ಕುಮಟಾ: ಗೊಯ್ದನಹಳ್ಳಿ ನಾಮಧಾರಿ ಸಂಘದ 19 ನೇ ವರ್ಷದ ಪ್ರತಿಭಾ ಪುರಸ್ಕಾರ ಸಮಾರಂಭ ತಾಲೂಕಿನ ಬಾಡದ ಜನತಾ ವಿದ್ಯಾಲಯದ ಪ್ರೌಢಶಾಲೆಯಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಹೊನ್ನಾವರದ ಧರ್ಮಸ್ಥಳ ಮಂಜುನಾಥೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ಪ್ರಾಂಶುಪಾಲ ಡಾ. ವಿಜಯಲಕ್ಷ್ಮಿ ಎಮ್. ನಾಯ್ಕ ಉದ್ಘಾಟಿಸಿದರು.

ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಯಾಗಿ ಆಗಮಿಸಿದ್ದ ಎಚ್. ಆರ್ ನಾಯ್ಕ ಕೊನಳ್ಳಿ ಮಾತನಾಡಿ, ಇಂದಿನ ಯುವಕರು ಸ್ಪರ್ಧಾತ್ಮಕ ಪರೀಕ್ಷೆಗಳತ್ತ ಹೆಚ್ಚಿನ ಗಮನ ಹರಿಸಬೇಕು. ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಲ್ಲಿ ಅತ್ಯುತ್ತಮ ಸಾಧನೆ ಮಾಡುವ ಮೂಲಕ ಸಮಾಜಕ್ಕೆ ಉತ್ತರ ಹೆಸರನ್ನು ತಂದುಕೊಡಬೇಕು ಎಂದರು.

RELATED ARTICLES  ಕುಮಟಾದಲ್ಲಿ ಕೊಂಕಣಿ ಮಾನ್ಯತಾ ದಿವಸ್ ಆಚರಣೆಗೆ ಸಿದ್ಧತೆ: ಅಗಸ್ಟ 20ರಂದು ಕಾರ್ಯಕ್ರಮ.

ಕಳೆದ ಶೈಕ್ಷಣಿಕ ವರ್ಷದಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ಯಲ್ಲಿ ಗರಿಷ್ಟ ಅಂಕ ಪಡೆದವರಿಗೆ ಗೊಯ್ದನಹಳ್ಳಿ ಸಂಘದಿಂದ ಪ್ರೋತ್ಸಾಹ ಧನ ನೀಡಿ, ಗೌರವಿಸಲಾಯಿತು. ರಾಷ್ಟ್ರಮಟ್ಟದಲ್ಲಿ ಮಿಂಚಿದ ಸ್ಥಳೀಯ ಪ್ರತಿಭೆ, ಭಾರತೀಯ ಕಿರಿಯರ ವಿಭಾಗದ ಕಬಡ್ಡಿ ತಂಡದ ಆಟಗಾರ ಲೋಹಿತ ಧರ್ಮ ನಾಯ್ಕ ಹಾಗೂ ನಿವೃತ್ತ ಸೈನಿಕರಾದ ವಿನಾಯಕ ದಾಸು ನಾಯ್ಕ ಅವರಿಗೆ ಸನ್ಮಾನಿಸಿ, ಗೌರವಿಸಲಾಯಿತು.

RELATED ARTICLES  ದೇಶೋನ್ನತಿಯ ಕನಸು ಕಟ್ಟಲು ಬನ್ನಿ:ಎನ್.ಆರ್.ಗಜು

ಈ ಸಂದರ್ಭದಲ್ಲಿ ಗೊಯ್ದನಹಳ್ಳಿ ನಾಮಧಾರಿ ಸಂಘದ ಅಧ್ಯಕ್ಷ ಜೆ.ಎಸ್. ನಾಯ್ಕ, ಮುಖ್ಯ ಅಥಿತಿಯಾಗಿ ಆಗಮಿಸಿದ್ದ ಎಸ್.ಎಮ್. ನಾಯ್ಕ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಗ್ರಾಮ ಪಂಚಾಯತ ಸದಸ್ಯ ಮಂಜುನಾಥ ನಾಯ್ಕ ಸ್ವಾಗತಿಸಿದರು. ಬಾಲಚಂದ್ರ ನಾಯ್ಕ ನಿರೂಪಿಸಿದರು