ಕಾರವಾರ : ನಿನ್ನೆ ರಾತ್ರಿ10:20 ವೇಳೆಗೆ ಶಿವಮೊಗ್ಗ ನಗರ, ಸಾಗರ, ಶಿಕಾರಿಪುರ, ಭದ್ರಾವತಿ, ತೀರ್ಥಹಳ್ಳಿ ಭಾಗದ ಹಲವು ಭಾಗದಲ್ಲಿ ಬಾಂಬ್ ಸಿಡಿದಂತೆ ಸದ್ದು ಕೇಳಿ ಜನ ಬೆಚ್ಚಿ ಬಿದ್ದಿದ್ದರು ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲೂ ಭೂ ಕಂಪನದ ಅನುಭವವಾಗಿದೆ ಎನ್ನಲಾಗಿದ್ದು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಹಲವು ಕಡೆ ಭೂಮಿ ಕಂಪಿಸಿದ ಅನುಭವವಾಗಿದೆ ಎನ್ನಲಾಗಿತ್ತು. ಭೂ ಕಂಪನದ ಜೊತೆಗೆ ದೊಡ್ಡ ಶಬ್ದ ಬರುವ ಮೂಲಕ ಅದು ಜನರನ್ನು ಬೆಚ್ಚಿ ಬೀಳಿಸಿತ್ತು.

RELATED ARTICLES  ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಸಿವಿಎಸ್‌ಕೆ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ

ಇದೀಗ ಭೂಕಂಪನದ ಅನುಭವಕ್ಕೆ ಕಾರಣ ತಿಳಿದುಬಂದಿದ್ದು, ಶಿವಮೊಗ್ಗದ ಹುಣಸೋಡು ರೇಲ್ವೆ ಕ್ರಷರ್ ಬಳಿ ನಲ್ಲಿದ್ದ 50 ಕ್ಕೂ ಹೆಚ್ಚು ಡೈನಾಮೇಟ್ ಬಾಕ್ಸ್ ಸ್ಪೋಟವಾಗಿದ್ದು, ಹಲವು ಕಾರ್ಮಿಕರು ಮೃತರಾಗಿದ್ದಾರೆ ಎಂದು ಹೇಳಲಾಗಿದ್ದು, ಚಿದ್ರ ಚಿದ್ರವಾಗಿರುವ 6 ಜನರ ಮೃತದೇಹ ದೊರಕಿದೆ.

ಕಲ್ಲು ಗಣಿಗಾರಿಕೆಗೆ ಲಾರಿಯಲ್ಲಿ ಸಾಗಿಸುತ್ತಿದ್ದ 50 ಡೈನಾಮೇಟ್ ಬಾಕ್ಸ್ ಗಳು ಏಕಕಾಲಕ್ಕೆ ಸ್ಪೋಟಿಸಿದೆ ಎಂದು ಅಂದಾಜಿಸಲಾಗಿದೆ. ನಿಜವಾಗಿಯೂ ಭೂಕಂಪ ನಡೆದಿದೆಯಾ ಅಥವಾ ಡೈನಾಮೇಟ್ ಸ್ಪೋಟವೇ ಇದಕ್ಕೆಲ್ಲಾ ಕಾರಣವಾಯ್ತಾ ಎಂಬುದಾಗಿ ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ.

RELATED ARTICLES  ಶ್ರೀ ನಂಜುಂಡ ಸ್ವಾಮಿಗಳಿಗೆ ಗೋಕರ್ಣ ಗೌರವ.

ಜನರಿಗೆ ಭೂಕಂಪದ ಅನುಭವವಾಗಿರುವುದು ಈ ಸ್ಪೋಟದಿಂದಲೋ ಅಥವಾ ನಿಜವಾಗಿಯೂ ಏನಾಗಿದೆ ಎಂಬ ಬಗ್ಗೆ ಇಲಾಖೆಯವರು ಪೂರ್ಣ ಮಾಹಿತಿ ನೀಡುವರೆಂದು ತಿಳಿದು ಬಂದಿದೆ.