ಶಿವಮೊಗ್ಗ : ರಾತ್ರಿ 10:20 ವೇಳೆಗೆ ಶಿವಮೊಗ್ಗ ಜಿಲ್ಲೆಯಲ್ಲಿ ಹಲವು ಭಾಗದಲ್ಲಿ ಭೂಕಂಪ ವಾದ ಅನುಭವವಾಗಿದೆ. ಶಿವಮೊಗ್ಗ ನಗರ, ಸಾಗರ, ಶಿಕಾರಿಪುರ, ಭದ್ರಾವತಿ, ತೀರ್ಥಹಳ್ಳಿ ಭಾಗದ ಹಲವು ಭಾಗದಲ್ಲಿ ಬಾಂಬ್ ಸಿಡಿದಂತೆ ಸದ್ದು ಕೇಳಿದ್ದು ಜನ ಬೆಚ್ಚಿ ಬಿದ್ದಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯಲ್ಲೂ ಭೂ ಕಂಪನದ ಅನುಭವವಾಗಿದೆ ಎನ್ನಲಾಗಿದ್ದು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಹಲವು ಕಡೆ ಭೂಮಿ ಕಂಪಿಸಿದ ಅನುಭವವಾಗಿದೆ ಎನ್ನಲಾಗಿದೆ. ಭೂ ಕಂಪನದ ಜೊತೆಗೆ ದೊಡ್ಡ ಶಬ್ದ ಬರುವ ಮೂಲಕ ಅದು ಜನರನ್ನು ಬೆಚ್ಚಿ ಬೀಳಿಸಿದೆ. ಸಿದ್ದಾಪುರ ,ತಾಳಗುಪ್ಪ,ಹೊನ್ನಾವರ ಗೇರುಸೊಪ್ಪ ಭಾಗದಲ್ಲಿ ಕಂಪನ ಆಗಿದ್ದು ದೊಡ್ಡ ಸದ್ದು ಕೇಳಿಬಂದಿದೆ ಎಂದು ಸ್ಥಳೀಯ ವರದಿಗಳು ಹೇಳಿದೆ.

RELATED ARTICLES  ದೇಶ ಮಟ್ಟದಲ್ಲಿ ಸದ್ದು ಮಾಡಿದ ಸುಸಜ್ಜಿತ ಆಸ್ಪತ್ರೆ ಬೇಡಿಕೆ.

ಹಲವು ಭಾಗದಲ್ಲಿ ಭೂಮಿ ಕಂಪಿಸದಿದ್ದರೂ ಬಾಂಬ್ ಸಿಡಿದಂತೆ ಸದ್ದು ಕೇಳಿದೆ. ಬಲ್ಲ ಮೂಲಗಳ ಪ್ರಕಾರ ಭೂಕಂಪನ ಎಂಬುದು ದೃಡಪಟ್ಟಿದ್ದು ಅಧಿಕೃತವಾಗಿ ಎಷ್ಟು ಪ್ರಮಾಣದಲ್ಲಿ ಭೂಕಂಪನವಾಗಿದೆ ಎಂದು ತಿಳಿದುಬರಬೇಕಿದೆ.

ಹಲವು ವರ್ಷಗಳ ಹಿಂದ ಶಿವಮೊಗ್ಗ ಜಿಲ್ಲೆಯಲ್ಲಿ ಭೂಕಂಪನವಾಗಿತ್ತು. ಆದರೇ ಇಂದು ಕಂಪನಕ್ಕಿಂತ ಶಬ್ದ ಹೆಚ್ಚು ಕೇಳಿದ್ದು ಜನರಲ್ಲಿ ಆತಂಕ ಮೂಡಿಸಿದೆ.

ಶಿರಸಿ-ಸಿದ್ದಾಪುರದ ಕೆಲವೆಡೆ ಲಘು ಭೂಕಂಪನದ ಅನುಭವ; ನಿದ್ದೆಯಿಂದ ಎದ್ದು ಕುಳಿತ ಜನತೆ

https://youtu.be/G-CzJMqqdHg

ಶಿರಸಿ/ಸಿದ್ದಾಪುರ: ಗುರುವಾರ ರಾತ್ರಿ 10.20 ರ ಸಮಯಕ್ಕೆ ತಾಲೂಕಿನ ಬೆಂಗಳೆ ಭಾಗದಲ್ಲಿ ಬಾಗಿಲು-ಕಿಟಕಿ ಬಡಿದ ಸದ್ದಾಗಿ, ಲಘು ಭೂಕಂಪನದ ಅನುಭವ ಜನರಿಗಾಗಿದ್ದು, ಮಲಗಿದ್ದ ಜನರು ಒಮ್ಮೆ ಎದ್ದು ಕುಳಿತು ಹೌಹಾರಿದ ಘಟನೆ ನಡೆದಿದೆ.

RELATED ARTICLES  ಮನುಷ್ಯತ್ವ ಇಲ್ಲದ ಬಜೆಟ್, ಜಿಲ್ಲೆಯ ಜನರಿಗೆ, ಜನರ ಸ್ವಾಭಿಮಾನಕ್ಕೆ ಅವಮಾನ ಮಾಡಿದ್ದೀರಿ :- ಅನಂತಮೂರ್ತಿ ಹೆಗಡೆ - ಜನರು ರಸ್ತೆ ಮೇಲೆ ಸಾಯುವುದನ್ನು ನೋಡುತ್ತಾ ಸರ್ಕಾರ ಮಜಾ ತೆಗೆದುಕೊಳ್ಳುತ್ತಿದೆ

ಸ್ಥಳೀಯರು ಸುಮಾರು 10.30 ರಿಂದ 10.40 ಹೊತ್ತಿಗೆ ಮನೆಯ ಕಿಡಕಿಯನ್ನು ಯಾರೋ ಬಡಿದ ಸದ್ದು ಕೇಳಿಸಿದೆ ಎಂದಿದ್ದಾರೆ‌.

ತಾಲೂಕಿನ ಬನವಾಸಿಯಲ್ಲಿಯೂ ಸಹ ಅದೇ ಸಮಯಕ್ಕೆ ಬಲವಾದ ಶಬ್ಧವೊಂದು ಕೇಳಿಸಿದ್ದು, ಜನರು ತುಸು ಆತಂಕಕ್ಕೆ ಒಳಗಾಗಿದ್ದಾರೆ‌. ಜಿಲ್ಲೆಯ ಸಿದ್ದಾಪುರದ ಹೆಗ್ಗರಣಿ ಭಾಗದಲ್ಲಿ ಸಹ ಕೆಲವೆಡೆ ಭೂಕಂಪನದ ಅನುಭವ ಬಂದಿದೆ.

ವಿಡಿಯೋ ನೋಡಿ.

https://youtu.be/Ekr7-qcjDL8