.ಕುಮಟಾ: ತಾಲೂಕಾ ಮಟ್ಟದ ದೈಹಿಕ ಶಿಕ್ಷಕರ ಕಾರ್ಯಾಗಾರ ನೆಲ್ಲಿಕೇರಿಯ ಪಬ್ಲಿಕ್ ಸ್ಕೂಲ್ ಸಭಾಭವನದಲ್ಲಿ ನಡೆಯಿತು. ಕಾರ್ಯಾಗಾರವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀ ರಾಜೇಂದ್ರ ಭಟ್ಟ ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಶಿಕ್ಷಣ ಕ್ಷೇತ್ರದಲ್ಲಿ ದೈಹಿಕ ಶಿಕ್ಷಣಕ್ಕೆ ಅದರದ್ದೇ ಆದ ಮಹತ್ವವಿದೆ. ಕೋವಿಡ್-19 ರ ಸಂದರ್ಭದಲ್ಲಿ ದೈಹಿಕ ಶಿಕ್ಷಕರ ಜವಾಬ್ಧಾರಿ ಹೆಚ್ಚಿದೆ. ಎಲ್ಲಿ ದೈಹಿಕ ಶಿಕ್ಷಕರಿದ್ದಾರೋ ಅಲ್ಲಿ ಉತ್ತಮ ಶೈಕ್ಷಣಿಕ ವಾತಾವರಣವಿರುವುದನ್ನು ನಾವು ಗಮನಿಸಿದ್ದೇವೆ. ಇಂತಹ ಕಾರ್ಯಾಗಾರಗಳು ಶಿಕ್ಷಕರ ಸಾಮರ್ಥ್ಯ ವೃದ್ಧಿಗೆ ಪೂರಕವಾಗಿವೆ. ಇದರ ಪ್ರಯೋಜನವ‌ನ್ನು ಎಲ್ಲರೂ ಪಡೆದುಕೊಳ್ಳಿ ಎಂದರು.

IMG 20210202 WA0005

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾದ ಶ್ರೀ ಆನಂದು ಗಾಂವಕರ್ ರವರು ದೈಹಿಕ ಶಿಕ್ಷಕರ ಬೇಡಿಕೆಗೆ ನಮ್ಮ ಸಂಪೂರ್ಣ ಬೆಂಬಲವಿದೆ. ಅವರ ನ್ಯಾಯಯುತವಾದ ಬೇಡಿಕೆಗಳು ಆದಷ್ಟು ಶೀಘ್ರವಾಗಿ ಈಡೇರಬೇಕು. ಎಂದರು. ಕ್ಷೇತ್ರ ಸಮನ್ವಯಾಧಿಕಾರಿ ಶ್ರೀಮತಿ ರೇಖಾ ನಾಯ್ಕ ಅಧ್ಯಕ್ಷತೆ ವಹಿಸಿ ಮಾತನಾಡಿ ಕಾರ್ಯಾಗಾರ ಅರ್ಥಪೂರ್ಣ ವಾಗಿ ನಡೆಯಲಿ. ಎನ್ನುತ್ತಾ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಶ್ರೀ ರವೀಂದ್ರ ಭಟ್ಟ ಸೂರಿ ಹಾಗೂ ನಿವೃತ್ತ ದೈಹಿಕ ಶಿಕ್ಷಕಿ ಶ್ರೀಮತಿ ಸುಲೇಖಾ ನಾಯಕ ರವರನ್ನು ಸನ್ಮಾನಿಸಲಾಯಿತು.

RELATED ARTICLES  ಹೊರಟು ಹೋದ ಜಯಾ ಯಾಜಿ ಶಿರಾಲಿ

ಸನ್ಮಾನಿತರ ಪರವಾಗಿ ಅನಿಸಿಕೆ ವ್ಯಕ್ತ ಪಡಿಸಿದ ಗ್ರೇಡ್-2 ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ರವೀಂದ್ರ ಭಟ್ಟ ಸೂರಿಯವರು ದೈಹಿಕ ಶಿಕ್ಷಕರನ್ನು ಸಹ ಶಿಕ್ಷಕರೆಂದು ಪರಿಗಣಿಸಬೇಕು. ಪ್ರತಿ ಹಿರಿಯ ಪ್ರಾಥಮಿಕ ಶಾಲೆಗೂ ಒಬ್ಬ ದೈಹಿಕ ಶಿಕ್ಷಕರನ್ನು ನೇಮಿಸಬೇಕು. ವರ್ಗಾವಣಾ ನಿಯಮದಲ್ಲಿ ಬದಲಾವಣೆ ಮಾಡಬೇಕು ಮುಂತಾದ ಬೇಡಿಕೆಗಳನ್ನಿಟ್ಟುಕೊಂಡು ಗ್ರೇಡ್-2 ಸಂಘ ಸಂಬಂಧಪಟ್ಟವರನ್ನು ಸಂಪರ್ಕಿಸುತ್ತಿದೆ. ಎಲ್ಲರ ಸಹಕಾರದಿಂದ ಬೇಡಿಕೆ ಈಡೇರುವ ಭರವಸೆಯಿದೆ. ಮಾರ್ಚನಲ್ಲಿ ಕುಮಟಾದಲ್ಲಿ ರಾಜ್ಯ ಸಮ್ಮೇಳನ ನಡೆಸಿ ಈ ಕುರಿತು ಮಾನ್ಯ ಶಿಕ್ಷಣ ಮಂತ್ರಿಗಳು ಹಾಗೂ ಜನಪ್ರತಿನಿಧಿಗಳು ಹಾಗೂ ವಿವಿಧ ಸಂಘಗಳ ರಾಜ್ಯಾಧ್ಯಕ್ಷರ ಗಮನಸೆಳೆಯಲಾಗುವುದು ಎಂದರು. ದೈಹಿಕ ಶಿಕ್ಷಣ ಪರಿವೀಕ್ಷಕರಾದ ಶ್ರೀ ವಿಠೋಬ ನಾಯಕ್, ತಾಲೂಕಾ ಗ್ರೇಡ್-2 ಸಂಘದ ಅಧ್ಯಕ್ಷರಾದ ಶ್ರೀ ದೀಪಕ ನಾಯಕ್ ಉಪಸ್ಥಿತರಿದ್ದರು. ದೈಹಿಕ ಶಿಕ್ಷಕರಾದ ಶ್ರೀಮತಿ ಶಶಿಕಲಾ ನಾಯಕ್ ಪ್ರಾರ್ಥಿಸಿದರು, ಶ್ರೀ ಸುನೀಲ್ ಅಂಬಿಗ ಸ್ವಾಗತಿಸಿದರು ಶ್ರೀಮತಿ ಶ್ಯಾಮಲಾ ಪಟಗಾರ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಿಕ್ಷಕರ ಸಂಘದ ಉಪಾಧ್ಯಕ್ಷರಾದ ಶ್ರೀ ಕೃಷ್ಣಮೂರ್ತಿ ನಾಯಕ್ ವಂದಿಸಿದರು. ಶ್ರೀ ವಸಂತ ಶ್ಯಾನಭಾಗ ನಿರೂಪಿಸಿದರು. ಶ್ರೀ ಜಯರಾಜ್ ಶೇರೇಗಾರ ಹಾಗೂ ಶ್ರೀ ನಾರಾಯಣ ಸ್ವಾಮಿ ಸಂಪನ್ಮೂಲ ವ್ಯಕ್ತಿಗಳಾಗಿ ಕಾರ್ಯಾಗಾರ ನಡೆಸಿಕೊಟ್ಟರು.

RELATED ARTICLES  ಕಾರವಾರದ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ ಉಸ್ತುವಾರಿ ಸಚಿವ ಹೆಬ್ಬಾರ್