ಶಿರಸಿ :ಐ.ಸಿ.ಎ.ಐ.ನಡೆಸುವ ಈ ವರ್ಷದ ಚಾರ್ಟರ್ಡ್ ಅಕೌಂಟೆನ್ಸಿಯ (ಸಿ.ಎ.)ಪರೀಕ್ಷೆಯಲ್ಲಿ ಶಿರಸಿ ತಾಲೂಕಿನ ಕಡವೆ ಗ್ರಾಮದ ವರುಣ(ವಿಕಾಸ)ಭಟ್ಟ ಉತ್ತಮ ಅಂಕಗಳನ್ನು ಪಡೆದು ಉತ್ತೀರ್ಣನಾಗುವುದರೊಂದಿಗೆ ಕಲಿತ ವಿದ್ಯಾ ಸಂಸ್ಥೆಗಳಿಗೆ,ಊರಿಗೆ ಕೀರ್ತಿ ತಂದಿದ್ದಾನೆ.
ಬಾಲ್ಯದಿಂದಲೂ ಆದರ್ಶ ವಿದ್ಯಾರ್ಥಿಯಾಗಿರುವ ಈತನು ಭೈರುಂಬೆ ಶ್ರೀ ಶಾರದಾಂಬಾ ಹೈಸ್ಕೂಲ್,ಶಿರಸಿಯ ಚೈತನ್ಯ ಪದವಿ ಪೂರ್ವ ಕಾಲೇಜ ವಿದ್ಯಾರ್ಥಿಯಾಗಿದ್ದು , ಎಮ್.ಇ.ಎಸ್.ಕಾಲೇಜನಲ್ಲಿ ಬಿ.ಕಾಂ.ಪದವಿ ಪಡೆದು ಶಿರಸಿಯ ನುರಿತ ಸಿ.ಎ.ಮಂಜುನಾಥ ಶೆಟ್ಟಿ ಅವರ ಮಾರ್ಗದರ್ಶನ ದಲ್ಲಿ ಆರ್ಟಿಕಲ್ ಶಿಪ್ ಪೂರೈಸಿರುತ್ತಾರೆ.
ಯಶೋಧಾ ಭಟ್ಟ ಮತ್ತು ವೆಂಕಟ್ರಮಣ ಚಂದ್ರಮೌಳೇಶ್ವರ ಭಟ್ಟ ಕಡವೆ ದಂಪತಿಯ ಪುತ್ರನಾಗಿರುವ ಈತನ ಸಾಧನೆಗೆ ಗುರು ವೃಂದದವರು, ಪಾಲಕರು,ಹಿತೈಷಿಗಳು ಸಂತಸ ವ್ಯಕ್ತಪಡಿಸಿ ಅಭಿನಂದಿಸಿ ಶುಭಕೋರಿದ್ದಾರೆ.