ಕುಮಟಾ : ಅಂಕೋಲಾದಲ್ಲಿ ಕೆಲ ದಿನದ ಹಿಂದೆ ಚಿರತೆ ಮನೆಯ ಸಮೀಪ ಬಂದು ಕೋಳಿಯನ್ನು ತಿಂದು ಹೋದ ಘಟನೆ ವರದಿಯಾಗಿತ್ತು, ಅದಲ್ಲದೆ ಉತ್ತರಕನ್ನಡದ ಹಲವೆಡೆ ವಿವಿಧ ಗ್ರಾಮಗಳಲ್ಲಿ ಚಿರತೆ ಓಡಾಟದ ಸುದ್ದಿಯಾಗಿತ್ತು.
ಇಂದು ತಾಲೂಕಿನ ಬಾಡ ಗ್ರಾಮದ ಹುಬ್ಬಣಗೇರಿಯ ಪದವಿಪೂರ್ವ ಕಾಲೇಜಿನ ಹಿಂಭಾಗದ ಕಡಲತೀರದಲ್ಲಿ ಚಿರತೆಯ ಮೃತ ದೇಹ ಪತ್ತೆಯಾಗಿದ್ದು ಜನರಲ್ಲಿ ಆಶ್ಚರ್ಯ ತಂದಿದೆ.
ಸಮುದ್ರಲ್ಲಿ ತೇಲಿ ಬಂದ ಚಿರತೆಯ ಮೃತ ದೇಹ ಕಡತೀರದಲ್ಲಿ ಬಿದ್ದಿದ್ದು, ಇದನ್ನ ನೋಡಿದ ಸ್ಥಳೀಯರು ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ತಿಳಿಸಿದ್ದಾರೆ.
ಮೃತ ಚಿರತೆಯ ದೇಹದಲ್ಲಿ ಯಾವುದೇ ಗಾಯವಾಗಿರುವುದು ಕಂಡ ಬಂದಿಲ್ಲ ಹೀಗಾಗಿ ಸಾವಿನ ನಿಖರ ಮಾಹಿತಿಯು ಇಲಾಖೆಯ ವರದಿಯ ನಂತರ ತಿಳಿದುಬರಬೇಕಿದೆ.
ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು ಪರಿಶೀಲನೆ ನಡೆಸಿ ಮೃತ ಚಿರತೆಯನ್ನ ಪರೀಕ್ಷೆಗೆ ಒಳಪಡಿಸಿದ್ದಾರೆ.ಚಿರತೆ ಹೇಗೆ ಸತ್ತಿರಬಹುದು ಎಂಬ ಬಗ್ಗೆ ಇದುವರೆಗೆ ನಿಖರ ಮಾಹಿತಿ ತಿಳಿದುಬಂದಿಲ್ಲ.