ಭಟ್ಕಳ: ತಾಲೂಕಿನ ಕೊಪ್ಪ ಪಂಚಾಯಿತಿ ವ್ಯಾಪ್ತಿಯ ಕೊಂಕಣಾತಿ ಭೈಲನಲ್ಲಿ ವ್ಯಕ್ತಿಯೊಬ್ಬರು ಗಾಬರಿಗೊಂಡು ಸಾವನ್ನಪ್ಪಿದ ರೀತಿಯ ಘಟನೆ ನಡೆದಿದೆ.ಆದರೆ ಈ ಬಗ್ಗೆ ದೂರೂ ದಾಖಲಾಗಿದ್ದು ಹಲವು ಅನುಮಾನಕ್ಕೆ ಎಡೆ ಮಾಡಿದೆ.

ಪಕ್ಕದ ಮನೆಯಲ್ಲಿ ಹತ್ಯೆಯಾದ ಮಹಿಳೆಯ ಶವ ನೋಡಿ ವ್ಯಕ್ತಿ ಗಾಬರಿಗೊಂಡು ಅಲ್ಲೆ ಕುಸಿದು ಬಿದ್ದು, ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮದ್ಯ ಮೃತ ಪಟ್ಟ ಘಟನೆ ಇದಾಗಿದೆ.

RELATED ARTICLES  ನಾಗಾಂಜಲಿ ನಾಯ್ಕ ಮನೆಗೆ ಭೇಟಿ ನೀಡಿ ಸನ್ಮಾನಿಸಿದ ಕೇಂದ್ರ ಮಂತ್ರಿ ಅನಂತಕುಮಾರ ಹೆಗಡೆ.

ಶಿರಾಲಿ ಪಂಚಾಯಿತಿಯ ಚಿತ್ರಾಪುರದ ನಿವಾಸಿ ಗಜಾನನ ಉಲ್ಲಾಸ ಮಾಂಜ್ರೆಕರ ಮೃತ ವ್ಯಕ್ತಿ. ಇವರು ಕೊಪ್ಪದ ಕೊಂಕಣಾತಿಬೈಲನಲ್ಲಿರುವ ಸಂಬಂಧಿಕರ ಮನೆಗೆ ತೆರಳಿದ್ದರು. ಅಲ್ಲಿ ಪಕ್ಕದ ಮನೆಯಲ್ಲಿ ಶಬ್ದ ಬಂದಿದ್ದು ಅದನ್ನು ನೋಡಲು ಹೋಗಿದ್ದಾರೆ. ಅಲ್ಲಿ ಗಾಯಗೊಂಡ ಲಕ್ಷ್ಮೀ ನಾಯ್ಕ ಬೆಂಕಿಯಲ್ಲಿ ಸುಟ್ಟು ಮೃತಪಟ್ಟಿರುವದನ್ನು ನೋಡಿ ಗಾಬರಿಗೊಂಡಿದ್ದಾರೆ. ಅದನ್ನು ನೋಡಿ ಗಾಬರಿಗೊಂಡು ತೆರಳುವಾಗ ದಾರಿಯಲ್ಲಿ ಕುಸಿದು ಬಿದ್ದಿದ್ದಾರೆ.

RELATED ARTICLES  ಅಬ್ಭಾ!!! ಟಿಕೆಟ್ ಇಲ್ಲದೇ ಪ್ರಯಾಣಿಸುವವರಿಗೆ ದಂಡ ಹಾಕಿ ಸಂಗ್ರಹವಾದ ಹಣ ಎಷ್ಟು ಗೊತ್ತಾ?

ಕೂಡಲೆ ಅವರನ್ನು ಮುರ್ಡೇಶ್ವರದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಹೊನ್ನಾವರ ಕರೆದುಕೊಂಡು ಹೋಗುವಾಗ ಮೃತಪಟ್ಟಿದ್ದಾರೆ. ಮೃತಪಟ್ಟಿರುವದನ್ನು ಹೊನ್ನಾವರದ ಖಾಸಗಿ ಆಸ್ಪತ್ರೆಯ ವೈದ್ಯರು ಖಚಿತಪಡಿಸಿದ್ದರು. ಮೃತರ ಬಲಕೆನ್ನೆಯ ಭಾಗ ಉಬ್ಬಿದ್ದು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ ಎಂದು ಮೃತರ ಸಹೋದರ ಉಲ್ಲಾಸ ಮಾಂಜ್ರೆಕರ ಮುರ್ಡೇಶ್ವರ ಠಾಣೆಯಲ್ಲಿ ದೂರು ನೀಡಿದ್ದಾರೆ.