕೊಳ್ಳುತ್ತಿರುವ ಮೊಸಳೆ : ಜನರಲ್ಲಿ ಆತಂಕ

ದಿನದಿಂದ ದಿನಕ್ಕೆ ಮೇವು ಮತ್ತು ಹಿಂಡಿ, ಗೋಪಾಲಕರ ವೇತನ ಇತ್ಯಾದಿಗಳು ಗಮನಾರ್ಹವಾಗಿ ಏರಿರುವುದರಿಂದ ಗೋಶಾಲೆಯ ನಿರ್ವಹಣೆ ಕಷ್ಟಕರವಾಗುತ್ತಿದೆ. ಪ್ರತಿದಿನ ಸುಮಾರು ರೂಪಾಯಿ 15000 ದಷ್ಟು ಖರ್ಚು ಇರುತ್ತಿದೆ. ಸರಕಾರದ ಅನುದಾನವು ಕೂಡ ಈ ವರ್ಷ ತುಂಬಾ ಕಡಿಮೆ ಬಿಡುಗಡೆಯಾಗಿರುತ್ತದೆ. ಪ್ರತಿವರ್ಷ ಗೋಸಂಧ್ಯಾ ಎಂಬ ಕಾರ್ಯಕ್ರಮದ ಮೂಲಕ ಕೆಲವು ಮಟ್ಟಿಗೆ ಸಂಪನ್ಮೂಲ ಸಂಗ್ರಹ ಮಾಡಿ ಗೋಶಾಲೆಯನ್ನು ನಿರ್ವಹಿಸಲಾಗುತ್ತಿತ್ತು. ಆದರೆ ಈ ವರ್ಷ ಕೋವಿಡ್ 19 ರ ಪ್ರಯುಕ್ತ ಸರಕಾರದ ಆರೋಗ್ಯ ಇಲಾಖೆಯ ಮಾರ್ಗದರ್ಶಿ ಸೂತ್ರ ಗಳಂತೆ ದೊಡ್ಡ ಪ್ರಮಾಣದ ಕಾರ್ಯಕ್ರಮ ಮಾಡುವುದು ಅಸಾಧ್ಯವಾಗಿರುವುದರಿಂದ ಆರ್ಥಿಕ ಸಂಗ್ರಹದ ಕಂದಕ ದೊಡ್ಡದಾಗುತ್ತಲೇ ಇದೆ.ಈ ಕಂದಕವನ್ನು ಸ್ವಲ್ಪ ಮಟ್ಟಿಗೆ ಕಡಿಮೆಮಾಡಿಕೊಳ್ಳುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಸಂಯೋಜಿಸಲಾಗಿದೆ ಈ ಕಾರ್ಯಕ್ರಮದಿಂದ ಸಂಗ್ರಹವಾದ ಸಂಪೂರ್ಣ ಮೊತ್ತವನ್ನುಗೋಶಾಲಾ ನಿರ್ವಹಣೆಗೆ ವಿನಿಯೋಗಿಸಲಾಗುವುದು ಎಂದು ಗೋ ಶಾಲೆಯ ಆಡಳಿತ ಮಂಡಳಿ ತಿಳಿಸಿದೆ.

RELATED ARTICLES  ಆತ್ಮಹತ್ಯೆಗೆ ಶರಣಾದ ಮಗನ ಸಾವಿನ ನೋವಿನಲ್ಲಿ ಕೊನೆಯುಸಿರೆಳೆದ ತಂದೆ : ನಡೆಯಿತು ಮನ ಕಲಕುವ ಘಟನೆ