ಕುಮಟಾ : ತಾಲೂಕಿನ ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯ ಹನೇಹಳ್ಳಿ ಗ್ರಾಮದ ಶ್ರೀ ಸಂಕದ ಮಹಾಸತಿ ದೇವಸ್ಥಾನದಲ್ಲಿ ಸುಮಾರು 22 ಗ್ರಾಂ ತೂಕದ ಬಂಗಾರದ ಕರಿಮಣಿ ಸರ(ಮಂಗಳಸೂತ್ರ) ಹಾಗೂ ಸುಮಾರು 5000/- ರೂ ಕಾಣಿಕೆ ಹಣ ಕಳ್ಳತನವಾದ ಬಗ್ಗೆ ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ದಿನಾಂಕ 20-01-2021 ರಂದು ಶ್ರೀ ಮಹಾಸತಿ ದೆವಸ್ಥಾನ ಕಳ್ಳತನ ಮಾಡಿದ ಆರೋಪಿತನಾದ ವಿವೇಕಾನಂದ ದುರ್ಗಯ್ಯ ಖಾರ್ವಿಯನ್ನು ಬಂಧಿಸಲಾಗಿದೆ. ಬೋಟಿಕೆಲಸ ಮಾಡುತ್ತಿದ್ದ ಈತ ಕಳ್ಳತನ ನಡೆಸಿದ್ದ ಎನ್ನಲಾಗಿದೆ. ಈತನನ್ನು ಕುಮಟಾ ತಾಲೂಕ ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆಗೊಳಪಡಿಸಿ ಆರೋಪಿತನಿಂದ 22 ಗ್ರಾಂ ತೂಕದ ಸುಮಾರು 62,000/- ರೂ ಮೌಲ್ಯದ ಬಂಗಾರದ ಮಂಗಳ ಸೂತ್ರ(ಕರಿಮಣಿ ಸರ) ವನ್ನು ವಶಪಡಿಸಿಕೊಂಡು, ಆರೋಪಿತನನ್ನು ಈ ದಿವಸ ದಿನಾಂಕ 21-01-2021 ರಂದು ಮಾನ್ಯ ಜೆ.ಎಮ್.ಎಫ್.ಸಿ ನ್ಯಾಯಾಲಯ ಕುಮಟಾ, ಪ್ರಭಾರ ಜೆ.ಎಮ್.ಎಫ್.ಸಿ ನ್ಯಾಯಾಲಯ ಹೊನ್ನಾವರವರ ಮುಂದೆ ಹಾಜರುಪಡಿಸಲಾಗಿದೆ.
ಆರೋಪಿತನಿಗೆ ಮಾನ್ಯ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿರುತ್ತದೆ. ಈ ಪ್ರಕರಣದ ಆರೋಪಿತನಿಗೆ ಕಳೆದ ಕೆಲವು ದಿನಗಳ ಹಿಂದೆ ಕುಮಟಾ ಪೊಲಿಸ್ ಠಾಣಾ ವ್ಯಾಪ್ತಿಯ ಕೊಡ್ಕಣಿಯಲ್ಲಿ ದೇವಸ್ಥಾನ ಕಳ್ಳತನ ಪ್ರಕರಣ, ಅಂಕೋಲಾದ ಕೊಗ್ರೆ, ಹೊನ್ನಿಬೈಲ್, ಹಾಗೂ ಹೊನ್ನರಾಕಾ ದೇವಸ್ಥಾನ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾದ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಈ ಪ್ರಕರಣದ ಕಾರ್ಯಾಚರಣೆಯಲ್ಲಿ ಗೋಕರ್ಣ ಪೊಲೀಸ್ ಠಾಣೆಯ ಪಿ.ಎಸ್.ಐ ನವೀನ್ ನಾಯ್ಕ ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.