ಭಟ್ಕಳ : ತಾಲೂಕಿನ ಕುರುಂದೂರು ಗ್ರಾಮದ ಬಸವನಬಾಯಿ ಮಹಾಗಣಪತಿ ಕುರಿತು ಮಂಜುಸುತ ಜಲವಳ್ಳಿ ಅವರು ರಚಿಸಿದ ಭಕ್ತಿಗೀತೆಗಳ ಕೃತಿ ಜಲಧಾರೆ ದೇವಸ್ಥಾನದ ವರ್ಧಂತಿ ಉತ್ಸವದಂದು ಲೋಕಾರ್ಪಣೆಗೊಂಡಿತು. ಕೃತಿಯನ್ನು ಲೋಕಾರ್ಪಣೆ ಮಾಡಿದ ಮಂಜುಸುತ ಜಲವಳ್ಳಿಯವರು ಎರಡು ಗೀತೆಗಳನ್ನು ವಾಚಿಸಿ ಭಗವಂತನ ಪ್ರೇರಣೆ ಹಾಗೂ ಅನುಗೃಹವೇ ಗೀತರಚನೆಗೆ ಕಾರಣವೇ ಹೊರತು ನನ್ನದೇನೂ ಇಲ್ಲ. ಎಲ್ಲಿಯದೋ ಗಿಡದ ಹೂವು ದೇವರ ಪಾದ ಸೇರುವಂತೆ ಎಲ್ಲಿಯವನೋ ಆದ ನಾನು ಈ ಕ್ಷೇತ್ರಕ್ಕೆ ಬಂದು ಭಗವಂತನ ಪ್ರೇರಣೆಯಿಂದ ಅವನ ನಾಮಸ್ಮರಣೆಯನ್ನು ಬರೆದು ಅವನಿಗೇ ಅರ್ಪಿಸುವಂತಾಗಿರುವ ನನ್ನ ಪಾತ್ರ ಇಲ್ಲಿ ನಿಮಿತ್ತ ಮಾತ್ರ ಎಂದರು.

ಕೃತಿಕಾರರು ಹಾಗೂ ಕೃತಿಯ ಕುರಿತು ಪ್ರಾಸ್ಥಾವಿಕ ನುಡಿಗಳನ್ನಾಡಿದ ಪ್ರಾರ್ಥನಾ ಪ್ರತಿಷ್ಠಾನದ ಅಧ್ಯಕ್ಷ ಗಂಗಾಧರ ನಾಯ್ಕ ಮಾತನಾಡಿ ಮಂಜುಸುತ ಓರ್ವ ಭಕ್ತ ಕವಿ. ತಾವು ಸಂದರ್ಶಿಸಿದ ಪುಣ್ಯಕ್ಷೇತ್ರಗಳ ಕುರಿತು ಗೀತೆಗಳನ್ನು ರಚಿಸುತ್ತಾರೆ.ದಾನಿಗಳು ಪ್ರಕಟಿಸಲು ಸಹಾಯ ನೀಡಿದಲ್ಲಿ ಅದನ್ನು ಸ್ವೀಕರಿಸುತ್ತಾರೆ. ಇಲ್ಲವಾದಲ್ಲಿ ಸ್ವತಹ ಅವುಗಳನ್ನು ಮುದ್ರಿಸಿ ಉಚಿತವಾಗಿ ಭಕ್ತರಿಗೆ ಅವುಗಳನ್ನು ಹಂಚಲು ದೇವಾಲಯಕ್ಕೆ ಅರ್ಪಿಸಿ ಬರುವಂತಹ ಯಾವುದೇ ಪ್ರತಿಫಲಾಪೇಕ್ಷೆ ಬಯಸದ ಸದ್ಭಕ್ತರು. ಈಗಾಗಲೇ ಮುವತ್ತಕ್ಕೂ ಹೆಚ್ಚು ದೇಗುಲಗಳ ಗೀತೆಗಳ ಕೃತಿ ಲೋಕಾರ್ಪಣೆ ಮಾಡಿದ್ದಾರೆ.ಅವುಗಳಲ್ಲಿ ಭಟ್ಕಳದ ಶ್ರೀಧರ ಪದ್ಮಾವತಿ ದೇವಿ ಹಾಗೂ ನಿಚ್ಛಲಮಕ್ಕಿ ತಿರುಮಲ ವೆಂಕಟರಮಣ ದೇವರನ್ನು ಆಧರಿಸಿದ ಗೀತೆಗಳ ಧ್ವನಿಸುರುಳಿ ಬಿಡುಗಡೆಯಾಗಿದೆ. ಈ ಗೀತೆಗಳನ್ನು ಹಾಡುವ ಅವಕಾಶ ಸಿಕ್ಕಿದ್ದು ತನ್ನ ಸೌಭಾಗ್ಯ ಎಂದರಲ್ಲದೇ ನಿಚ್ಚಲಮಕ್ಕಿ ತಿರುಮಲ ವೆಂಕಟೇಶ್ವರನನ್ನು ಆಧರಿಸಿದ ಗೀತೆಗಳ ಧ್ವನಿಸುರುಳಿ ಯನ್ನು ದೇವರ ನೂತನ ಶಿಲಾಮಯ ದೇಗುಲದ ಲೋಕಾರ್ಪಣೆ ಸಂದರ್ಬದಲ್ಲಿ ಪರಮಪೂಜ್ಯ ಬ್ರಹ್ಮಾನಂದ ಸರಸ್ವತಿ ಸ್ವಾಮಿಗಳು ಲೋಕಾರ್ಪಣೆಗೊಳಿಸಿದ್ದರು. ಹಾಗೆಯೇ ಶ್ರೀಧರ ಪದ್ಮಾವತಿ ದೇವಿಯನ್ನು ಆಧರಿಸಿದ ಗೀತೆಗಳ ಧ್ವನಿಸುರುಳಿಯನ್ನು ಖ್ಯಾತ ಹಿನ್ನೆಲೆ ಗಾಯಕ ರಾಜೇಶ್ ಕೃಷ್ಣನ್ ಹಾಗೂ ಸಂಗೀತ ನಿರ್ದೇಶಕ ಸಾಧು ಕೋಕಿಲ ಬಿಡುಗಡೆಗೊಳಿಸಿದ್ದರು ಎಂಬುದನ್ನು ಸ್ಮರಿಸಿ ಬಸವನ ಬಾಯಿ ಮಹಾಗಣಪತಿಯ ಗೀತೆಗಳೂ ಸಹ ಧ್ವನಿಸುರುಳಿಯಾಗಿ ಬಿಡುಗಡೆಗೊಂಡು ಎಲ್ಲ ಭಕ್ತರ ನಾಲಿಗೆಯಲ್ಲಿ‌ ನಲಿದಾಡಲಿ ಎಂದು ಹಾರೈಸಿದರು.

RELATED ARTICLES  ಮುಂದುವರೆದ ಬಿಜೆಪಿ ಸೇರ್ಪಡೆ ಪರ್ವ

ಈ ಸಂದರ್ಭದಲ್ಲಿ ದೇವಾಲಯದ ವತಿಯಿಂದ ಮಂಜುಸುತ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಬದಲ್ಲಿ ದೇವಾಲಯದ ಅದ್ಯಕ್ಷ ಮಂಜುನಾಥ ನಾಯ್ಕ, ಮಾಜಿ ಅದ್ಯಕ್ಷ ಹಾಗೂ ಜಲಧಾರೆ ಕೃತಿ ಪ್ರಕಟಣೆಗೆ ಆರ್ಥಿಕ ನೆರವನ್ನು ಸೇವಾರೂಪದಲ್ಲಿ ಒದಗಿಸಿದ ಗಿರೀಶ ನಾಯ್ಕ, ಮಾಜಿ ಅಧ್ಯಕ್ಷ ಶಂಕರ ನಾಯ್ಕ ಮುಠ್ಠಳ್ಳಿ, ಮಂಜುನಾಥ ನಾಯ್ಕ ಕರಾವಳಿ, ಈರಪ್ಪ‌ನಾಯ್ಕ ಹಾಡವಳ್ಳಿ,ಮಾದೇವ ನಾಯ್ಕ ಹಿತ್ತಲಗದ್ದೆ ಹಾಡವಳ್ಳಿ , ಎಂ.ಪಿ. ಶೈಲೇಂದ್ರ ಗೌಡ, ಮಂಜುನಾಥ ನಾಯ್ಕ ಹಂಡೀಮನೆ, ಪ್ರಧಾನ ಅರ್ಚಕರಾದ ಗಜಾನನ‌ಭಟ್,ಗಣಪತಿ ನಾಯ್ಕ ಮುಠ್ಠಳ್ಳಿ ಹಾಗೂ ನೂರಾರು ಭಕ್ತರು ಹಾಜರಿದ್ದರು.

RELATED ARTICLES  ಬಸ್, ಬೋಲರ್ ಹಾಗೂ ಓಮ್ಮಿ ನಡುವೆ ಸರಣಿ ಅಪಘಾತ : ವಾಹನ ಅಂಗಡಿಯೊಳಗೆ ನುಗ್ಗಿ ಹಲವರು ಗಾಯಗೊಂಡಿರುವ ಘಟನೆ