ಭಟ್ಕಳ: ಕನ್ನಡದ ಜನತೆಯು ಬೆಚ್ಚಿಬೀಳುವ ಪ್ರಕರಣವೊಂದು ಭಟ್ಕಳ ತಾಲೂಕಿನಲ್ಲಿ ನಡೆದಿದೆ. ರಕ್ತದ ಮಡುವಿನಲ್ಲಿ ಮಹಿಳೆ ಬಿದ್ದಿರುವ ದೃಶ್ಯ ಭಯಾನಕವಾಗಿರುವುದೇ ಇದಕ್ಕೆ ಕಾರಣವಾಗಿದೆ.
ಮನೆಯೊಂದಕ್ಕೆ ದಾಳಿ ನಡೆಸಿದ ದುಷ್ಕರ್ಮಿಗಳು ಮಹಿಳೆ ಯನ್ನು ಬರ್ಬರ ಹತ್ಯೆ ಮಾಡಿದ್ದ ಘಟನೆ ಶನಿವಾರ ರಾತ್ರಿ ನಡೆದೆ ಎಂದು ವರದಿಯಾಗಿದೆ.
ಈ ಘಟನೆ ತಾಲ್ಲೂಕಿನ ಕೊಪ್ಪ ಗ್ರಾಮ ಪಂಚಾಯತ್ ವ್ಯಾಪ್ತಿಯ ಉತ್ತರ ಕೊಪ್ಪದ ಬಳಿ ನಡೆದಿರುವುದು.ಮನೆಯಲ್ಲಿ ಯಾರೂ ಇಲ್ಲ ವೇಳೆ ಈ ಘಟನೆ ನಡೆದಿದೆ.ಉತ್ತರ ಕೊಪ್ಪದ ಕೊಂಕಣಾತಿಬೈಲ್ಜ ಜನನಿಬಿಡ ಪ್ರದೇಶ ದಲ್ಲಿ ಈ ಕೃತ್ಯ ವರದಿಯಾಗಿದೆ ಘಟನೆಗೆ ಕಾರಣ ತಿಳಿದು ಬಂದಿಲ್ಲ.
ಮೃತಪಟ್ಟ ಮಹಿಳೆ ಲಕ್ಷ್ಮಿ ಕೃಷ್ಣ ನಾಯ್ಕ ಎಂದು ಗುರುತಿಸಲಾಗಿದೆ. ಯಾಕಾಗಿ ಕೊಲೆ ಮಾಡಲಾಗಿದೆ ಎಂಬುದು ತಿಳಿದಿಲ್ಲ ಬಂದಿಲ್ಲ ಕುತ್ತಿಗೆ ಕಟ್ಟಿ ಕತ್ತು ಹಿಸುಕಿ,ಕೊಲೆ ಮಾಡಿದ್ದು ತಲೆಗೆ ದೊಡ್ಡ ಗಾಯಮಾಡಲಾಗಿದ್ದು ಆರೋಪಿಗಳ ಪತ್ತೆಗೆ ಪೊಲೀಸರು ಯತ್ನ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಸ್ಥಳಕ್ಕೆ ಸಿ.ಪಿ.ಐ ದಿವಾಕರ ಪಿ.ಎಂ ಹಾಗೂ ಮುರುಡೇಶ್ವ ಠಾಣೆ ಅಪರಾಧ ಪಿ.ಎಸ್.ಐ ರವೀಂದ್ರ ಬಿರಾದಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿದ್ದು ಈ ಕೊಲೆ ಕುರಿತು ಪೊಲೀಸ್ ತನಿಖೆಯಿಂದ ತಿಳಿದು ಬರಬೇಕಾಗಿದೆ.